ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಮಾರುತಿ ಸುಜುಕಿ ಕಂಪನಿಯು ಬಿಎಸ್-6 ಎಮಿಷನ್ ಪ್ರಕಾರ ತನ್ನ ಪ್ರಮುಖ ಕಾರುಗಳ ಮಾರಾಟದಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದ್ದು, ಮೊದಲ ಬಾರಿಗೆ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಿತ್ತು.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಈಗಾಗಲೇ ಹೊಸ ಪೆಟ್ರೋಲ್ ಮಾದರಿಯೊಂದಿಗೆ ಮಾರಾಟಕ್ಕೆ ಲಭ್ಯವಿರುವ ವಿಟಾರಾ ಬ್ರೆಝಾ ಶೀಘ್ರದಲ್ಲೇ ಪೆಟ್ರೋಲ್ ಎಂಜಿನ್ ಜೊತೆಗೆ ಸ್ಮಾರ್ಟ್ ಹೈಬ್ರಿಡ್ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮಾದರಿಯಷ್ಟೇ ಇದು ಮೈಲೇಜ್ ಹಿಂದಿರುಗಿಸಲಿದೆ. ಬಿಎಸ್-6 ನಿಯಮ ಜಾರಿಯಿಂದಾಗಿ ಹಲವು ಕಾರು ಕಂಪನಿಗಳು ವಿವಿಧ ಮಾದರಿಯ ಕಾರುಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕೂಡಾ ಬ್ರೆಝಾ ಕಾರಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಎಂಜಿನ್ ಅನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಈ ಹಿಂದೆ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳು ಇದೀಗ ಸ್ಥಗಿತಗೊಂಡಿದ್ದು, ಡೀಸೆಲ್ ಆಯ್ಕೆಯ ಬದಲಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆಯಿಂದಾಗಿ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿ ಎಲೆಕ್ಟ್ರಿಕ್ ಮೋಟಾರ್ ಬಳಕೆಯಾಗಲಿದ್ದು, ಎಂಜಿನ್ ಚಾಲನೆ ನಂತರ ಅದು ಪೆಟ್ರೋಲ್ ಎಂಜಿನ್ ಸಂಪರ್ಕವನ್ನು ಪಡೆದುಕೊಳ್ಳುತ್ತದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಈ ವೇಳೆ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿನ ಇಂಧನ ವ್ಯಯ ತಪ್ಪಿಸುವ ಮೈಲ್ಡ್ ಹೈಬ್ರಿಡ್ ಎಂಜಿನ್ ತಂತ್ರಜ್ಞಾನವು ಈಗಾಗಲೇ ವಿಟಾರಾ ಬ್ರೆಝಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಜೋಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಯಲ್ಲೂ ಹೊಸ ತಂತ್ರಜ್ಞಾನ ಜೋಡಣೆ ಮಾಡಲಿದೆ. ಸದ್ಯ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳಲ್ಲಿ SHVS(ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ) ತಂತ್ರಜ್ಞಾನವು ಬಳಕೆ ಮಾಡಲಾಗುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಗಳ ನಂತರ ಇದೀಗ ಮ್ಯಾನುವಲ್ ಆವೃತ್ತಿಗಳಲ್ಲೂ ಜೋಡಣೆ ಮಾಡುತ್ತಿರುವುದು ಮಹತ್ವದ ಬದಲಾವಣೆ ಕಾರಣವಾಗಲಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಹೊಸ ವಿಟಾರಾ ಬ್ರೆಝಾ ಕಾರಿನಲ್ಲಿ ಅಳವಡಿಸಲು ಉದ್ದೇಶಿಸಲಾಗಿರುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 17.03 ಕಿ.ಮೀ ಮೈಲೇಜ್ ನೀಡುತ್ತಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆಯ ನಂತರ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯ ಮೈಲೇಜ್ ಪ್ರಮಾಣದಲ್ಲಿ 18.76ಕಿ.ಮೀ ಹೆಚ್ಚಳವಾಗಲಿದ್ದು, SHVS ಹೈಬ್ರಿಡ್ ತಂತ್ರಜ್ಞಾನವು 12ವಿ ಹೈಬ್ರಿಡ್ ಸಿಸ್ಟಂ ಜೊತೆ 1.76 ಕೆವಿ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿದೆ. ಹೊಸ ಕಾರು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದ್ದು, ಇದು ಆಟೋಮ್ಯಾಟಿಕ್ ಆವೃತ್ತಿಗಿಂತಲೂ ತುಸು ದುಬಾರಿಯಾಗಿರಲಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಇನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹೊಸ ಕಾರು ಇದೀಗ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನ ಬೆಲೆಗಳು ಆಕರ್ಷಕವಾಗಿವೆ. ಹೊಸ ವಿಟಾರಾ ಬ್ರೆಝಾ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.34 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.40 ಲಕ್ಷ ಬೆಲೆ ಪಡೆದುಕೊಂಡಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಹೊಸ ಪೆಟ್ರೋಲ್ ಕಾರಿನ ಬೆಲೆಯು ಈ ಹಿಂದಿನ ಡೀಸೆಲ್ ಮಾದರಿಯ ಬೆಲೆಗಳಿಗೆ ಸಮನಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಎಟಿ, ಜೆಡ್ಎಕ್ಸ್ಐ, ಜೆಡ್ಎಕ್ಸ್ಐ ಎಟಿ, ಜೆಡ್ಎಕ್ಸ್ಐ ಪ್ಲಸ್, ಜೆಡ್ಎಕ್ಸ್ಐ ಪ್ಲಸ್ ಎಟಿ, ಜೆಡ್ಎಕ್ಸ್ಐ ಪ್ಲಸ್ ಎಟಿ ಡ್ಯುಯಲ್ ಕಲರ್ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಇದಲ್ಲದೆ ಹೊಸ ವಿಟಾರಾ ಬ್ರೆಝಾದಲ್ಲಿ ಬಳಕೆ ಮಾಡಿರುವ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ ಮಾದರಿಯನ್ನು ಈಗಾಗಲೇ ಎರ್ಟಿಗಾ ಎಕ್ಸ್ಎಲ್6 ಮತ್ತು ಸಿಯಾಜ್ ಕಾರುಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ವಿಟಾರಾ ಬ್ರೆಝಾ ಮ್ಯಾನುವಲ್ ವರ್ಷನ್

ಈ ಮೂಲಕ ಹೊಸ ಪೆಟ್ರೋಲ್ ಎಂಜಿನ್ ಮಾದರಿಯು 105-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ.

Most Read Articles

Kannada
English summary
Maruti Brezza BS6 Manual Variants To Get Smart Hybrid System. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X