ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಇಟಲಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮವೊಂದರಲ್ಲಿ ಮಸೆರಾಟಿ ಕಂಪನಿಯ ಹೊಸ ಎಂಸಿ 20 ಸ್ಪೋರ್ಟ್ಸ್ ಕಾರನ್ನು ಔಪಚಾರಿಕವಾಗಿ ಅನಾವರಣಗೊಳಿಸಲಾಗಿದೆ. ಇಟಲಿ ಮೂಲದ ಮಸೆರಾಟಿ ಕಂಪನಿ ಕಾರುಗಳು ಹೆಚ್ಚಿನ ಪರ್ಫಾಮೆನ್ಸ್ ಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ.

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಈ ನಿಟ್ಟಿನಲ್ಲಿ ಕಂಪನಿಯು ಇಂದು ತನ್ನ ಕಾರು ವ್ಯವಹಾರವನ್ನು ಮುಂದಿನ ಹಂತಕ್ಕೆ ಸಾಗಿಸುವ ಯೋಜನೆಯನ್ನು ಪ್ರಕಟಿಸಿದೆ. ಮಸೆರಾಟಿ ಕಂಪನಿಯು ಹೊಸ ಸ್ಪೋರ್ಟ್ಸ್ ಕಾರ್ ಅನ್ನು ಅನಾವರಣಗೊಳಿಸುವ ಮೂಲಕ ಹೊಸ ಅಧ್ಯಾಯವನ್ನು ಆರಂಭಿಸಿದೆ. ಕಂಪನಿಯು ಮತ್ತೆ ಮೋಟಾರ್ ರೇಸಿಂಗ್‌ನಲ್ಲಿ ಭಾಗವಹಿಸುವುದಾಗಿ ಘೋಷಿಸಿದೆ.

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಮಸೆರಾಟಿಯ ಹೊಸ ಕಾರಿನ ಅನಾವರಣ ಕಾರ್ಯಕ್ರಮವನ್ನು ಇಟಲಿಯ ಸಾಂಪ್ರದಾಯಿಕ ಮೊಡೆನಾ ಮೋಟಾರ್ ರೇಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ವೆಬ್ ಪೇಜ್ ಮೂಲಕ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಹೊಸ ಅಧ್ಯಾಯವನ್ನು ಆರಂಭಿಸಲು ಮಸೆರಾಟಿ ಕಂಪನಿಯು ಈ ಕಾರ್ಯಕ್ರಮದ ಮೂಲಕ ಹೊಚ್ಚ ಹೊಸ ಎಂಸಿ 20 ಸ್ಪೋರ್ಟ್ಸ್ ಕಾರ್ ಮಾದರಿಯನ್ನು ಜಾಗತಿಕವಾಗಿ ಸಾರ್ವಜನಿಕರಿಗೆ ಅನಾವರಣಗೊಳಿಸಿದೆ.

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಹೊಸ ಟೆಕ್ನಾಲಜಿಯನ್ನು ಹೊಂದಿರುವ ಈ ಕಾರು 2004ರಲ್ಲಿ ಬಿಡುಗಡೆಯಾದ ಎಂಸಿ 12 ಸೂಪರ್ ಕಾರಿನ ಬದಲಿಗೆ ಬಿಡುಗಡೆಯಾಗಲಿದೆ. ಮಸೆರಾಟಿ ಎಂಸಿ 12 ಕಾರು ಫೆರಾರಿ ಎಂಜೊ ಕಾರಿನ ಮೇಲೆ ಆಧಾರಿತವಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಈ ಕಾರನ್ನು ಮಸೆರಾಟಿ ಕಂಪನಿಯು 100%ನಷ್ಟು ತನ್ನ ಸ್ವಂತ ಟೆಕ್ನಾಲಜಿ ಹಾಗೂ ಆರ್ಕಿಟೆಕ್ಚರ್ ಮೂಲಕ ತಯಾರಿಸಿದೆ. ಮಸೆರಾಟಿ ಈ ಕಾರಿನ ಮೂಲಕ ಮತ್ತೆ ಕಾರ್ ರೇಸಿಂಗ್ ನಲ್ಲಿ ಭಾಗವಹಿಸಲಿದೆ. ಎಂಸಿ 12 ಕಾರಿನಂತೆ ಈ ಕಾರು ಸಹ ಸಾರ್ವಜನಿಕ ರಸ್ತೆಗಳಿಗಾಗಿ ಹಾಗೂ ರೇಸ್‌ಟ್ರಾಕ್‌ಗಳಿಗಾಗಿ ಎರಡು ಮಾದರಿಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಹೊಸ ಮಸೆರಾಟಿ ಎಂಸಿ 20 ಕಾರಿನಲ್ಲಿ 3.0 ಲೀಟರಿನ ವಿ 6 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ. ನೆಪ್ಚೂನ್ ಎಂದು ಹೆಸರಿಸಲಾದ ಈ ಎಂಜಿನ್ 621 ಬಿಹೆಚ್‌ಪಿ ಪವರ್ ಹಾಗೂ 730 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದುವ ಅವಕಾಶವಿರುವುದರಿಂದ, ಈ ಕಾರನ್ನು ಹೈಬ್ರಿಡ್ ಮಾದರಿಯಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಈ ಕಾರು ಫಾರ್ಮುಲಾ -1 ಸೇರಿದಂತೆ ವಿವಿಧ ಕಾರ್ ರೇಸ್‌ಗಳಲ್ಲಿ ಬಳಸುವ ಎಲ್ಲಾ ಟೆಕ್ನಿಕಲ್ ಫೀಚರ್ ಗಳನ್ನು ಹೊಂದಿದೆ. ಕಾರ್ಬನ್ ಚಾಸಿಸ್ ನೊಂದಿಗೆ ನಿರ್ಮಿಸಲಾಗಿರುವ ಈ ಕಾರು ಮೊದಲ ಬಾರಿಗೆ ಮಸೆರಾಟಿ ಕಂಪನಿಯ ಬಟರ್ ಫ್ಲೈ ಶೇಪಿನ ಡೋರ್ ಸಿಸ್ಟಂ ಅನ್ನು ಹೊಂದಿದೆ.

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಮಸೆರಾಟಿಯ ಸ್ಲೀಕ್ ರೇಡಿಯೇಟರ್ ಗ್ರಿಲ್ ಸಿಸ್ಟಂ ಕಡಿಮೆ ಲುಕ್ ಮೂಲಕ ದೊಡ್ಡ ಏರ್ ಇನ್ ಟೇಕ್ ಹೊಂದಿದೆ. ಸೈಡ್ ಪ್ರೊಫೈಲ್ ನಲ್ಲಿ ಆಕರ್ಷಕ ವಿನ್ಯಾಸದ ದೊಡ್ಡ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಈ ಕಾರು 10.1 ಇಂಚಿನ ಟಚ್ ಸ್ಕ್ರೀನ್ ಹೊಂದಿರುವ ಇನ್ಫೋಟೇನ್ ಮೆಂಟ್ ಸಿಸ್ಟಂ ಹೊಂದಿದೆ. ಮಸೆರಾಟಿಯ ಕನೆಕ್ಟೆಡ್ ಟೆಕ್ನಾಲಜಿಯ ಮೂಲಕ ಈ ಕಾರು ಸುಧಾರಿತ ಡ್ರೈವಿಂಗ್ ಅನುಭವವನ್ನು ನೀಡುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಎಂಸಿ 20 ಸ್ಪೋರ್ಟ್ಸ್ ಕಾರು ಅನಾವರಣಗೊಳಿಸಿದ ಮಸೆರಾಟಿ

ಈ ಸ್ಪೋರ್ಟ್ಸ್ ಕಾರನ್ನು ಮಸೆರಾಟಿಯ ವಿಲೇ ಸಿರೋ ಮೆನೊಟ್ಟಿ ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು. ಈ ಘಟಕವನ್ನು ಅತ್ಯಾಧುನಿಕ ನಿರ್ಮಾಣ, ಎಂಜಿನ್ ತಪಾಸಣೆ ಹಾಗೂ ಪೇಂಟಿಂಗ್ ಘಟಕಗಳೊಂದಿಗೆ ಅಪ್ ಡೇಟ್ ಮಾಡಲಾಗಿದೆ. ಈ ಹೊಸ ಸ್ಪೋರ್ಟ್ಸ್ ಕಾರನ್ನು ಮುಂದಿನ ವರ್ಷದಿಂದ ಉತ್ಪಾದಿಸಲಾಗುವುದು. ವರದಿಗಳ ಪ್ರಕಾರ ಈ ಕಾರನ್ನು ಗೇಬ್ರಿಯೋಲ್ ಸೇರಿದಂತೆ ಹಲವು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಬೆಲೆ 2 ಮಿಲಿಯನ್ ಡಾಲರ್ ಗಳಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Maserati unveils MC20 sports car globally. Read in Kannada.
Story first published: Thursday, September 10, 2020, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X