Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸೂಪರ್ ಕಾರನ್ನು ಬಹಿರಂಗಪಡಿಸಿದ ಮೆಕ್‌ಲಾರೆನ್
ಸೂಪರ್ ಕಾರು ಹಾಗೂ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಮೆಕ್‌ಲಾರೆನ್ ತನ್ನ ಹೊಸ ಸಬ್ರೆ ಹೈಪರ್ ಕಾರ್ ಅನ್ನು ಬಹಿರಂಗಪಡಿಸಿದೆ. ಮೆಕ್‌ಲಾರೆನ್ ಕಂಪನಿಯ ಬ್ರಿಟಿಷ್ ಮಾರ್ಕ್ಯೂ ಅಧಿಕೃತ ಮಾರಾಟಗಾರರಾದ ಬೆವರ್ಲಿ ಹಿಲ್ಸ್, ಈ ಸೂಪರ್ ಕಾರನ್ನು ಬಹಿರಂಗಪಡಿಸಿದೆ.

ಈ ಆಕರ್ಷಕ ಸೂಪರ್ ಕಾರು ಅಮೆರಿಕಾ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗಲಿದೆ. ಮೆಕ್‌ಲಾರೆನ್ ಕಂಪನಿಯು ಈ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲಿದ್ದು, ಕೇವಲ 15 ಯೂನಿಟ್'ಗಳನ್ನು ಮಾತ್ರ ಉತ್ಪಾದಿಸಲಿದೆ.

ತನ್ನ ಹೊಸ ಐಡಿಯಾಗಳನ್ನು ಸುಲಭವಾಗಿ ಬಳಸಿಕೊಳ್ಳಲು ಈ ಸೂಪರ್ ಕಾರನ್ನು ಅಮೇರಿಕಾದಲ್ಲಿ ಮಾತ್ರ ಬಿಡುಗಡೆಗೊಳಿಸಲಾಗುವುದು ಎಂದು ಮೆಕ್‌ಲಾರೆನ್ ಕಂಪನಿ ಹೇಳಿದೆ. ಈ ಕಾರಣಕ್ಕೆ ಕಂಪನಿಯು ಈ ಕಾರನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳಿಸುತ್ತಿಲ್ಲ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಬ್ರೆ ಕಾರಿನ ಪ್ರತಿಯೊಂದು ಯೂನಿಟ್ ಅನ್ನು ಮೆಕ್‌ಲಾರೆನ್ ಸ್ಪೆಷಲ್ ಆಪರೇಷನ್ ಮೂಲಕ ನಿಮಿಸಲಾಗುತ್ತದೆ. ಈ ಕಾರು ಉತ್ಪಾದನೆಯು ಬೆಸ್‌ಪೋಕ್ ಯೋಜನೆಯಾಗಿರುತ್ತದೆ ಎಂಬುದು ವಿಶೇಷ.

ಮೆಕ್‌ಲಾರೆನ್ ಕಂಪನಿಯು ಸಬ್ರೆ ಕಾರಿನಲ್ಲಿ ತನ್ನದೇ ಆದ ಟೈಡ್ ಅಂಡ್ ಟ್ರೂ ಟ್ವಿನ್-ಟರ್ಬೊ 4.0-ಲೀಟರಿನ ವಿ 8 ಎಂಜಿನ್ ಅಳವಡಿಸಲಿದೆ. ಈ ಎಂಜಿನ್ ಇತರ ನಾನ್ ಹೈಬ್ರಿಡ್ ಮೆಕ್‌ಲಾರೆನ್ ಕಾರುಗಳಿಗಿಂತ ಹೆಚ್ಚಿನ ಪವರ್ ಅನ್ನು ನೀಡುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಎಂಜಿನ್ 820 ಬಿಹೆಚ್‌ಪಿ ಪವರ್ ಹಾಗೂ 820 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ. ಈ ಶಕ್ತಿಯುತ ಎಂಜಿನ್'ನಿಂದಾಗಿ ಈ ಸೂಪರ್ ಕಾರು ಗಂಟೆಗೆ ಗರಿಷ್ಠ 351 ಕಿ.ಮೀ ವೇಗದಲ್ಲಿ ಸಾಗಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಸಬ್ರೆ ಎರಡು ಸೀಟುಗಳನ್ನು ಹೊಂದಿರುವ ಮೆಕ್‌ಲಾರೆನ್ ಕಂಪನಿಯ ವೇಗದ ಕಾರು. ಈ ಕಾರಿನ ಇತರ ಅಂಕಿಅಂಶಗಳ ಬಗ್ಗೆ ಮೆಕ್‌ಲಾರೆನ್ ಕಂಪನಿಯು ಈಗ ಹೆಚ್ಚಿನ ಮಾಹಿತಿಯನ್ನು ನೀಡದಿದ್ದರೂ, ಕಂಪನಿಯು ಈ ಮೊದಲು ಈ ರೀತಿಯ ವೇಗದ ಕಾರನ್ನು ಉತ್ಪಾದಿಸಿಲ್ಲ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇನ್ನು ಈ ಕಾರಿನ ಲುಕ್ ಬಗ್ಗೆ ಹೇಳುವುದಾದರೆ, ಈ ಕಾರು ಮೆಕ್‌ಲಾರೆನ್ ಕಂಪನಿಯ ಮತ್ತೊಂದು ಕಾರ್ ಆದ ಸೆನ್ನಾಗಿಂತ ಸಾಫ್ಟ್ ಆಗಿ ಕಂಡು ಬಂದರೂ, ಸಾಕಷ್ಟು ವೈಲ್ಡ್ ಆಗಿದೆ. ಈ ಕಾರಿನ ಕೆಲವು ಚಿತ್ರಗಳನ್ನು ಕೆಲ ದಿನಗಳ ಹಿಂದೆ ಬಹಿರಂಗಪಡಿಸಲಾಗಿತ್ತು.

ಈ ಕಾರು ವೆಂಟಿಲೇಟೆಡ್ ಹುಡ್, ದೊಡ್ಡ ಗಾತ್ರದ ಫ್ರಂಟ್ ಸ್ಪಾಯ್ಲರ್, ಡ್ಯುಯಲ್ ಟೋನ್ ಪೇಂಟ್, ವೈಡ್ ಫೆಂಡರ್ಸ್, ಬಟರ್ ಫ್ಲೈ ಡೋರ್, ಎರಡೂ ಬದಿಗಳಲ್ಲಿ ದೊಡ್ಡ ಫಿನ್ ಹಾಗೂ ಏರೋಡೈನಾಮಿಕ್ ಸೈಡ್ ಸ್ಕರ್ಟ್‌ಗಳನ್ನು ಹೊಂದಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇದರ ಜೊತೆಗೆ ಕಂಪನಿಯು ಈ ಕಾರಿನಲ್ಲಿ ಎಂಜಿನ್ ಕವರ್ ಮೂಲಕ ಸೆಂಟ್ರಲ್ ಫಿನ್ ಅನ್ನು ನೀಡಿದೆ. ಈ ಫಿನ್ ದೊಡ್ಡ ಸ್ಪಾಯ್ಲರ್'ಗೆ ಅಂಟಿಕೊಂಡಿದೆ. ಕಂಪನಿಯು ಈ ಕಾರಿನಲ್ಲಿ ಸೆಂಟ್ರಲ್ ಮೌಂಟೆಡ್ ಎಕ್ಸಾಸ್ಟ್ ಹಾಗೂ ದೊಡ್ಡ ಡಿಫ್ಯೂಸರ್'ಗಳನ್ನು ಹೊಂದಿದೆ.