ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎ‍ಎಂಜಿ ಜಿಟಿ 63 ಎಸ್ 4-ಡೋರ್ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಐಷಾರಾಮಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.42 ಕೋಟಿಗಳಾಗಿದೆ.

ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ 4-ಡೋರ್ ಕಾರಿನಲ್ಲಿ 4.0 ಲೀಟರ್, ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 639 ಬಿ‍‍ಹೆಚ್‍ಪಿ ಪವರ್ ಮತ್ತು 900 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 4 ಮ್ಯಾಟಿಕ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ ನಾಲ್ಕು ಚಕ್ರಗಳಿಗೆ ಪವರ್ ಅನ್ನು ನೀಡುತ್ತದೆ.

ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಈ ಐಷಾರಾಮಿ ಕಾರು 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಎಎಂಜಿ ಜಿಟಿ 4-ಡೋರ್ ಕಾರು ಎಎಂಜಿ ಜಿಟಿ ಸ್ಪೋರ್ಟ್ಸ್‌ಕಾರ್‌ನೊಂದಿಗೆ ಹೆಚ್ಚು ಸಾಮ್ಯತೆಯನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಎಎಂಜಿ ಜಿಟಿ ಸ್ಪೋರ್ಟ್ಸ್ ಕಾರು ಮಾದರಿಯ ವಿನ್ಯಾಸ ಅಂಶಗಳನ್ನು ಎಎಂಜಿ ಜಿಟಿ 36 ಎಸ್ ಜಿಟಿ 4-ಡೋರ್ ಕಾರು ಹೊಂದಿದೆ. ಸ್ಪೋರ್ಟ್ಸ್ ಕಾರಿನ ಮಾದರಿಯ ಸ್ಲ್ಯಾಟೆಡ್ ಪನಾಮೆರಿಕಾನಾ ಗ್ರಿಲ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಸರಣಿಯಲ್ಲಿ ಮತ್ತು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ ಕಾರುಗಳಲ್ಲಿ ಅತಿ ವೇಗದ ಸೆಡಾನ್‍ ಎಂಬ ಹೆಗ್ಗಳಿಕೆಗೆ ಈ ಕಾರು ಪಾತ್ರವಾಗಿದೆ.

ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ 4-ಡೋರ್ ಕೊಪೆ ಕಾರಿನ ಇಂಟಿರಿಯರ್‍‍‍ನಲ್ಲಿ ನೂತನ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ನೂತನ ಎಂಬಿ‍‍ಯುಎಕ್ಸ್ ಸಿಸ್ಟಂ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಇದರೊಂದಿಗೆ 12.3 ಇಂಚಿನ ಇನ್ಫೋಟೇನ್‍‍ಮೆಂಟ್ ಡ್ಯುಯಲ್ ಡಿಸ್‍‍ಪ್ಲೇ, ಹೊಸ ಸ್ಟೀಟಿಯರಿಂಗ್ ವ್ಹೀಲ್ ಮತ್ತು ಸೆಂಟರ್ ಕನ್ಸೋಲ್‍ನಲ್ಲಿ ಟಚ್‍‍ಪ್ಯಾಡ್ ಮುಂತಾದ ಫೀಚರ್ಸ್‍‍ಗಳನ್ನು ಹೊಂದಿದೆ. ಈ ಕಾರಿನ ವಿನ್ಯಾಸವು ಸ್ಪೋರ್ಟ್ಸ್ ಕಾರಿನ ಮಾದರಿಯಲ್ಲಿದೆ.

ಆಟೋ ಎಕ್ಸ್‌ಪೋ 2020: ಐಷಾರಾಮಿ ಮರ್ಸಿಡಿಸ್-ಎ‍ಎಂಜಿ ಜಿಟಿ 63 ಎಸ್ ಕಾರು ಬಿಡುಗಡೆ

ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಪೋರ್ಷೆ ಪನಾಮೆರಾ ಕಾರಿಗೆ ಪೈಪೋಟಿಯನ್ನು ನೀಡುತ್ತದೆ. ಈ ಐಷಾರಾಮಿ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ ಕಾರು ಪವರ್‍‍‍ಫುಲ್ ಎಂಜಿನ್‍‍ನೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

Most Read Articles

Kannada
English summary
Mercedes-AMG GT 4-Door Coupé launched at Auto Expo 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X