ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಎಎಂಜಿ ಮಾದರಿಗಳನ್ನು ಸ್ಥಳೀಯವಾಗಿ ತಯಾರಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಮರ್ಸಿಡಿಸ್ ಬೆಂಝ್ ಪರ್ಫಾಮೆನ್ಸ್ ಉಪ-ಬ್ರ್ಯಾಂಡ್ ಆಗಿರುವ ಎಎಂಜಿಯ ಕಾರುಗಳು ಭಾರತಕ್ಕೆ ಸಂಪೂರ್ಣವಾಗಿ ನಿರ್ಮಿತ ಯುನಿಟ್ ಅಥವಾ ಸಿಬಿಯು ಮಾರ್ಗದ ಮೂಲಕ ತರಲಾಗುತ್ತಿದೆ. ಕಂಪನಿಯು ತನ್ನ ಕಾರ್ಯಕ್ಷಮತೆ-ಸ್ಪೆಕ್ ಮಾದರಿಗಳ ಸ್ಥಳೀಯ ಜೋಡಣೆಯನ್ನು ಎಎಂಜಿ ಜಿಎಲ್‌ಸಿ 43 4 ಮ್ಯಾಟಿಕ್ ಕೂಪೆಯೊಂದಿಗೆ ಪ್ರಾರಂಭಿಸಲಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಈ ಕುರಿತು ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಅವರು ಮಾತನಾಡಿ, ಭಾರತದಲ್ಲಿ ಸ್ಥಳೀಯವಾಗಿ ಎಎಂಜಿ ಮಾದರಿಗಳನ್ನು ಉತ್ಪಾದಿಸುವ ನಿರ್ಧಾರವು ಬೆಂಝ್ ಕಂಪನಿ ಭಾರತೀಯ ಗ್ರಾಹಕರಿಗೆ ನಮ್ಮ ಬದ್ಧತೆಯನ್ನು ತಿಳಿಸುತ್ತೇವೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಥಳೀಯವಾಗಿ ತಯಾರಿಸಿ ಎಎಂಜಿ ಮಾದರಿಗಳನ್ನು ಮತ್ತಷ್ಟು ಬಲಪಡಿಸುತ್ತೇವೆ ಎಂದು ಹೇಳಿದರು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಭಾರತೀಯ ಮಾರುಕಟ್ಟೆಯಲ್ಲಿ ಎಎಂಜಿ ಜಿಎಲ್‌ಸಿ 43 ಕೂಪೆ ಒಂದೆರಡು ವರ್ಷಗಳ ಹಿಂದೆ ಮಾರಾಟದಲ್ಲಿತ್ತು. ಈ ಹಳೆಯ ಮಾದರಿಯಲ್ಲಿ 3-ಲೀಟರ್ ವಿ6 ಎಂಜಿನ್ ಅನ್ನು ಅಳವಡಿಸಿದ್ದರು. ಈ ಎಂಜಿನ್ 362 ಬಿಹೆಚ್‌ಪಿ ಪವರ್ ಮತ್ತು 520 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಕಂಪನಿಯು ಎಸ್‌ಯುವಿಯ ಸ್ಥಳೀಯ ಉತ್ಪಾದನೆಯನ್ನು ಯೋಜಿಸುತ್ತಿರುವುದರಿಂದ ವಿಳಂಬವಾಗಬಹುದು. ಹಳೆಯ ಪ್ರಿ-ಫೇಸ್‌ಲಿಫ್ಟ್, ಬಿಎಸ್ 4 ಮಾದರಿಯು ಭಾರತದಲ್ಲಿ ಸುಮಾರು ರೂ.75 ಲಕ್ಷ ಬೆಲೆಯಲ್ಲಿ ಮಾರಾಟವನ್ನು ಮಾಡಿದ್ದರು.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಬಿಡುಗಡೆಯಾಗಲಿರುವ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ 43 ಕೂಪೆಯಲ್ಲಿ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂನ್ನು ಹೊಂದಿರಲಿದೆ. ಇನ್ನು ಕೂಪ್ ಎಸ್‌ಯುವಿ 3.0-ಲೀಟರ್ ವಿ6 ಬಿಟುರ್ಬೊ ಎಂಜಿನ್‌ ಅನ್ನು ಹೊಂದಿರುತ್ತದೆ.

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಈ ಎಂಜಿನ್ 385 ಬಿಹೆಚ್‌ಪಿ ಪವರ್ ಮತ್ತು 520 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ 43 ಕೂಪೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಈ ಬೆಂಝ್ ಜಿಎಲ್‌ಸಿ 43 ಕೂಪೆ ಕೇವಲ 4.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಸಾಧಿಸುತ್ತದೆ. 2019ರಲ್ಲಿ ಎಎಂಜಿ ಬ್ರ್ಯಾಂಡ್ ವರ್ಷದಿಂದ ವರ್ಷಕ್ಕೆ ಶೇ.54ರಷ್ಟು ಬೆಳವಣಿಗೆಯನ್ನು ಕಂಡಿತು.

ಸ್ಥಳೀಯವಾಗಿ ತಯಾರಾಗಲಿವೆ ಮರ್ಸಿಡಿಸ್ ಬೆಂಝ್ ಎಎಂಜಿ ಕಾರುಗಳು

ಪರ್ಫಾಮೆನ್ಸ್ ವಿಭಾಗದಲ್ಲಿ 'ಮೇಡ್ ಇನ್ ಇಂಡಿಯಾ ಎಎಂಜಿ ನಂ.1 ಸ್ಥಾನವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾ ಹೇಳಿಕೊಂಡಿದೆ. ಭಾರತದಲ್ಲಿ ಪ್ರಸ್ತುತ ಎಎಂಜಿ ಪೋರ್ಟ್ಫೋಲಿಯೊ 43, 53, 63, ಮತ್ತು ಜಿಟಿ ಸರಣಿಯ ವಿವಿಧ ಪರ್ಫಾಮೆನ್ಸ್ ವಾಹನಗಳನ್ನು ಒಳಗೊಂಡಿದೆ.

Most Read Articles

Kannada
English summary
Mercedes-Benz India To Locally Manufacture AMG Models. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X