ಆಟೋ ಎಕ್ಸ್‌ಪೋ 2020: ಇ 200 ಅನಾವರಣಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ 2020ರ ಆಟೋ ಎಕ್ಸ್ ಪೋದಲ್ಲಿ ಇ 200 ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿದೆ. ಈ ಚಿಕ್ಕ ಎಲೆಕ್ಟ್ರಿಕ್ ವಾಹನವನ್ನು ಚೀನಾದಲ್ಲಿ ಬೋಜುನ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಇ 200 ಅನಾವರಣಗೊಳಿಸಿದ ಎಂಜಿ ಮೋಟಾರ್

ಇ 200 ಎಲೆಕ್ಟ್ರಿಕ್ ವಾಹನದ ಪ್ರಮುಖ ಆಕರ್ಷಣೆಯೆಂದರೆ ಈ ವಾಹನವು ಚಲಿಸುವ ವ್ಯಾಪ್ತಿ. ಈ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಸುಮಾರು 250 ಕಿ.ಮೀ ಚಲಿಸುತ್ತದೆ ಎಂದು ಹೇಳಲಾಗಿದೆ. ಈ ವ್ಯಾಪ್ತಿಯು ಇಂತಹ ಚಿಕ್ಕ ವಾಹನದಲ್ಲಿ ಸಾಕಷ್ಟು ಹೆಚ್ಚಾಗಿದೆ.

ಆಟೋ ಎಕ್ಸ್‌ಪೋ 2020: ಇ 200 ಅನಾವರಣಗೊಳಿಸಿದ ಎಂಜಿ ಮೋಟಾರ್

ಈ ವ್ಯಾಪ್ತಿಯನ್ನು ನ್ಯೂ ಯೂರೋಪಿಯನ್ ಡ್ರೈವಿಂಗ್ ಸೈಕಲ್ (ಎನ್‍ಇ‍ಡಿ‍‍ಸಿ) ಖಚಿತ ಪಡಿಸಿದೆ. ಆದರೆ ನೈಜ ಸನ್ನಿವೇಶದಲ್ಲಿ ಈ ವ್ಯಾಪ್ತಿಯು ಹೆಚ್ಚು ಕಡಿಮೆಯಾಗುವ ಸಾಧ್ಯತೆಗಳಿವೆ. ಹೆಡ್‍‍ಲ್ಯಾಂಪ್‍‍ಗಳು ತೆಳುವಾಗಿದ್ದರೆ, ಟೇಲ್‍‍ಲ್ಯಾಂಪ್‍‍ಗಳು ಹೆಚ್ಚು ಕಡಿಮೆ ಇದೇ ರೀತಿಯಲ್ಲಿವೆ.

ಆಟೋ ಎಕ್ಸ್‌ಪೋ 2020: ಇ 200 ಅನಾವರಣಗೊಳಿಸಿದ ಎಂಜಿ ಮೋಟಾರ್

ಇದರ ಹೊರತಾಗಿ ಇ200 ಎಲೆಕ್ಟ್ರಿಕ್ ವಾಹನವು ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಈ ವಾಹನದಲ್ಲಿರುವ ವಿಂಡ್‍‍ಶೀಲ್ಡ್ ಚಿಕ್ಕದಾಗಿದೆ. ಈ ಚಿಕ್ಕ ಎಲೆಕ್ಟ್ರಿಕ್ ವಾಹನದಲ್ಲಿ ಕೇವಲ ಇಬ್ಬರು ಮಾತ್ರ ಕುಳಿತುಕೊಳ್ಳಬಹುದಾಗಿದೆ.

ಆಟೋ ಎಕ್ಸ್‌ಪೋ 2020: ಇ 200 ಅನಾವರಣಗೊಳಿಸಿದ ಎಂಜಿ ಮೋಟಾರ್

ಈ ಎಲೆಕ್ಟ್ರಿಕ್ ವಾಹನವು 2,497 ಎಂಎಂ ಉದ್ದ, 1,526 ಎಂಎಂ ಅಗಲ ಹಾಗೂ 1,616 ಎಂಎಂ ಎತ್ತರವನ್ನು ಹೊಂದಿದೆ. ಇಷ್ಟು ಚಿಕ್ಕ ಗಾತ್ರವನ್ನು ಹೊಂದಿರುವ ಇ200 ಎಲೆಕ್ಟ್ರಿಕ್ ವಾಹನವು ಕೇವಲ 3.8 ಮೀಟರ್‍‍ಗಳಲ್ಲಿ ಪೂರ್ಣ ಯು-ಟರ್ನ್ ತೆಗೆದುಕೊಳ್ಳುತ್ತದೆ.

ಆಟೋ ಎಕ್ಸ್‌ಪೋ 2020: ಇ 200 ಅನಾವರಣಗೊಳಿಸಿದ ಎಂಜಿ ಮೋಟಾರ್

ಎಂಜಿ ಇ200 ಕ್ವಾಡ್ರಿ ಸೈಕಲ್ ಆಗಿದೆ. ಈ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಶೀಘ್ರದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಎಂಜಿ ಮೋಟಾರ್ ಕಂಪನಿಯು ತಾನು ಎಲ್ಲಾ ಸೆಗ್‍‍ಮೆಂಟ್‍‍ನಲ್ಲಿಯೂ ವಾಹನಗಳನ್ನು ಬಿಡುಗಡೆಗೊಳಿಸಬಲ್ಲೆ ಎಂಬುದನ್ನು ತೋರಿಸಲು ಈ ವಾಹನವನ್ನು ಪ್ರದರ್ಶಿಸಿರುವ ಸಾಧ್ಯತೆಗಳಿವೆ.

Most Read Articles

Kannada
English summary
MG E200 Unveiled At Auto Expo. Read in Kannada.
Story first published: Saturday, February 8, 2020, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X