ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಎಂಜಿ ಹೆಕ್ಟರ್ ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-4 ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣ ಹೊಂದಲಿರುವ ಹೊಸ ಕಾರು ದುಬಾರಿ ಬೆಲೆ ಪಡೆದುಕೊಳ್ಳುತ್ತಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳನ್ನು ಉನ್ನತೀಕರಿಸಿ ಮಾರಾಟ ಮಾಡುತ್ತಿವೆ. ಇದೀಗ ಎಂಜಿ ಕೂಡಾ ತನ್ನ ಜನಪ್ರಿಯ ಹೆಕ್ಟರ್ ಕಾರನ್ನು ಹೊಸ ನಿಯಮ ಅನುಸಾರ ಉನ್ನತೀಕರಿಸಿದ್ದು, ಹೊಸ ಎಂಜಿನ್ ಪ್ರೇರಿತ ಹೆಕ್ಟರ್ ಬಿಡುಗಡೆ ನಂತರ ದುಬಾರಿ ಬೆಲೆ ಪಡೆದುಕೊಳ್ಳಲಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಬಿಎಸ್-6 ಎಂಜಿನ್‌ನಿಂದಾಗಿ ಹೆಕ್ಟರ್ ಪೆಟ್ರೋಲ್ ಆವೃತ್ತಿಯು ರೂ. 40 ಸಾವಿರದಿಂದ ರೂ.60 ಸಾವಿರದಷ್ಟು ದುಬಾರಿಯಾಗಲಿದ್ದರೆ ಡೀಸೆಲ್ ಎಂಜಿನ್ ಮಾದರಿಯು ರೂ.90 ಸಾವಿರದಿಂದ ರೂ.1.25 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಪೆಟ್ರೋಲ್ ಎಂಜಿನ್‌ಗಿಂತಲೂ ಡೀಸೆಲ್ ಎಂಜಿನ್ ಮಾದರಿಯನ್ನು ಬಿಎಸ್-6 ಎಮಿಷನ್ ನಿಯಮಾವಳಿಗಳಿಗೆ ಉನ್ನತೀಕರಿಸುವುದು ಹೆಚ್ಚು ವೆಚ್ಚದಾಯಕವಾಗಿದ್ದು, ಮಾಲಿನ್ಯ ಹೊರಸೊಸುವಿಕೆಯಲ್ಲಿ ಸುಧಾರಣೆ ತರಲು ಈ ಕಠಿಣ ಕ್ರಮ ಅಗತ್ಯವಾಗಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಈ ಹಿಂದೆ 2017ರಲ್ಲಿ ಬಿಎಸ್-3 ನಿಯಮವನ್ನು ನಿಷೇಧಿಸಿ ಬಿಎಸ್-4 ಎಮಿಷನ್ ನಿಯಮವನ್ನು ಜಾರಿಗೆ ತಂದಿದ್ದ ಕೇಂದ್ರ ಸರ್ಕಾರವು ಇದೀಗ ಯುರೋ-6 ಜಾರಿಗೆ ಬಂದ ನಂತರ ಬಿಎಸ್-6 ಜಾರಿಗೆ ಸಿದ್ದವಾಗಿದ್ದು, ಹೊಸ ನಿಯಮದಿಂದಾಗಿ ಡೀಸೆಲ್ ವಾಹನಗಳ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆಯಾಗುವುದಲ್ಲದೇ ಮೈಲೇಜ್ ಪ್ರಮಾಣದಲ್ಲೂ ಸುಧಾರಣೆಯಾಗಲಿದೆ. ಆದರೆ ಸುಧಾರಿತ ತಂತ್ರಜ್ಞಾನದಿಂದ ದುಬಾರಿ ಬೆಲೆ ಪಡೆದುಕೊಂಡಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದ್ದು, ಮಾಲಿನ್ಯ ತಡೆಗಾಗಿ ಹೊಸ ಬದಲಾಣೆ ಅವಶ್ಯವಾಗಿ ಪರಿಣಮಿಸಿದೆ ಎನ್ನಬಹುದು.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಇನ್ನು ಎಂಜಿ ಮೋಟಾರ್ ಸಂಸ್ಥೆಯು ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವುದಲ್ಲದೇ ಕಾರು ಬಿಡುಗಡೆಗೊಳಿಸಿದ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡ ಅಗ್ರಮಾನ್ಯ ಕಾರು ಸಂಸ್ಥೆಗಳಲ್ಲಿ ಒಂದಾಗಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಆಕರ್ಷಕ ಬೆಲೆಗಳಲ್ಲಿ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್‍, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್‌ಗಳನ್ನು ನೀಡಲಾಗುತ್ತಿದ್ದು, ಎಂಜಿ ಹೆಕ್ಟರ್ ಬೇಡಿಕೆಗೆ ಇದೇ ಪ್ರಮಖ ಕಾರಣವಾಗಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಬಿಎಸ್-4 ವೈಶಿಷ್ಟ್ಯತೆಯ ಹೆಕ್ಟರ್ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12.18 ಲಕ್ಷದಿಂದ ಆರಂಭಿಕ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯು ರೂ.16.88 ಲಕ್ಷ ಬೆಲೆ ಹೊಂದಿದೆ. ಗ್ರಾಹಕ ಬೇಡಿಕೆಗೆ ಅನುಗುಣವಾಗಿ 11 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಅತ್ಯುತ್ತಮ ಎಂಜಿನ್ ಆಯ್ಕೆ ಪಡೆದಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ. ಇದೀಗ ಬರಲಿರುವ ಹೊಸ ಎಂಜಿನ್ ಮತ್ತಷ್ಟು ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಹೆಕ್ಟರ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಬಿಎಸ್-6 ಎಫೆಕ್ಟ್- ದುಬಾರಿ ಬೆಲೆ ಪಡೆದುಕೊಳ್ಳಲಿದೆ 2020ರ ಎಂಜಿ ಹೆಕ್ಟರ್..!

ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

Most Read Articles

Kannada
English summary
MG Hector bs-6 diesel model prices to be up by around Rs 1.25 lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X