ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾಪರ್ ಕಂಪನಿಯು ಹೆಕ್ಟರ್ ಎಸ್‌ಯುವಿ ಮಾದರಿಯನ್ನು ಈಗಾಗಲೇ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿ ಮಾರಾಟಕ್ಕೆ ಚಾಲನೆ ನೀಡಿದ್ದು, ಹೊಸ ಕಾರಿನಲ್ಲಿ ಮೊದಲ ಬಾರಿಗೆ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಡ್ಯುಯಲ್ ವೆರಿಯೆಂಟ್ ಅನ್ನು ಹೆಕ್ಟರ್ ಹೈ ಎಂಡ್ ಆವೃತ್ತಿಯಾದ ಶಾರ್ಪ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದ್ದ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಡ್ಯುಯಲ್ ಟೋನ್ ಪರಿಚಯಿಸಲಾಗಿದೆ. ಡ್ಯುಯಲ್ ಟೋನ್ ಮಾದರಿಯಲ್ಲಿ ಕ್ಯಾಂಡಿ ವೈಟ್ ಮತ್ತು ಗ್ಲೆಜ್ ರೆಡ್ ಆಯ್ಕೆ ಹೊಂದಿದ್ದು, ಡ್ಯುಯಲ್ ಟೋನ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ.20 ಸಾವಿರದಿಂದ ರೂ. 31 ಸಾವಿರದಷ್ಟು ದುಬಾರಿಯಾಗಿದೆ.

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಶಾರ್ಪ್ ವೆರಿಯೆಂಟ್‌ನಲ್ಲಿರುವ 1.5-ಲೀಟರ್ ಪೆಟ್ರೋಲ್ ಹೈಬ್ರಿಡ್, 1.5-ಲೀಟರ್ ಟರ್ಬೋ, 2.0-ಲೀಟರ್ ಟರ್ಬೋ ಡೀಸೆಲ್ ಮ್ಯಾನುವಲ್ ಮಾದರಿಗಳಲ್ಲಿ ಡ್ಯುಯಲ್ ಆವೃತ್ತಿಯು ಖರೀದಿಗೆ ಲಭ್ಯವಿದ್ದು, ಎಕ್ಸ್‌ಶೋರೂಂ ಪ್ರಕಾರ ಕ್ರಮವಾಗಿ ರೂ. 16.84 ಲಕ್ಷ, ರೂ.17.75 ಲಕ್ಷ ಮತ್ತು ರೂ. 18.08 ಲಕ್ಷ ಬೆಲೆ ಹೊಂದಿವೆ.

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊರತುಪಡಿಸಿ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಸಿಂಗಲ್ ಟೋನ್ ಮಾದರಿಯಲ್ಲಿರುವ ಕಾರುಗಳ ಬೆಲೆಯು ಈ ಹಿಂದಿನಂತೆ ಮುಂದಿಸಲಾಗಿದೆ.

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.73 ಲಕ್ಷ ಬೆಲೆ ಹೊಂದಿದ್ದು, 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಇನ್ನು ಹೆಕ್ಟರ್ ಎಸ್‌ಯುವಿ ಬಿಡುಗಡೆ ಮಾಡುವ ಮೂಲಕ ದೇಶಿಯ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿದ ಎಂಜಿ ಮೋಟಾರ್ ಕಂಪನಿಯು ಸದ್ಯ ಗ್ರಾಹಕರ ನೆಚ್ಚಿನ ಕಾರು ಮಾದರಿಗಳ ಪೈಕಿ ಅಗ್ರಸ್ಥಾನದಲ್ಲಿದ್ದು, ಇತ್ತೀಚೆಗೆ ಬಿಡುಗಡೆ ಮಾಡಲಾದ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿ ಕೂಡಾ ಹೊಸ ಸಂಚಲನಕ್ಕೆ ಕಾರಣವಾಗಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯ ಫ್ಲ್ಯಾಗ್‌ಶಿಫ್ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಂಡಿದ್ದ ಹೆಕ್ಟರ್ ಆವೃತ್ತಿಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಇದೀಗ ಹೆಕ್ಟರ್ ಕಾರು ಮಾದರಿಯಲ್ಲಿ ಆನಿವರ್ಸರಿ ಎಡಿಷನ್‌ ಮಾದರಿಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ. ಹೆಕ್ಟರ್ ಕಾರಿನ ಮಧ್ಯಮ ಕ್ರಮಾಂಕದ ಆವೃತ್ತಿಯಾದ ಸೂಪರ್ ವೆರಿಯೆಂಟ್‌ನಲ್ಲಿ ಆನಿವರ್ಸರಿ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಆನಿವರ್ಸರಿ ಎಡಿಷನ್ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದೆ.

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಆನಿವರ್ಸರಿ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಸೂಪರ್ ಮಾದರಿಯೆಂತೆ ಬೆಲೆ ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯ ಬೆಲೆಯನ್ನು ರೂ.13.63 ಲಕ್ಷಕ್ಕೆ ಮತ್ತು ಡೀಸೆಲ್ ಮಾದರಿಯ ಬೆಲೆಯನ್ನು ರೂ. 14.99 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೆಕ್ಟರ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಸ್ಟ್ಯಾಂಡರ್ಡ್ ಸೂಪರ್ ವೆರಿಯೆಂಟ್‌ಗಿಂತಲೂ ಆನಿವರ್ಸರಿ ಎಡಿಷನ್ ಮಾದರಿಯಲ್ಲಿ ಯಾವುದೇ ಹೆಚ್ಚುವರಿ ಬೆಲೆ ಏರಿಕೆಯಿಲ್ಲದೆ ಕೆಲವು ಹೆಚ್ಚುವರಿ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಆನಿವರ್ಸರಿ ಎಡಿಷನ್ ಮಾದರಿಯು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿವೆ.

Most Read Articles

Kannada
English summary
MG Hector dual-tone variant launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X