Just In
Don't Miss!
- News
ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ತೃತೀಯಲಿಂಗಿ ನಾಮನಿರ್ದೇಶನ ಮಾಡಿದ ಬೈಡನ್
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಕ್ಟರ್ ಪ್ಲಸ್ ಕಾರಿನಲ್ಲಿ 7 ಸೀಟರ್ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಎಂಜಿ ಮೋಟಾರ್
ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲೇ ತನ್ನ ಹೆಕ್ಟರ್ ಪ್ಲಸ್ ಮಾದರಿಯಲ್ಲಿ 7 ಸೀಟರ್ ವರ್ಷನ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು ಸಂಕ್ರಾಂತಿ ಸಂಭ್ರಮಾಚರಣೆ ವೇಳೆಗೆ ಖರೀದಿಗೆ ಲಭ್ಯವಿರಲಿದೆ.

ಹೆಕ್ಟರ್ ಪ್ಲಸ್ ಮಾದರಿಯ ಸದ್ಯ ಮಾರುಕಟ್ಟೆಯಲ್ಲಿ 6 ಆಸನ ಸೌಲಭ್ಯಗಳೊಂದಿಗೆ ಮಾರಾಟವಾಗುತ್ತಿದ್ದು, 2+2+2 ಮಾದರಿಯ ಆಸನ ಸೌಲಭ್ಯ ಪಡೆದುಕೊಂಡಿದೆ. ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ನೀಡಲಾಗಿದ್ದು, ಪ್ರತಿ ಆಸನಗಳು ಪ್ರತ್ಯೇಕ ನಿಯಂತ್ರಣ ಹೊಂದಿವೆ. ಆದರೆ ಬಹುತೇಕ ಗ್ರಾಹಕರು ಹೊಸ ಕಾರಿನಲ್ಲಿ ಏಳು ಆಸನ ಸೌಲಭ್ಯವುಳ್ಳ ಮಾದರಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಗ್ರಾಹಕರ ಬೇಡಿಕೆ ಹೊಸ ಕಾರಿನಲ್ಲಿ ಶೀಘ್ರದಲ್ಲೇ 2+3+2 ಮಾದರಿಯ ಆಸನ ಸೌಲಭ್ಯವನ್ನು ಜೋಡಣೆ ಮಾಡಲಿದೆ.

ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಯ ಮುಂದುವರಿದ ಭಾಗವಾಗಿರುವ ಹೆಕ್ಟರ್ ಪ್ಲಸ್ ಮಾದರಿಯನ್ನು ಎಂಪಿಪಿ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಲಾಗಿದ್ದು, ಪ್ರತ್ಯೇಕ ಕ್ಯಾಪ್ಟನ್ ಸೀಟ್ ಸೌಲಭ್ಯದ ಮೂಲಕ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯುತ್ತಿದೆ.

ಆದರೆ ಮಧ್ಯದ ಸಾಲಿನಲ್ಲಿ ಮೂರು ಆಸನದ ಮಾದರಿಗೂ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, 2021ರ ಆವೃತ್ತಿಯಲ್ಲಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 6 ಆಸನ ಮತ್ತು 7 ಆಸನದ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಆಸನ ಸೌಲಭ್ಯದಲ್ಲಿ ಬದಲಾವಣೆ ಹೊರತು ಉಳಿದೆಲ್ಲಾ ತಾಂತ್ರಿಕ ಅಂಶಗಳನ್ನು ಪ್ರಸ್ತುತ ಮಾದರಿಯಲ್ಲಿರುವಂತೆಯೇ ಮುಂದುವರಿಸಲಿದ್ದು, 7 ಆಸದ ಕಾರು ಮಾದರಿಯು 6 ಆಸನ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹೊಸ ಕಾರಿನ ಬೆಲೆ ಮಾಹಿತಿಯು ಕಾರು ಬಿಡುಗಡೆಯ ಸಂದರ್ಭದಲ್ಲಿ ಲಭ್ಯವಾಗಲಿದ್ದು, ಆಸಕ್ತ ಗ್ರಾಹಕರು ಇಂದಿನಿಂದಯೇ ಅಧಿಕೃತವಾಗಿ ಬುಕ್ಕಿಂಗ್ ಸಲ್ಲಿಕೆ ಮಾಡಬಹುದಾಗಿದೆ.

ಇನ್ನು ಸ್ಮಾರ್ಟ್, ಶಾರ್ಪ್ ಮತ್ತು ಸೂಪರ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಹೆಕ್ಟರ್ ಪ್ಲಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.70 ಲಕ್ಷದಿಂದ ಟಾಪ್ ಎಂಡ್ ಮಾದರಿಯು 18.70 ಲಕ್ಷ ಬೆಲೆ ಹೊಂದಿದೆ.

ಸ್ಟೈಲ್ ವೆರಿಯೆಂಟ್ ಸ್ಥಗಿತದ ನಂತರ ಇದೀಗ ಸೂಪರ್ ಡೀಸೆಲ್ ಮ್ಯಾನುವಲ್ ವೆರಿಯೆಂಟ್ ಆರಂಭಿಕ ಕಾರು ಮಾದರಿಯಾಗಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆ ಅನ್ವಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲದೆ ಎಂಪಿವಿ ಕಾರು ಮಾದರಿಗಳಿಗೂ ಪೈಪೋಟಿ ನೀಡುತ್ತಿದ್ದು, ಸ್ಟ್ಯಾಂಡರ್ಡ್ ಹೆಕ್ಟರ್ ಕಾರಿನಲ್ಲಿ ನೀಡಲಾಗಿರುವ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನೇ ಹೆಕ್ಟರ್ ಪ್ಲಸ್‌ನಲ್ಲೂ ಜೋಡಣೆ ಮಾಡಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 170-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದರೆ 1.5-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 143-ಬಿಎಚ್‌ಪಿ ಮತ್ತು ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ 48ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದೆ.

ಹೊಸ ಕಾರಿನಲ್ಲಿ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 7 ಸೀಟರ್ ಹೆಕ್ಟರ್ ಪ್ಲಸ್ ಮಾದರಿಯು ಕೂಡಾ ಆರಾಮದಾಯಕ ಆಸನ ಸೌಲಭ್ಯ ಹೊಂದಿರಲಿದ್ದು, 60:40 ಅನುಪಾತದಲ್ಲಿ ಮಧ್ಯಮ ಸಾಲಿನ ಆಸನವನ್ನು ಮಡಿಕೆ ಮಾಡಬಹುದು. ಹಿಂಭಾಗದ ಸಾಲಿನಲ್ಲಿರುವ ಆಸನವು ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆ 50:50 ಅನುಪಾತ ಹೊಂದಿರಲಿವೆ.