ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಮಾಹಾಮಾರಿ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟವು ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಆಟೋ ಕಂಪನಿಗಳ ಆರ್ಥಿಕ ಸಂಕಷ್ಟದಿಂದ ಹೊರಬರಲು ಹಲವು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಎಂಜಿ ಕಂಪನಿಯು ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಸೇವೆಗಳಿಗೆ ಚಾಲನೆ ನೀಡಿದೆ.

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಸದ್ಯ ಮಾರುಕಟ್ಟೆಯಲ್ಲಿ ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ವಾಹನ ಉತ್ಪಾದನಾ ಕಂಪನಿಗಳು ಪರದಾಡುತ್ತಿವೆ. ಜೊತೆಗೆ ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ಹೊಸ ವಾಹನಗಳ ಖರೀದಿ ಅಷ್ಟಾಗಿ ವೇಗ ಪಡೆದುಕೊಂಡಿಲ್ಲ.

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಕರೋನಾ ವೈರಸ್ ಸಂಕಷ್ಟದಿಂದ ಸದ್ಯಕ್ಕೆ ಹೊಸ ವಾಹನಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ವಿನಾಯ್ತಿ ನಂತರ ಭಾರೀ ಪ್ರಮಾಣದ ವಾಹನ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿರುವುದು ಮತ್ತೊಂದು ಸಂಕಷ್ಟಕ್ಕೆ ಸಿಲುಕಿಸಿದೆ.

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಬುಕ್ಕಿಂಗ್ ಹಣ ವಾಪಸ್‌ ಪಡೆದುಕೊಂಡಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಕರೋನಾ ವೈರಸ್ ಅಬ್ಬರದಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಬಹುದು ಎನ್ನುವ ಭಯದಿಂದ ಹೊಸ ವಾಹನಗಳ ಖರೀದಿ ಯೋಜನೆಯನ್ನು ಮುಂದೂಡುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್‌ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಎಂಜಿ ಮೋಟಾರ್ ಕೂಡಾ ಈ ನಿಟ್ಟಿನಲ್ಲಿ ಈಗಾಗಲೇ ಮೈಲೇಸ್‌ಕಾರ್ ಮತ್ತು ಝೂಮ್ ಕಾರ್ ಸೆಲ್ಪ್ ಡ್ರೈವ್ ಕಾರ್ ರೆಂಟಲ್ ಕಂಪನಿಯ ಜೊತೆಗೂಡಿ ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಜೆಡ್ಎಸ್ ಇವಿ ಕಾರು ಮಾದರಿಯನ್ನು 12, 24, 36 ತಿಂಗಳ ಅವಧಿಗೆ ಲೀಸ್ ನೀಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ಆರಂಭಿಕವಾಗಿ ರೂ. 40 ಸಾವಿರ ಚಂದಾದಾರಿಕೆ ದರವನ್ನು ನಿಗದಿಪಡಿಸಲಾಗಿದ್ದು, ಸೆಲ್ಪ್ ಡ್ರೈವ್ ಕಾರ್ ರೆಂಟಲ್ ಪಡೆದುಕೊಳ್ಳುವ ಗ್ರಾಹಕರನ್ನು ಕನಿಷ್ಠ 12 ತಿಂಗಳು ನೋಂದಣಿ ಮಾಡಿಕೊಳ್ಳಬೇಕು.

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಚಂದಾ ದರವು ನಿಗದಿತ ಕಿ.ಮೀ ಗೆ ಅನ್ವಯವಾಗಲಿದ್ದು, ಹೆಚ್ಚುವರಿ ರನ್ನಿಂಗ್ ಆಗಿದ್ದಲ್ಲಿ ಹೆಚ್ಚುವರಿ ದರ ಪಾವತಿ ಮಾಡಬೇಕಾಗುತ್ತದೆ. ಮತ್ತು ಚಂದಾದಾರಿಕೆಯ ಅವಧಿಯು ಗರಿಷ್ಠ 3 ವರ್ಷಗಳಿಗೆ ನೀಡಲಾಗುತ್ತದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಝೂಮ್ ಕಾರ್‌ನಲ್ಲಿ ಎಂಜಿ ಕಾರುಗಳ ಸೆಲ್ಪ್‌ ಡ್ರೈವ್‌ ರೆಂಟಲ್‌ ಲಭ್ಯ

ಲೀಸ್ ದರದಲ್ಲೇ ಕಾರಿನ ಇನ್ಸುರೆನ್ಸ್, ನಿರ್ವಹಣಾ ವೆಚ್ಚ, ರೋಡ್ ಸೈಡ್ ಅಸಿಸ್ಟ್ ಒಳಗೊಂಡಿದ್ದು, ಗರಿಷ್ಠ ಅವಧಿಯ ಚಂದಾದಾರಿಕೆಯ ಮೇಲೆ ತೆರಿಗೆ ಉಳಿತಾಯಕ್ಕೂ ಅನುಕೂಲಕರವಾಗುವಂತೆ ವಿವಿಧ ಪ್ಯಾಕೇಜ್ ನೀಡಲಾಗಿದೆ.

Most Read Articles

Kannada
English summary
MG Motor Partners With Zoomcar For Vehicle Subscription In India. Read in kannada.
Story first published: Tuesday, August 18, 2020, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X