ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೊಸ ಸಂಚಲನದೊಂದಿಗೆ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರಿಗೆ ಹಲವಾರು ಹೊಸ ಯೋಜನೆಗಳ ಮೂಲಕ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತಿದೆ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಕಾರು ಮಾರಾಟ ಪ್ರಕ್ರಿಯೆಯಲ್ಲಿ ಮಾತ್ರವಲ್ಲದೆ ಗ್ರಾಹಕರ ಸೇವೆಗಳಲ್ಲೂ ಸಾಕಷ್ಟು ಸುಧಾರಣೆ ಕಂಡಿರುವ ಎಂಜಿ ಮೋಟಾರ್ ಕಂಪನಿಯು ಹೊಸದಾಗಿ ರಿಅಶ್ಯೂರ್(reassure) ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಗ್ರಾಹಕರು ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಬಳಕೆ ಮಾಡಿದ ಎಂಜಿ ಕಾರುಗಳನ್ನು ಗುಣಮಟ್ಟದ ಆಧಾರದ ಅತ್ಯುತ್ತಮ ಬೆಲೆಗೆ ಮರು ಮಾರಾಟ ಮಾಡುವುದಲ್ಲದೆ ಹೊಸ ಕಾರಿನ ಮಾದರಿಯಲ್ಲೇ ಹಲವು ಆಫರ್‌ಗಳೊಂದಿಗೆ ಖರೀದಿ ಕೂಡಾ ಮಾಡಬಹುದಾಗಿದೆ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಗ್ರಾಹಕರಿಗೆ ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮರು ಮಾರಾಟದೊಂದಿಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಸಾಕಷ್ಟು ಹೊಸ ಆಫರ್‌ಗಳನ್ನು ನೀಡುತ್ತಿದ್ದು, ಗುಣಮಟ್ಟ, ಕಾರ್ಯಕ್ಷಮತೆ ಮೇಲೆ ಯೋಗ್ಯ ದರ ನಿಗದಿಪಡಿಸಲಿದೆ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಗ್ರಾಹಕರಿಗೂ ಹಲವು ಆಕರ್ಷಕ ಆಫರ್‌ಗಳೊಂದಿಗೆ ಹೊಸ ಕಾರು ಮಾರಾಟ ಪ್ರಕ್ರಿಯೆ ಮಾದರಿಯಲ್ಲೇ ಹಣಕಾಸು ಸೌಲಭ್ಯ ಮತ್ತು ವಾರಂಟಿಗಳನ್ನು ನೀಡಲಿದೆ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಇನ್ನು ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮವನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಗುರಿ ಯೋಜನೆ ಹೊಂದಿರುವ ಹಲವು ಆಟೋ ಕಂಪನಿಯು ಹೊಸ ವಾಹನಗಳ ಮಾರಾಟ ಜೊತೆ ಜೊತೆಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟವನ್ನು ಹೆಚ್ಚಿಸುತ್ತಿವೆ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಇಲ್ಲಿ ಮೋಸ ವ್ಯವಹಾರಗಳಿಗೆ ಯಾವುದೇ ಅವಕಾಶವಿರುವುದಿಲ್ಲ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಒಂದು ವೇಳೆ ಮೋಸವೆಂದು ಕಂಡುಬಂದರೂ ಕೂಡಾ ಕಾನೂನು ಹೋರಾಟಕ್ಕೆ ಎಲ್ಲಾ ಅವಕಾಶಗಳಿದ್ದು, ಮೋಸ ವ್ಯವಹಾರ ಸಾಬೀತಾದಲ್ಲಿ ತಕ್ಷಣವೇ ಪರಿಹಾರ ಕಂಡುಕೊಳ್ಳಬಹುದಾದ ಅವಕಾಶವಿದೆ. ಇದಕ್ಕಾಗಿ ಬಹುತೇಕ ಕಾರು ಕಂಪನಿಗಳು ತಮ್ಮದೆ ನಿರ್ಮಾಣದ ವಾಹನ ಸೆಕೆಂಡ್ ಹ್ಯಾಂಡ್ ಮಾದರಿಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಕ್ರಿಯೆ ಆರಂಭಿದ ಎಂಜಿ ಮೋಟಾರ್

ಇದಲ್ಲದೆ ಸದ್ಯ ಪರಿಸ್ಥಿತಿಯಲ್ಲಿ ಕರೋನಾ ವೈರಸ್ ಪರಿಣಾಮದಿಂದಾಗಿ ಆಟೋ ಉದ್ಯಮವು ಮಂದಗತಿಯಲ್ಲಿ ಸಾಗಿದ್ದು, ಹೊಸ ವಾಹನಗಳ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಇದು ಕೂಡಾ ಆಟೋ ಕಂಪನಿಗಳಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ಹಿನ್ನಲೆ ಎಂಜಿ ಮೋಟಾರ್ ಸೇರಿದಂತೆ ಹಲವು ಕಂಪನಿಗಳು ಯೂಸ್ಡ್ ಕಾರ್ ವ್ಯವಹಾರಕ್ಕೆ ಕೈ ಹಾಕಿವೆ.

Most Read Articles

Kannada
English summary
MG Motor Starts Its Pre-Owned Cars Selling Platform. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X