ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಎ4 ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಆಡಿ ಎ4 ಕಾರಿನ ಹೆಸರನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟೆ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಹೊಸ ಆಡಿ ಎ4 ಕಾರಿಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಹೊಸ ಆಡಿ ಎ4 ಸೆಡಾನ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್ ಅಥವಾ ಭಾರತದಾದ್ಯಂತದ ಯಾವುದೇ ಬ್ರ್ಯಾಂಡ್‌ನ ಡೀಲರುಗಳ ಬಳಿ ತೆರಳಿ ಟೋಕನ್ ಮೊತ್ತ ರೂ.2 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಆಡಿ ಎ4 ಸೆಡಾನ್ ವಿತರಣಿಯು ಮುಂದಿನ ವರ್ಷ ಪ್ರಾರಂಭಿಸಲಿದೆ. ಹೊಸ ಆಡಿ ಎ4 ಕಾರನ್ನು ಭಾರತದಲ್ಲಿ ಕಂಪ್ಲೀಟ್ ನಾಕ್ ಡೌನ್ ಯೂನಿಟ್ ಮೂಲಕ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಆಡಿ ಕಂಪನಿಯು ಔರಂಗಾಬಾದ್ ನಲ್ಲಿರುವ ತನ್ನ ಘಟಕದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ. ಮುಂದಿನ ವರ್ಷದ ಆರಂದಲ್ಲಿ ಹೊಸ ಆಡಿ ಎ4 ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತ ಮಾಹಿತಿಯನ್ನು ಆಡಿ ಕಂಪನಿ ಬಹಿರಂಗಪಡಿಸಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಹೊಸ ಆಡಿ ಎ4 ಕಾರಿನ ವಿನ್ಯಾಸ ಹಾಗೂ ಫೀಚರ್ ಗಳನ್ನು ಅಪ್ಡೇಟ್ ಮಾಡಲಾಗಿದೆ. ಫೇಸ್‌ಲಿಫ್ಟ್‌ ಕಾರಿನಲ್ಲಿ ಹೊಸ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ನೀಡಲಾಗುವುದು. ಹೊಸ ಅಡಿ ಎ4 ಕಾರಿನ ವಿನ್ಯಾಸವನ್ನು ಆಡಿ ಎ1 ಹ್ಯಾಚ್‌ಬ್ಯಾಕ್‌ ಕಾರಿನಿಂದ ಪಡೆಯಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಹೊಸ ಆಡಿ ಕಾರಿನ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲ್ಯಾಂಪ್ ಹಾಗೂ ಟಾಪ್ ಎಂಡ್ ಮಾದರಿಯು ಮ್ಯಾಟ್ರಿಕ್ಸ್ ಎಲ್ಇಡಿ ಟೆಕ್ನಾಲಜಿಯನ್ನು ಹೊಂದಿದೆ. ಈ ಕಾರಿನಲ್ಲಿ ಆಟೋಮ್ಯಾಟಿಕ್ ಹೈಬೀಮ್ ಫೀಚರ್ ಅನ್ನು ಸಹ ನೀಡಲಾಗಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಹೊಸ ವಿನ್ಯಾಸದಲ್ಲಿ ಆಡಿ ಎ4 ಕಾರು ಮೊದಲಿಗಿಂತ ಹೆಚ್ಚು ಸ್ಪೋರ್ಟಿ ಹಾಗೂ ಅಗ್ರೆಸಿವ್ ಆಗಿ ಕಾಣುತ್ತದೆ. ಈ ಕಾರು ಮೊದಲಿಗಿಂತ ದೊಡ್ಡ ಗಾತ್ರದ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳು ಸ್ಪಷ್ಟವಾದ ಲುಕ್ ಹಾಗೂ ಡಿಸೈನ್ ಅನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಹೊಸ ಆಡಿ ಎ4 ಕಾರಿನ ಎಸ್ ಮಾದರಿಯು 19 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ಉಳಿದ ಮಾದರಿಗಳು 17 ಹಾಗೂ 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಹೊಸ ಆಡಿ ಎ 4 ಫೇಸ್‌ಲಿಫ್ಟ್‌ ಕಾರು 12.3 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ ಹಾಗೂ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಂಗಳನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಈ ಕಾರಿನಲ್ಲಿರುವ ಫೀಚರ್'ಗಳ ಬಗ್ಗೆ ಹೇಳುವುದಾದರೆ ಆಡಿ ಫೇಸ್‌ಲಿಫ್ಟ್‌ ಕಾರು ಎಲೆಕ್ಟ್ರಿಕ್ ಫೋಲ್ಡಿಂಗ್ ಒಆರ್'ವಿಎಂ, ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಮಲ್ಟಿಪಲ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಹೊಸ ಆಡಿ ಎ4 ಕಾರಿನಲ್ಲಿ 2.0 ಲೀಟರಿನ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗುವುದು. ಈ ಎಂಜಿನ್ ಅನ್ನು ಇತ್ತೀಚೆಗೆ ಬಿಡುಗಡೆಯಾದ ಆಡಿ ಕ್ಯೂ2 ಎಸ್‌ಯುವಿಯಿಂದ ಎರವಲು ಪಡೆಯಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಈ ಎಂಜಿನ್ 188 ಬಿಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಡುಗಡೆಯ ಸಮಯದಲ್ಲಿ ಈ ಕಾರಿನ ಫೀಚರ್, ಮಾದರಿ ಸೇರಿದಂತೆ ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಆಡಿ ಎ4 ಕಾರು

ಐದನೇ ತಲೆಮಾರಿನ ಆಡಿ ಎ4 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ. ಹೊಸ ಆಡಿ ಎ4 ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 3 ಸೀರಿಸ್, ಜಾಗ್ವಾರ್ ಎಕ್ಸ್‌ಇ ಮತ್ತು ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್‌ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಆಡಿ audi
English summary
5th-gen Audi A4 Listed On Website. Read In Kannada.
Story first published: Thursday, December 24, 2020, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X