ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ದೆಹಲಿ ನಡೆಯುತ್ತಿರುವ 2020ರ ಆಟೋ ಎಕ್ಸ್‌ಪೋ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 50ಕ್ಕೂ ಹೆಚ್ಚು ಹೊಸ ಕಾರು ಮಾದರಿಗಳು ಅನಾವರಣಗೊಂಡಿವೆ. ಇವುಗಳಲ್ಲಿ ಕೆಲವು ಕಾರು ಮಾದರಿಗಳು ಅನಾವರಣದ ಜೊತೆಗೆ ಅಧಿಕೃತವಾಗಿ ಖರೀದಿಗೂ ಲಭ್ಯವಾಗಿದ್ದು, ಬಿಡುಗಡೆಯಾದ ಪ್ರಮುಖ ಐದು ಕಾರುಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಭಾರತದಲ್ಲಿ ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಕಾರು ಮಾದರಿಗಳ ಜೊತೆ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟವು ಜೋರಾಗಿದ್ದು, 2020ರ ಆಟೋ ಎಕ್ಸ್‌ಪೋದಲ್ಲೂ ಹಲವು ಇವಿ ಕಾರುಗಳು ಅನಾವರಣಗೊಳ್ಳುವುದರ ಜೊತೆಗೆ ಅಧಿಕೃತವಾಗಿ ಮಾರಾಟಕ್ಕೂ ಲಭ್ಯವಾಗಿವೆ. ಹಾಗಾದ್ರೆ ಹೊಸದಾಗಿ ಬಿಡುಗಡೆಯಾಗಿರುವ ಕಾರುಗಳು ಯಾವವು? ಮತ್ತು ಹೊಸ ಕಾರುಗಳ ವಿಶೇಷತೆ ಏನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಟಾಟಾ ಹ್ಯಾರಿಯರ್ ಬಿಎಸ್-6 ವರ್ಷನ್

ಬಿಎಸ್-6 ಎಂಜಿನ್ ಪ್ರೇರಿತ ಟಾಟಾ ಹ್ಯಾರಿಯರ್ ಕಾರು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಹೆಚ್ಚುವರಿ ಬಣ್ಣಗಳ ಆಯ್ಕೆ ಸೇರಿದಂತೆ ಪ್ರಮುಖ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 13.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.25 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ಎಂಜಿನ್ ಪ್ರೇರಿತ ಮ್ಯಾನುವಲ್ ಆವೃತ್ತಿಯಲ್ಲಿ ರೂ.35 ಸಾವಿರದಿಂದ ರೂ.40 ಸಾವಿರ ಹೆಚ್ಚಳವಾಗಿದೆ. ಹಾಗೆಯೇ ಹೊಸದಾಗಿ ಪರಿಚಯಿಸಲಾಗಿರುವ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಆರಂಭಿಕವಾಗಿಯೇ ರೂ.16.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.20.25 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್

ಮಹೀಂದ್ರಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.25 ಲಕ್ಷ ಬೆಲೆ ಪಡೆದುಕೊಂಡಿದೆ.

ಕೆಯುವಿ100 ಎಲೆಕ್ಟ್ರಿಕ್ ಕಾರು 54.4 ಬಿಎಚ್‌ಪಿ ಸಾಮಾರ್ಥ್ಯದ 40kW ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, ಮುಂಭಾಗದ ಚಕ್ರಗಳಿಗೆ ಶಕ್ತಿ ಪೂರೈಸುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಇದು ನಗರಪ್ರದೇಶದಲ್ಲಿನ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದ್ದು, ಸಾಮಾನ್ಯ ಚಾರ್ಜಿಂಗ್ ಪಾಯಿಂಟ್ ಮೂಲಕ ಪೂರ್ಣಪ್ರಮಾಣದ ಚಾರ್ಜಿಂಗ್ ಮಾಡಲು 5 ಗಂಟೆ 45 ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆ ಮಾಡಿಕೊಂಡಲ್ಲಿ ಬೆಲೆ ತುಸು ದುಬಾರಿಯಾದರೂ ಕೇವಲ 55 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಿಕೊಳ್ಳಬಹುದಾದು. ಹೀಗಾಗಿ ಇದು ಅರ್ಬನ್ ಕಮ್ಯುನಿಟಿ ಆಯ್ಕೆಗೆ ಹೆಚ್ಚು ಸೂಕ್ತವಾಗಿದ್ದು, ದೂರದ ಪ್ರಯಾಣಕ್ಕೆ ಅಷ್ಟಾಗಿ ಯೋಗ್ಯವಾಗಿಲ್ಲ ಎನ್ನಬಹುದು.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಕಿಯಾ ಕಾರ್ನಿವಾಲ್ ಎಂಪಿವಿ

ಕಿಯಾ ಮೋಟಾರ್ಸ್ ನಿರ್ಮಾಣದ ಬಹುನೀರಿಕ್ಷಿತ ಐಷಾರಾಮಿ ಎಂಪಿವಿ ಆವೃತ್ತಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಮೂಲಕ ಅಧಿಕೃತವಾಗಿ ಖರೀದಿಗೆ ಚಾಲನೆ ನೀಡಲಾಗಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 24.95 ಲಕ್ಷಕ್ಕೆ ಮತ್ತು ಹೈ ಎಂಡ್ ಆವೃತ್ತಿಯ ಬೆಲೆಯನ್ನು ರೂ.33.95 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಹೊಸ ಕಾರನ್ನು 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಆವೃತ್ತಿಯಲ್ಲಿ ಖರೀದಿ ಮಾಡಬಹುದಾಗಿದ್ದು, ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೊಸಿನ್ ವೆರಿಯೆಂಟ್‌ಗಳನ್ನು ಹೊಂದಿರುವ ಕಾರ್ನಿವಾಲ್ ಕಾರು 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಮರ್ಸಿಡಿಸ್ ವಿ-ಕ್ಲಾಸ್ ಮಾರ್ಕೊ ಪೊಲೊ

ಭಾರತದಲ್ಲಿ ಈಗಾಗಲೇ ವಿ-ಕ್ಲಾಸ್ ಐಷಾರಾಮಿ ಎಂಪಿವಿ ಬಿಡುಗಡೆ ಮಾಡಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೀಗ ವಿ-ಕ್ಲಾಸ್ ಕಾರಿನಲ್ಲೇ ಮಾರ್ಕೊ ಪೊಲೊ ಹೊಸ ಮಾದರಿಯೊಂದನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಕಾರಿಗಿಂತಲೂ ವಿಭಿನ್ನ ಇಂಟಿರಿಯರ್ ಹೊಂದಿರುವ ವಿ-ಕ್ಲಾಸ್ ಮಾರ್ಕೊ ಪೊಲೊ ಕಾರಿನಲ್ಲಿ ಪುಟ್ಟದಾದ ಒಂದು ಮನೆಯ ವಾತಾವರಣವನ್ನೇ ಸಿದ್ದಪಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಕಾರಿನ ಒಳಭಾಗದಲ್ಲೇ ಮಿಟಿಂಗ್, ಕುಕ್ಕಿಂಗ್ ಮಾಡಬಹುದಲ್ಲದೇ ಮಲಗಲು ಐಷಾರಾಮಿ ಕೊಣೆಯಾಗಿಯೂ ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಹೊಸ ಕಾರು ಪ್ರಮುಖ ವೆರಿಯೆಂಟ್‌ಗಳ ಮೂಲಕ ಎಕ್ಸ್‌ಶೋರೂಂ ಪ್ರಕಾರ ರೂ. 1.38 ಕೋಟಿ ಮತ್ತು ಹೈ ಎಂಡ್ ಆವೃತ್ತಿಯು 1.46 ಕೋಟಿ ಬೆಲೆ ಹೊಂದಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾದ ಬಹುನೀರಿಕ್ಷಿತ ಟಾಪ್ 5 ಕಾರುಗಳು

ಮರ್ಸಿಡಿಸ್-ಎ‍ಎಂಜಿ ಜಿಟಿ 63ಎಸ್

ಮರ್ಸಿಡಿಸ್ ಬೆಂಝ್ ತನ್ನ ಜನಪ್ರಿಯ ಎ‍ಎಂಜಿ ಜಿಟಿ 63ಎಸ್ 4-ಡೋರ್ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಐಷಾರಾಮಿ ಕಾರಿನ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ.2.42 ಕೋಟಿ. ಹೊಸ ಕಾರಿನಲ್ಲಿ 4.0-ಲೀಟರ್, ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 639 ಬಿ‍‍ಹೆಚ್‍ಪಿ ಪವರ್ ಮತ್ತು 900 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
New Cars Launches at Auto Expo 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X