Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿ ಟೀಸರ್ ಬಿಡುಗಡೆ
ಫೋರ್ಡ್ ಇಂಡಿಯಾ ಕಂಪನಿಯು ತನ್ನ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಫೋರ್ಡ್ ಕಂಪನಿಯು ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಫೋರ್ಡ್ ಇಂಡಿಯಾ ಕಂಪನಿಯು ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಆಕರ್ಷಕ ಟೀಸರ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ. ಫೋರ್ಡ್ ಇಂಡಿಯಾ ಹೊಸ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವುದರ ಬಗೆ ಯಾವುದೇ ಸುಳಿವು ನೀಡರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಫೋರ್ಡ್ ಎಂಡೀವರ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದು ಕಾಣಿಸಿಕೊಂಡಿತ್ತು.

ಈ ಸಂದರ್ಭದಲ್ಲಿ ಹೊಸ ಫೋರ್ಡ್ ಎಸ್‍ಯುವಿಯ ಬಗ್ಗೆ ಚರ್ಚೆಯಾಗಿ ಮಾರ್ಪಟ್ಟಿತು. ಇನ್ನು ಈಗಾಗಲೇ ಈ ಹೊಸ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯು ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ.

ಹೊಸ ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯು ಸಾಮಾನ್ಯ ಎಂಡೀವರ್ ಎಸ್‍ಯುವಿಯ ಜೊತೆಯಲ್ಲಿ ಡೀಲರ್ ಬಳಿ ಇತ್ತೀಚೆಗೆ ಕಾಣಿಸಿಕೊಂಡಿದೆ. ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ.

ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿ ಎಸ್‍ಯುವಿಗೆ ಪೈಪೋಟಿ ನೀಡಲು ಫೋರ್ಡ್ ಕಂಪನಿಯು ಈ ಹೊಸ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಬ್ಲ್ಯಾಕ್ ಲೋ ಬಂಪರ್, ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ಹೆಚ್ಚುವರಿಯಾಗಿ ನೇಮ್-ಪ್ಲೇಟ್ ಮತ್ತು ಒಆರ್‌ವಿಎಂಗಳಲ್ಲಿ ಬ್ಲ್ಯಾಕ್ ಅಂಶಗಳು ಒಳಗೊಂಡಿದೆ.

ಈ ಹೊಸ ಎಂಡೀವರ್ ಸ್ಪೆಷಲ್ ಎಡಿಷನ್ ಎಸ್‍ಯುವಿಯ ಹಲವು ಕಡೆಗಳಲ್ಲಿ 'ಸ್ಪೋರ್ಟ್' ಬ್ಯಾಡ್ಜಿಂಗ್ ಅನ್ನು ಸಹ ನೋಡಬಹುದಾಗಿದೆ. ಈ ಹೊಸ ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಮತ್ತು ಸೈಡ್ ಪೊಫೈಲ್ ನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಆದರೆ ಎಸ್‍ಯುವಿಯ ಹಿಂಭಾಗದ ಬಂಪರ್ ಸಿಲ್ವರ್ ಬಣ್ಣದ ಕ್ರೋಮ್‌ನ ಫಿನಿಶಿಂಗ್ ಅನ್ನು ಹೊಂದಿದೆ.

ಈ ಹೊಸ ಎಸ್‍ಯುವಿಯಲ್ಲಿ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿರುತ್ತದೆ. ಸ್ಪೋರ್ಟ್ ಆವೃತ್ತಿಯಲ್ಲಿ ಬ್ಲ್ಯಾಕ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿರಬಹುದು. ಸಾಮಾನ್ಯ ಎಂಡೀವರ್ ಎಸ್‍ಯುವಿಗೆ ಹೋಲಿಸಿದರೆ ಇಂಟಿರಿಯರ್ ನಲ್ಲಿ ಹೆಚ್ಚುವರಿ ಫೀಚರ್ ಗಳನ್ನು ಹೊಂದಿರುವುದಿಲ್ಲ.

ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಈ ಎಸ್‍ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ.

ಇನ್ನು ಈ ಫೋರ್ಡ್ ಎಂಡೀವರ್ ಸ್ಪೋರ್ಟ್ಸ್ ಎಸ್‍ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಫೋರ್ಡ್ ಎಂಡೀವರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.