ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ವಿಶ್ವದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಕಿಯಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ನ್ಯೂ ಜನರೇಷನ್ ಕಾರ್ನಿವಾಲ್ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಆವೃತ್ತಿಯು ಐಷಾರಾಮಿ ವೆರಿಯೆಂಟ್ ಒಂದನ್ನು ಪರಿಚಯಿಸಲಾಗುತ್ತಿದೆ.

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಕಾರ್ನಿವಾಲ್ ಕಾರು ಸದ್ಯ ವಿವಿಧ ದೇಶಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 7 ಸೀಟರ್, 8 ಸೀಟರ್, 9 ಸೀಟರ್ ಮತ್ತು 11 ಸೀಟರ್ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಹೊಸ ಕಾರಿನಲ್ಲಿ ಐಷಾರಾಮಿ ಫೀಚರ್ಸ್ ಹೊಂದಿರುವ 4 ಸೀಟರ್ ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿದೆ. 2021ರ ಕೊನೆಯಲ್ಲಿ ಇಲ್ಲವೇ 2022ರ ಆರಂಭದಲ್ಲಿ ಮಾರಾಟಗೊಳ್ಳಲಿರುವ ನ್ಯೂ ಜನರೇಷನ್ ಕಾರ್ನಿವಾಲ್ ಕಾರಿನಲ್ಲಿ ಇದೇ ಮೊದಲ ಬಾರಿಗೆ 4 ಸೀಟರ್ ಮಾದರಿಯನ್ನು ಅಭಿವೃದ್ದಿಗೊಳಿಸಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಕಾರ್ನಿವಾಲ್ ಕಾರಿಗಿಂತಲೂ ದುಬಾರಿ ಬೆಲೆ ಹೊಂದಿರಲಿದೆ.

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಹೊಸ ಕಾರ್ನಿವಾಲ್ ಮಾದರಿಯನ್ನು ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಲೆಕ್ಸಸ್ ಎಲ್ಎಂ ಲಗ್ಷುರಿ ಎಂಪಿವಿ ಮತ್ತು ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಂಪಿವಿ ಮಾದರಿಗೆ ಪೈಪೋಟಿಯಾಗಿ ಅಭಿವೃದ್ದಿಗೊಳಿಸಲಾಗಿದೆ.

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಮುಂದಿನ ವರ್ಷದಿಂದ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 7 ಸೀಟರ್. 8 ಸೀಟರ್, 9 ಸೀಟರ್ ಮತ್ತು 11 ಸೀಟರ್ ಖರೀದಿ ಮಾಡಬಹುದಾಗಿದ್ದು, ಕಾರ್ಪೊರೇಟ್ ಉದ್ಯಮಿಗಳ ವ್ಯವಹಾರಗಳಿಗೆ ಅನುಕೂಲಕರವಾಗಿ 4 ಸೀಟರ್ ಮಾದರಿಯನ್ನು ಸಿದ್ದಪಡಿಸಲಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..!

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಹೊಸ 4 ಸೀಟರ್ ಆವೃತ್ತಿಯಲ್ಲಿ ಮುಂಭಾಗದ ಆಸನಗಳು ಮತ್ತು ಹಿಂಭಾಗದ ಆಸನಗಳ ಮಧ್ಯದಲ್ಲಿ ಪರದೆ ಹಾಕಲಾಗಿದ್ದು, ಹಿಂಭಾಗದಲ್ಲಿರುವ ಎರಡು ಆಸನಗಳಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ನೀಡಲಾಗಿದೆ.

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಉದ್ಯಮಿಗಳು ಇಲ್ಲಿ ಆರಾಮದಾಯಕವಾಗಿ ಸಭೆ ಮಾಡಬಹುದಾದಷ್ಟು ಸ್ಥಳಾವಕಾಶವಿದ್ದು, ಸುತ್ತಲು ಪರದೆ ಜೋಡಣೆ ಮಾಡಲಾಗಿದೆ. ಹಾಗೆಯೇ ಹಿಂಬದಿಯಲ್ಲಿ ನಡೆಯುವ ವ್ಯವಹಾರಗಳನ್ನು ಮುಂಭಾಗದಲ್ಲಿರುವ ಚಾಲಕನಿಗೂ ತಿಳಿಯದಂತೆ ಮಧ್ಯ ಭಾಗದಲ್ಲಿ ಗ್ಲಾಸ್ ಕರ್ಟನ್ ನೀಡಲಾಗಿದ್ದು, ಎಲ್‌ಸಿಡಿ ಪರದೆ ಮೂಲಕ ಕಾನ್ಫರೆನ್ಸ್ ಕೂಡಾ ಮಾಡಬಹುದಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಇದೇ ಸೌಲಭ್ಯವುಳ್ಳ ಲೆಕ್ಸಸ್ ಎಲ್ಎಂ ಕಾರು ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಿಯಾ ಈ ನಿಟ್ಟಿನಲ್ಲಿ ಯೋಜನೆ ರೂಪಿಸುವ ಮೂಲಕ ನೆಕ್ಸ್ಟ್ ಕಾರ್ನಿವಾಲ್ ಮಾದರಿಯಲ್ಲೇ ಹೊಸ ಆವೃತ್ತಿಯನ್ನು ಸಿದ್ದಪಡಿಸಿದೆ.

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಸದ್ಯ ಮಾರುಕಟ್ಟೆಯಲ್ಲಿ ಲೆಕ್ಸಸ್ ಎಲ್ಎಂ ಕಾರು ವಿವಿಧ ಮಾದರಿಯ ಎರಡು ವೆರಿಯೆಂಟ್‌ಗಳೊಂದಿಗೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ. 75 ಲಕ್ಷದಿಂದ ರೂ.85 ಲಕ್ಷ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಇದೀಗ ಬಿಡುಗಡೆಗೆ ಸಿದ್ದವಾಗಿರುವ ಕಾರ್ನಿವಾಲ್ ಹೊಸ ಆವೃತ್ತಿಯು ರೂ.50 ಲಕ್ಷದಿಂದ ರೂ.60 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ ಎನ್ನಬಹುದು.

MOST READ: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಆದರೆ ಈ ಕಾರು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಬಿಡುಗಡೆಯ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇನ್ನು ಸಾಮಾನ್ಯ ಮಾದರಿಯ ಕಾರ್ನಿವಾಲ್ ಮಾದರಿಯು ಸದ್ಯ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯಲ್ಲಿ ಮಾರಾಟಗೊಳ್ಳುತ್ತಿದೆ.

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಇದರಲ್ಲಿ 7 ಸೀಟರ್ ಮಾದರಿಯೇ ಹೈ ಎಂಡ್ ಆವೃತ್ತಿಯಾಗಿದ್ದು, 9 ಸೀಟರ್ ಮಾದರಿಯು ಆರಂಭಿಕ ಆವೃತ್ತಿಯಾಗಿ ಮಾರಾಟವಾಗುತ್ತಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.24.95 ಲಕ್ಷ ಮತ್ತು ಹೈ ಎಂಡ್ ಆವೃತ್ತಿಯು ರೂ.33.95 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದೆ.

MOST READ: ದುಬಾರಿ ಬೆಲೆಯ ಸೂಪರ್‍ ಕಾರುಗಳು ದುಬೈನಲ್ಲೇ ಹೆಚ್ಚು.. ಏಕೆ ಗೊತ್ತಾ?

ಐಷಾರಾಮಿ ಸೌಲಭ್ಯವುಳ್ಳ ಫೋರ್ ಸೀಟರ್ ಕಿಯಾ ಕಾರ್ನಿವಾಲ್ ಅನಾವರಣ

ಎಂಪಿವಿ ಕಾರುಗಳಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರ್ನಿವಾಲ್ ಕಾರು ಸದ್ಯಕ್ಕೆ ಒಂದೇ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 200-ಬಿಎಚ್‌ಪಿ ಮತ್ತು 440-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

Most Read Articles

Kannada
English summary
According to reports, The new KIA Carnival MPV will get luxurious 4 seater variant and it is expected to launch in India by 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X