Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಳಿ ಬಣ್ಣದ ಆಯ್ಕೆಯೊಂದಿಗೆ ಮಾಡಿಫೈಗೊಂಡ ನ್ಯೂ ಜನರೇಷನ್ ಥಾರ್
ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಆಫ್ ರೋಡ್ ಎಸ್‌ಯುವಿ ಕಾರು ಮಾದರಿಯ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಆಫ್ ರೋಡ್ ಎಸ್‌ಯುವಿ ಮಾದರಿಯ ಕಾರು ಮಾರಾಟದಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.

ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 11.90 ಲಕ್ಷದಿಂದ ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಆಸಕ್ತ ಗ್ರಾಹಕರು ಆಫ್ ರೋಡ್ ಎಸ್‌ಯುವಿ ಮಾದರಿಗಾಗಿ ಹೆಚ್ಚುವರಿ ಪ್ಯಾಕೇಜ್‌ನೊಂದಿಗೆ ಮತ್ತಷ್ಟು ಪ್ರೀಮಿಯಂ ಮತ್ತು ಸೆಫ್ಟಿ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಮಹೀಂದ್ರಾ ಕಂಪನಿಯೇ ಆಫ್ಟರ್ ಮಾರ್ಕೆಟ್ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡುತ್ತದೆ.

ಇದರೊಂದಿಗೆ ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರು ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಕಂಪನಿಯು ನೀಡದಿರುವ ರೀತಿಯಲ್ಲಿ ವಿವಿಧ ಬಣ್ಣಗಳ ಆಯ್ಕೆ ಮತ್ತು ಆಕರ್ಷಕ ಟೈರ್ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ.

ಆಕರ್ಷಕ ಬೇಡಿಕೆಯೆಂತೆ ಇತ್ತೀಚೆಗೆ ಥಾರ್ ಮಧ್ಯಮ ಗಾತ್ರದ ಆವೃತ್ತಿಯೊಂದು ಬಿಳಿ ಬಣ್ಣದ ವ್ಯಾರ್ಪ್ ಮಾಡಿಫಿಕೇಷನ್ ಪಡೆದುಕೊಂಡಿದ್ದು, ಹೊಸ ಕಾರು ಕಂಪನಿಯೇ ನೀಡಿರುವ ಬಣ್ಣದ ಆಯ್ಕೆ ಹೊಂದಿರುವ ಮಾದರಿಯಲ್ಲಿ ಸಿದ್ದಗೊಂಡಿದೆ. ಹೊಸ ಬಣ್ಣದ ಆಯ್ಕೆಯೊಂದಿಗೆ ಸ್ಟಿಕರ್ಸ್ ಡಿಸೈನ್ ಕೂಡಾ ಆಫ್ ರೋಡ್ ಮಾದರಿಗೆ ಹೊಸ ಲುಕ್ ನೀಡಿದ್ದು, ವೊಯಾಗೆರ್ ಎನ್ನುವ ಮಾಡಿಫೈ ಕಂಪನಿಯೊಂದಿಗೆ ಹೊಸ ಬಣ್ಣದ ಆಯ್ಕೆಯನ್ನು ನೀಡಿದೆ.
ಇದರೊಂದಿಗೆ ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರು ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಥಾರ್ ಖರೀದಿ ಮಾಡುವ ಶೇ. 80ಕ್ಕಿಂತಲೂ ಹೆಚ್ಚು ಗ್ರಾಹಕರು ತಮ್ಮ ಇಷ್ಟದಂತೆ ಮಾಡಿಫೈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೀಗಾಗಿ ಹಲವಾರು ಮಾಡಿಫೈ ಕಂಪನಿಗಳು ಥಾರ್ ಕಾರು ಮಾದರಿಗಾಗಿ ಹಲವಾರು ಮಾಡಿಫೈ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬಣ್ಣದ ಆಯ್ಕೆಯು ಥಾರ್ ಮಾಲೀಕರ ಪ್ರಮುಖ ಆಕರ್ಷಣೆಯಾಗಲಿದೆ.

ಇನ್ನು ಮಾಡಿಫೈ ಸೌಲಭ್ಯಗಳಿಗಾಗಿ ಲಕ್ಷಾಂತರ ಖರ್ಚು ಮಾಡುವುದಲ್ಲದೆ ಅದು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿದ್ದಲ್ಲಿ ದಂಡ ಕೂಡಾ ಪಾವತಿಸಿಬಹುದಾದ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಿಬೇಕಿದ್ದು, ಆದಷ್ಟು ಸ್ಟ್ಯಾಂಡರ್ಡ್ ಮಾಡಿಫೈ ಸೌಲಭ್ಯಗಳನ್ನು ಮಾತ್ರ ಬಳಕೆಗೆ ಮಾಡಿ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಾಹನ ಮಾಲೀಕರು ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅತಿಯಾದ ಮಾಡಿಫೈ ಸೌಲಭ್ಯಗಳು ಕಾರುಗಳಿಗೆ ಆಕರ್ಷಣೆ ನೀಡಬಹುದಾದರೂ ವಾಹನಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತಲ್ಲದೆ ಸುರಕ್ಷಾ ಸೌಲಭ್ಯಗಳ ಕಾರ್ಯನಿರ್ವಹಣೆಗೂ ಅಡಚಣೆ ಉಂಟು ಮಾಡಬಹುದು.