ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸುತ್ತಿವೆ. ಮಾರುತಿ ಸುಜುಕಿ ಕಂಪನಿಯು ಸಹ ತನ್ನ ವಾಹನಗಳನ್ನು ಬಿ‍ಎಸ್ 6 ಎಂಜಿನ್‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿದೆ.

ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ಮಾರುತಿ ಸುಜುಕಿ ಕಂಪನಿಯು ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಹೊಂದಿರುವ ತನ್ನ ವಿಟಾರಾ ಬ್ರೆಝಾ ಕಾರ್ ಅನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿತ್ತು. ಕಾರ್ ಅನ್ನು ಬಿಡುಗಡೆಗೊಳಿಸುವ ಸಮಯದಲ್ಲಿಯೇ ಈ ಕಾರುಗಳ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿತ್ತು.

ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ಮಾರುತಿ ಸುಜುಕಿಯ ವಿಟಾರಾ ಬ್ರೆಝಾದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿರುವ ಕಾರಣಕ್ಕೆ ಈ ಕಾರು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ರಶ್‍‍ಲೇನ್ ವರದಿಗಳ ಪ್ರಕಾರ, ಬ್ರೆಝಾ ಕಾರುಗಳ ಬುಕ್ಕಿಂಗ್ 20 ದಿನಗಳಲ್ಲಿ 10,000 ಯುನಿಟ್‍‍ಗಳ ಗಡಿಯನ್ನು ದಾಟಿದೆ.

ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ಹೊಸ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‍‍ಯುವಿಯನ್ನು ಬಿ‍ಎಸ್ 6 ಎಂಜಿನ್ ಹಾಗೂ ಸ್ಟೈಲಿಂಗ್‍‍ನಲ್ಲಿ ಅಪ್‍‍ಡೇಟ್‍ ಮಾಡಿ ಬಿಡುಗಡೆಗೊಳಿಸಲಾಗಿದೆ. ಈ ಕಾರಣಕ್ಕೆ ಈ ಹೊಸ ಎಸ್‍‍ಯುವಿಯು ಇಷ್ಟೊಂದು ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡಲಾಗಿದೆ.

ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷದವರೆಗೂ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಬ್ರೆಝಾ ಎಸ್‍‍‍ಯುವಿಯ ಮಾರಾಟವು ಕೆಲವು ತಿಂಗಳುಗಳಿಂದ ಕುಸಿದಿತ್ತು. ಇದಕ್ಕೆ ಈ ಎಸ್‍‍ಯುವಿಯಲ್ಲಿದ್ದ ಬಿ‍ಎಸ್ 4 ಎಂಜಿನ್ ಸಹ ಕಾರಣವಾಗಿತ್ತು.

ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ಆದರೆ ಈಗ ಮತ್ತೊಮ್ಮೆ ಬ್ರೆಝಾ ಎಸ್‍‍ಯುವಿಯ ಮಾರಾಟವು ಚೇತರಿಸಿಕೊಂಡಂತಿದೆ. ಇನ್ನು ಬಿಎಸ್ 6 ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ವಿಟಾರಾ ಬ್ರೆಝಾ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಎಲ್‍ಇ‍‍ಡಿ ಲೈಟ್, ಲೆದರ್ ಸ್ಟೀಯರಿಂಗ್ ವ್ಹೀಲ್ ಹಾಗೂ ಇನ್ಫೋಟೆನ್‍‍ಮೆಂಟ್ ಸಿಸ್ಟಂಗಳನ್ನು ಅಪ್‍‍ಡೇಟ್ ಮಾಡಲಾಗಿದೆ.

ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ಹೊಸ ಎಸ್‍‍ಯುವಿಯಲ್ಲಿ ಅಳವಡಿಸಲಾಗಿರುವ 1.5 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ 104 ಬಿ‍‍ಹೆಚ್‍‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಹಾಗೂ 4 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಬುಕ್ಕಿಂಗ್‍‍‍ನಲ್ಲಿ ದಾಖಲೆ ಬರೆದ ಹೊಸ ವಿಟಾರಾ ಬ್ರೆಝಾ

ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍ಗ್ರೇಡ್ ಮಾಡಲಾಗದ ಕಾರಣಕ್ಕೆ ಡೀಸೆಲ್ ಎಂಜಿನ್ ಆವೃತ್ತಿಗಳನ್ನು ಸ್ಥಗಿತಗೊಳಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯು ಮುಂಬರುವ ದಿನಗಳಲ್ಲಿ ವಿಟಾರಾ ಬ್ರೆಝಾ ಎಸ್‍‍ಯುವಿಯನ್ನು ಡೀಸೆಲ್ ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
New Maruti Vitara Brezza BS 6 petrol bookings cross 10000 units. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X