ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಎಲ್‌ಬಿಡಬ್ಲ್ಯು ಫೇಸ್‌ಲಿಫ್ಟ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಸರಣಿಯಲ್ಲಿ ಇ-ಕ್ಲಾಸ್ ಲಾಂಗ್ ವ್ಹೀಲ್ ಬೇಸ್(ಎಲ್‌ಬಿಡಬ್ಲ್ಯು) ಭಾರತದಲ್ಲಿ ಅತ್ಯಂತ ಯಶಸ್ವಿ ಮಾದರಿಯಾಗಿದೆ. ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಇ-ಕ್ಲಾಸ್ ಎಲ್‌ಬಿಡಬ್ಲ್ಯು ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಿದೆ.

ಈ ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಎಲ್‌ಬಿಡಬ್ಲ್ಯು ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಲಾಂಗ್ ವ್ಹೀಲ್ ಬೇಸ್ ಆವೃತ್ತಿಯು ಎರಡು ವ್ಹೀಲ್ ಗಳ ನಡುವೆ 140 ಎಂಎಂ ಹೆಚ್ಚಿನ ಸ್ಪೇಸ್ ಅನ್ನು ಹೊಂದಿದೆ. ಆದರೆ ಅಗಲ ಮತ್ತು ಎತ್ತರವು ಬದಲಾಗದೆ ಉಳಿಯುತ್ತದೆ. ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಎಲ್‌ಬಿಡಬ್ಲ್ಯು ಫೇಸ್‌ಲಿಫ್ಟ್ ಕಾರಿನ ವಿನ್ಯಾಸವು ಸ್ಟ್ಯಾಂಡರ್ಡ್ ಇ-ಕ್ಲಾಸ್ ಫೇಸ್‌ಲಿಫ್ಟ್‌ಗೆ ಹೋಲುತ್ತದೆ. ಇದು ಹೊಸ ಫ್ರಂಟ್ ಎಂಡ್ ಅನ್ನು ಪಡೆಯುತ್ತದೆ.

ಈ ಹೊಸ ಐಷಾರಾಮಿ ಕಾರಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರಲಿದೆ, ಈ ಹೆಡ್ ಲ್ಯಾಂಪ್ ಇತರ ಮರ್ಸಿಡಿಸ್ ಬೆಂಝ್ ಕಾರುಗಳಿಗೆ ಅನುಗುಣವಾಗಿ ಕಾಣುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿರುವ ಬಂಪರ್‌ಗಳು ಹೊಸದಾಗಿದ್ದು, ಇದು ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಹೊಸ ಕಾರಿನ ಟೈಲ್-ಲ್ಯಾಂಪ್‌ಗಳು ಸಹ ಹೊಸ ವಿನ್ಯಾಸವನ್ನು ಪಡೆಯುತ್ತವೆ. ಕ್ಯಾಬಿನ್ ಸಹ ಇ-ಕ್ಲಾಸ್ ಫೇಸ್‌ಲಿಫ್ಟ್‌ನಲ್ಲಿ ನಾವು ನೋಡಿದ ರೀತಿಯ ನವೀಕರಣಗಳನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್ ಎರಡು 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ.

ಈ ಐಷಾರಾಮಿ ಕಾರಿನಲ್ಲಿ 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, ಇನ್ಫೋಟೈನ್‌ಮೆಂಟ್ ಇಂಟರ್ಫೇಸ್ ಈಗ ಬಾಷ್ ಸ್ಪೀಕರ್ ನೊಂದಿಗೆ ಬರುತ್ತದೆ. ಸೀಟುಗಳು ಬ್ಯಾಕ್‌ರೆಸ್ಟ್ ಮತ್ತು ಹೆಡ್‌ರೆಸ್ಟ್‌ಗೆ ಸೂಕ್ಷ್ಮ ಹೊಂದಾಣಿಕೆಗಳನ್ನು ಮಾಡಬಹುದಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹಿಂಭಾಗದ ಸೀಟಿನಲ್ಲಿ ಸೌಕರ್ಯವೂ ಸುಧಾರಿಸಿದೆ ಮತ್ತು ಹೊಸ ಹಿಂಭಾಗದ ಸೆಂಟ್ರಲ್ ಕನ್ಸೋಲ್ ಟಚ್‌ಸ್ಕ್ರೀನ್ ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಸೇರಿಸಿದೆ ಎಂದು ಮರ್ಸಿಡಿಸ್ ಬೆಂಜ್ ಹೇಳುತ್ತದೆ.

ಇತರ ನವೀಕರಣಗಳಲ್ಲಿ ಡ್ರೈವಿಂಗ್ ಅಸಿಸ್ಟ್ ಫೀಚರ್ ಗಳನ್ನು ನವೀಕರಿಸಿದೆ. ಇನ್ನು ಈ ಕಾರಿನಲ್ಲಿ ಸ್ಟೀಯರಿಂಗ್ ವ್ಹೀಲ್ ಹ್ಯಾಂಡ್ಸ್-ಆಫ್ ಡಿಟೆಕ್ಷನ್, ಆಕ್ಟಿವ್ ಡಿಸ್ಟನ್ಸ್ ಅಸಿಸ್ಟ್, ಸ್ಟೀಯರಿಂಗ್ ಅಸಿಸ್ಟ್, ಆಕ್ಟಿವ್ ಬ್ರೇಕ್ ಅಸಿಸ್ಟ್, ಆಕ್ಟಿವ್ ಬ್ಲೈಂಡ್ ಸ್ಪಾಟ್ ಅಸಿಸ್ಟ್ ಮತ್ತು ಪಾರ್ಕಿಂಗ್ ಪ್ಯಾಕೇಜ್‌ನಂತಹ ಫೀಚರ್ ಗಳನ್ನು ಹೊಂದಿವೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಏಳು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಿದೆ, ಇದರಲ್ಲಿ ಪ್ಲಗಿನ್ ಹೈಬ್ರಿಡ್ ಯುನಿಟ್ ಗಳು ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳನ್ನು ಒಳಗೊಂಡಿದೆ.

ಹೊಸ 2.0-ಲೀಟರ್, ನಾಲ್ಕು ಸಿಲಿಂಡರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಮೋಟರ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ಐಎಸ್ಜಿ) ಜೊತೆಗೆ 48-ವೋಲ್ಟ್ ಆನ್-ಬೋರ್ಡ್ ಎಲೆಕ್ಟ್ರಿಕಲ್ ಸಿಸ್ಟಂ ಅನ್ನು ಹೊಂದಿರಲಿದೆ.

ಈ ಆಯ್ಕೆಯು ಭಾರತದಲ್ಲಿ ಬಿಡುಗಡೆಗೊಳಿಸುವ ಇ-ಕ್ಲಾಸ್ ಲಾಂಗ್ ವ್ಹೀಲ್ ಬೇಸ್ ಆವೃತ್ತಿಯಲ್ಲಿ ಹೊಂದಿರಬಹುದು. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಎಲ್‌ಬಿಡ ಫೇಸ್‌ಲಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








