ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎಸ್-ಕ್ಲಾಸ್ ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಮರ್ಸಿಡಿಸ್ ಬೆಂಝ್ ಮತ್ತು ಅದರ ತಂತ್ರಜ್ಞಾನ ಪಾಲುದಾರ ಬಾಷ್ ಆಟೋಮೋಟಿವ್ ಟೆಕ್ ಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಜರ್ಮನಿಯಲ್ಲಿ ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್(ಎವಿಪಿ) ತಂತ್ರಜ್ಞಾನ ಸಹ-ಅಭಿವೃದ್ಧಿಪಡಿಸಲು ಪಾರ್ಕಿಂಗ್ ಗ್ಯಾರೇಜ್ ಆಪರೇಟರ್ ಅಪ್‌ಕೋವಾ ಜೊತೆ ಪಾಲುದಾರಿಕೆ ಹೊಂದಿದೆ, ಅದರಲ್ಲಿ ಮೊದಲನೆಯದನ್ನು ಸ್ಟಟ್‌ಗಾರ್ಟ್ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗುವುದು.

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಸ್ಟಟ್‌ಗಾರ್ಟ್ ವಿಮಾನ ನಿಲ್ದಾಣದ ಪಿ6 ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಸ್ಥಾಪಿಸಲಾದ ಹೊಸ ವ್ಯಾಲೆಟ್ ಪಾರ್ಕಿಂಗ್ ಸಿಸ್ಟಂನ್ನು ಶೀಘ್ರದಲ್ಲೇ ಕಮರ್ಷಿಯಲ್ ಕಾರ್ಯಗತಗೊಳಿಸಲಾಗುವುದು. ಮರ್ಸಿಡಿಸ್ ಬೆಂಝ್ ಬಿಡುಗಡೆಗೊಳಿಸಲಿರುವ ಪ್ರಮುಖ ಮಾದರಿಯಾದ ಎಸ್-ಕ್ಲಾಸ್ ನಲ್ಲಿ ಡೆಮೊವನ್ನು ಪ್ರದರ್ಶಿಸಿದ್ದಾರೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಹೊಸ ಎಸ್-ಕ್ಲಾಸ್ ಖರೀದಿಸುವಾಗ, ಗ್ರಾಹಕರು ‘ಇಂಟೆಲಿಜೆಂಟ್ ಪಾರ್ಕ್ ಪೈಲಟ್' ಎಂಬ ಸಿಸ್ಟಂ ಅನ್ನು ಮೊದಲೇ ಸ್ಥಾಪಿಸುವ ಆಯ್ಕೆಯನ್ನು ಪಡೆಯುತ್ತಾರೆ. ಇದು ಕಾರನ್ನು ಸ್ಮಾರ್ಟ್‌ಫೋನ್ ಮೂಲಕ ಕಾಮೆಂಡ್ ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಚಾಲಕನ ಅಗತ್ಯವಿಲ್ಲದೆ ಕಾಯ್ದಿರಿಸಿದ ಪಾರ್ಕಿಂಗ್ ಸ್ಥಳದಲ್ಲೇ ಆಟೋಮ್ಯಾಟಿಕ್ ಆಗಿ ಚಲಿಸಿ ಪಾರ್ಕ್ ಆಗುತ್ತದೆ.

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಅದರ ಆಪ್ಕೋವಾ ಫ್ಲೋ ಡಿಜಿಟಲ್ ಮೊಬಿಲಿಟಿ ಪ್ಲಾಟ್‌ಫಾರ್ಮ್‌ನಿಂದ ಸಕ್ರಿಯಗೊಳಿಸಲಾದ ಆಪ್ಕೊವಾ ಆಟೋಮ್ಯಾಟಿಕ್ ವ್ಯಾಲೆಟ್ ನಿಲುಗಡೆಗೆ ಆಧಾರವಾಗಿ ತಡೆಗೋಡೆ ಮತ್ತು ಇತರ ಯಾವುದೇ ಅಡೆ ತಡೆಗಳು ಇದೆಯಾ ಎಂಬುದನ್ನು ಪರೀಕ್ಷಿಸುತ್ತದೆ. ಮತ್ತೊಂದೆಡೆ ಲೇನ್‌ಗಳು ಮತ್ತು ಅಡೆತಡೆಗಳನ್ನು ಕಂಡುಹಿಡಿಯಲು ಬಾಷ್ ಮೊದಲ ಬಾರಿಗೆ ಕ್ಯಾಮೆರಾ ಆಧಾರಿತ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಈ ಬಾಷ್ ವಿಡಿಯೋ ಕ್ಯಾಮೆರಾಗಳು ಗ್ಯಾರೇಜ್‌ನಲ್ಲಿ ಖಾಲಿ ಇರುವ ಸ್ಥಳಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಮಾಹಿತಿಯನ್ನು ಸ್ಥಳೀಯ ಸರ್ವರ್‌ಗೆ ಕಳುಹಿಸುತ್ತದೆ, ಅದು ಡೇಟಾವನ್ನು ಪಡೆದು ಡ್ರಾಪ್-ಆಫ್ ಪಾಯಿಂಟ್‌ನಿಂದ.ಪಾರ್ಕಿಂಗ್ ಸ್ಪೇಸ್ ಕಡೆ ಸಾಗಲು ಅನುವು ಮಾಡಿಕೂಡುತ್ತದೆ.

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಬಾಷ್ ಹಳೆಯ ಲಿಡಾರ್ ಆಧಾರಿತ ತಂತ್ರಜ್ಞಾನದಿಂದ ಮುಂದುವರೆದಿದ್ದಾರೆ ಮತ್ತು ಬದಲಿಗೆ ಈ ಹೊಸ ವೀಡಿಯೊ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಆಪ್ಕೋವಾದ ಡಿಜಿಟಲ್ ಪಾವತಿ ಇಂಟರ್ಫೇಸ್ ಜನರು ತಮ್ಮ ಪಾರ್ಕಿಂಗ್ ಮತ್ತು ಸಂಪರ್ಕವಿಲ್ಲದ ಎಂಟರ್ ಮತ್ತು ಎಕ್ಸಿಟ್ ಮೊದಲೇ ಕಾಯ್ದಿರಿಸಲು ಸಹಕಾರವಾಗಿರುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಗೊತ್ತುಪಡಿಸಿದ ಗ್ಯಾರೇಜ್‌ನಲ್ಲಿ ಎವಿಪಿ ಬಳಕೆದಾರರಿಗೆ ಕಾರನ್ನು ಪಾರ್ಕಿಂಗ್ ಮಾಡಲು ಮೀಸಲಾದ ಸ್ಥಳವಿರುತ್ತದೆ. ಇತರರು ಅನುಮತಿಯನ್ನು ಪಡೆದ ನಂತರ ಸಿಸ್ಟಂ ನೀಡುವ ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಮಾಡಬಹುದಾಗಿದೆ

ಈ ಎಲ್ಲಾ ಸಮಯದಲ್ಲಿ ಬಳಕೆದಾರರ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತದೆ. ಒಮ್ಮೆ ಪಾರ್ಕ ಮಾಡಿದ ನಂತರ, ಮಾಲೀಕರು ತಮ್ಮ ಪ್ರವಾಸದಿಂದ ಹಿಂತಿರುಗುವವರೆಗೆ ಅದು ಅಲ್ಲಿಯೇ ಇರುತ್ತದೆ.

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಆಯ್ಕೆಯನ್ನು ಪಡೆಯಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಡ್ರೈವರ್‌ಲೆಸ್ ಪಾರ್ಕಿಂಗ್ ಆಗಿರುವುದರಿಂದ ಪಾರ್ಕ್ ಆದ ಜಾಗದಿಂದ ಡೋರ್ ತೆರೆಯುವ ಅಗತ್ಯವಿರುವುದಿಲ್ಲ. ಇದರಿಂದ ಶೇ.20ರಷ್ಟು ಜಾಗ ಉಳಿಯುತ್ತದೆ. ಇದರಿಂದ ಪಾರ್ಕಿಂಗ್ ಪ್ರದೇಶದಲ್ಲಿ ಹೆಚ್ಚಿನ ಸ್ಪೇಸ್ ಅನ್ನು ಉಳಿಸಬಹುದು. 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಪ್ರಮುಖ ಸೆಡಾನ್ ಆಗಿದೆ.

Most Read Articles

Kannada
English summary
2021 Mercedes S Class Performs World’s First Automatic Valet Parking. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X