ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯ ಹ್ಯಾರಿಯರ್ ಭಾರತೀಯ ಮಾರುಕಟ್ಟೆಯ ಎಸ್‍ಯುವಿಗಳ ವಿಭಾಗದಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಟಾಟಾ ಕಂಪನಿಯು ಹ್ಯಾರಿಯರ್ ಎಸ್‍ಯುವಿಯ ಕ್ಯಾಮೊ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು.

ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಹೊಸ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್ ಹಸಿರು ಬಣ್ಣದ ಆಯ್ಕೆಯನ್ನು ಹೊಂದಿದೆ. ಇದು ಟಾಟಾ ಮೋಟಾರ್ಸ್ ಭಾರತೀಯ ಸೈನ್ಯಕ್ಕಾಗಿ ತಯಾರಿಸುವ ಸಫಾರಿ ಸ್ಟಾರ್ಮ್‌ಗೆ ಹೋಲುತ್ತದೆ. ಹ್ಯಾರಿಯರ್ ಕ್ಯಾಮೊ ಎಡಿಷನ್ ಹಸಿರು ಬಣ್ಣದೊಂದಿಗೆ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇದು ಎಸ್‍ಯುವಿಯ ಒಟ್ಟಾರೆ ಸಿಲೂಯೆಟ್‌ನಿಂದ ಮತ್ತಷ್ಟು ಪೂರಕವಾಗಿದೆ. ಆಫ್-ರೋಡ್ ಸಾಹಸಿಗರಿಗೆ ಅಗ್ರೇಸಿವ್ ಲುಕ್ ನೀಡುವ ಉದ್ದೇಶದಿಂದ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಆದ್ದರಿಂದ ಇದನ್ನು ‘ದಿ ನ್ಯೂ ಕಿಂಗ್ ಆಫ್ ದಿ ಜಂಗಲ್' ಎಂದು ಕರೆಯಲಾಗುತ್ತದೆ.

ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಣ್ಣವು ಸಫಾರಿ ಇಂಡಿಯನ್ ಆರ್ಮಿ ಗ್ರೀನ್‌ಗೆ ಹೋಲುವಂತಿದೆ. ಸ್ಟ್ಯಾಂಡರ್ಡ್ ಹ್ಯಾರಿಯರ್‌ನಲ್ಲಿನ ಕ್ರೋಮ್ ಅಂಶಗಳನ್ನು ಬ್ಲ್ಯಾಕ್ಡ್ ಎಲಿಮೆಂಟ್ ಅಂಶಗಳಿಂದ ಬದಲಾಯಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಇದರಲ್ಲಿ ಸೈಡ್ ಸ್ಕರ್ಟ್‌ಗಳು, ಮುಂಭಾಗದ ಗ್ರಿಲ್‌ನ ಕೆಳಗಿನ ಭಾಗ, ಟೈಲ್‌ಗೇಟ್‌ನ ಕೆಳಗೆ ಸ್ಟ್ರಿಪ್ ಮತ್ತು ಗ್ಲಾಸ್‌ಹೌಸ್‌ನ ಕೆಳಗಿನ ವಿಭಾಗ ಸೇರಿವೆ. ಇನ್ನು ಈ ಎಸ್‍ಯುವಿಯಲ್ಲಿ ಬ್ಲಾಕ್‌ಸ್ಟೋನ್ 17-ಇಂಚಿನ ಅಲಾಯ್ ವ್ಹೀಲ್ ಗಳು ಹೊಂದಿವೆ.

ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಇನ್ನು ಈ ಹೊಸ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್ ನಲ್ಲಿ ಇತರ ಗಮನಾರ್ಹ ಮುಖ್ಯಾಂಶಗಳು ಡೋರುಗಳು, ಹುಡ್ ಮತ್ತು ರೂಫ್ ಮೇಲೆ ವಿಶೇಷ ಕ್ಯಾಮೊ ಡೆಕಲ್‌ಗಳನ್ನು ಒಳಗೊಂಡಿವೆ. ಬಾನೆಟ್ ಮತ್ತು ಕ್ಯಾಮೊ ಬ್ಯಾಡ್ಜಿಂಗ್‌ನಲ್ಲಿನ ಹ್ಯಾರಿಯರ್ ಅಕ್ಷರಗಳು ಹೊರಭಾಗದಲ್ಲಿ ಪ್ರದರ್ಶಿಸಲ್ಪಡುತ್ತವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಕ್ಯಾಬಿನ್ ಒಳಗೆ, ಹೊರಭಾಗಕ್ಕೆ ಹೊಂದಿಕೆಯಾಗುವಂತೆ ನವೀಕರಣಗಳನ್ನು ಮಾಡಲಾಗಿದೆ. ಸ್ಟ್ಯಾಂಡರ್ಡ್ ಹ್ಯಾರಿಯರ್ ಗ್ರೇ ಕ್ಯಾಬಿನ್ ಬಣ್ಣದಿಂದ ಕೂಡಿದರೆ, ಕ್ಯಾಮೊ ಕ್ಯಾಬಿನ್ ಪ್ರೀಮಿಯಂ ಬೆನೆಕೆ- ಕಾಲಿಕೊ ಬ್ಲಾಕ್‌ಸ್ಟೋನ್ ಬಣ್ಣವನ್ನು ಹೊಂದಿದೆ.

ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಇದು ಬ್ಲಾಕ್‌ಸ್ಟೋನ್ ಮ್ಯಾಟ್ರಿಕ್ಸ್ ಫಿನಿಶ್‌ನೊಂದಿಗೆ ಪರಿಷ್ಕೃತ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ಹ್ಯಾರಿಯರ್ ಕ್ಯಾಮೊ ಎಡಿಷನ್ ಸ್ಟೆಲ್ತ್ ಮತ್ತು ಸ್ಟೆಲ್ತ್ ಪ್ಲಸ್ ಎಂಬ ಎರಡು ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಸಂಪೂರ್ಣ ಆಫ್-ರೋಡಿಂಗ್ ಮಾದರಿಯಾಗಿಸಲು ರೂ.26,999 ಗಳ ಅಕ್ಸೇಸರೀಸ್ ಅನ್ನು ಹೆಚ್ಚುವರಿ ವೆಚ್ಚದಲ್ಲಿ ಖರೀದಿಸಬಹುದು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಪ್ಯಾಕೇಜ್‌ನಲ್ಲಿ ಹ್ಯಾರಿಯರ್ ಮ್ಯಾಸ್ಕಾಟ್ ಆನ್ ಹುಡ್, ಹೊಸ ಒಎಂಇಜಿ-ಎಆರ್ಸಿ ಸ್ಕಫ್ ಪ್ಲೇಟ್‌ಗಳು, 3 ಡಿ ಮೋಲ್ಡ್ಡ್ ಫ್ಲೋರ್ ಮತ್ತು ಟ್ರಂಕ್ ಮ್ಯಾಟ್ಸ್, ಆಂಟಿ-ಸ್ಕಿಡ್ ಡ್ಯಾಶ್ ಮ್ಯಾಟ್ಸ್, ರೂಫ್ ಹಳಿಗಳು, ಸೈಡ್ ಸ್ಟೆಪ್ಸ್, ಸನ್ಶೇಡ್ಸ್ ಮತ್ತು ಹೊಸ ಮಿಲಿಟರಿ ಶೈಲಿಯ ಫಾರೆಸ್ಟ್ ಗ್ರೀನ್ ಬ್ಯಾಕ್ ಸೀಟ್ ಆರ್ಗನೈಸರ್ ಸೇರಿವೆ.

ಹ್ಯಾರಿಯರ್ ಕ್ಯಾಮೊ ಎಡಿಷನ್ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್ ನಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‍ಪಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

Most Read Articles

Kannada
English summary
Tata Harrier Camo Green Resembles Safari Indian Army Colour Tvc. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X