ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ಫಾಡಾ, 2020ರ ಅಕ್ಟೋಬರ್ ತಿಂಗಳ ಹೊಸ ವಾಹನಗಳ ರಿಜಿಸ್ಟ್ರೇಷನ್ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಈ ಮಾಹಿತಿಯ ಪ್ರಕಾರ 2020ರ ಅಕ್ಟೋಬರ್‌ ತಿಂಗಳಿನಲ್ಲಿ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣವು 24%ನಷ್ಟು ಕಡಿಮೆಯಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ 14,13,549 ಯೂನಿಟ್‌ ವಾಹನಗಳು ಹೊಸದಾಗಿ ರಿಜಿಸ್ಟರ್ ಆಗಿವೆ. 2019ರ ಅಕ್ಟೋಬರ್ ತಿಂಗಳಿನಲ್ಲಿ 18,59,709 ಯೂನಿಟ್‌ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲಾಗಿತ್ತು. ಆದರೆ ಅಕ್ಟೋಬರ್ ತಿಂಗಳ ಮಾರಾಟ ಪ್ರಮಾಣವು ಸೆಪ್ಟೆಂಬರ್ ತಿಂಗಳಿಗಿಂತ 5.11%ನಷ್ಟು ಹೆಚ್ಚಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ಪ್ರಯಾಣಿಕರ ವಾಹನಗಳ ಸೆಗ್ ಮೆಂಟಿನಲ್ಲಿ ಹೆಚ್ಚಿನ ಕುಸಿತ ಕಂಡು ಬಂದಿದೆ. ಈ ಸೆಗ್ ಮೆಂಟಿನಲ್ಲಿ 2,49,860 ಯೂನಿಟ್‌ ವಾಹನಗಳು ಮಾರಾಟವಾಗಿವೆ. ಈ ಸೆಗ್ ಮೆಂಟಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಹಲವು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ಸಣ್ಣ ಕಮರ್ಷಿಯಲ್ ವಾಹನಗಳಿಗೆ ಮತ್ತೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಮಧ್ಯಮ ಹಾಗೂ ಭಾರೀ ಕಮರ್ಷಿಯಲ್ ವಾಹನಗಳ ಸೆಗ್ ಮೆಂಟ್ ಇನ್ನೂ ಕುಸಿತವನ್ನು ದಾಖಲಿಸುತ್ತಿದೆ. ಇದೇ ವೇಳೆ ಟ್ರಾಕ್ಟರ್ ಸೆಗ್ ಮೆಂಟಿನಲ್ಲಿ 55%ನಷ್ಟು ಬೆಳವಣಿಗೆ ದಾಖಲಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ದ್ವಿಚಕ್ರ ವಾಹನಗಳ ಸೆಗ್ ಮೆಂಟಿನಲ್ಲಿ 10,41,682 ಯೂನಿಟ್ ವಾಹನಗಳು ರಿಜಿಸ್ಟರ್ ಆಗಿದ್ದರೂ, 26.82%ನಷ್ಟು ಕುಸಿತ ದಾಖಲಾಗಿದೆ. ಈ ಸೆಗ್ ಮೆಂಟಿನಲ್ಲಿ ಯಾವುದೇ ಹೊಸ ವಾಹನಗಳು ಬಿಡುಗಡೆಯಾಗದಿರುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಖರೀದಿ ಆರಂಭವಾಗದೇ ಇರುವುದೇ ಇದಕ್ಕೆ ಪ್ರಮುಖ ಕಾರಣ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ತ್ರಿಚಕ್ರ ವಿಭಾಗದಲ್ಲಿನ ಮಾರಾಟವು 64.50%ನಷ್ಟು ಕುಸಿತವನ್ನು ದಾಖಲಿಸಿದೆ. 2019ರ ಅಕ್ಟೋಬರ್ ನಲ್ಲಿ 63,042 ಯೂನಿಟ್‌ಗಳು ಮಾರಾಟವಾಗಿದ್ದರೆ, ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 22,381 ಯೂನಿಟ್‌ಗಳು ಮಾರಾಟವಾಗಿವೆ.

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ಕಮರ್ಷಿಯಲ್ ವಾಹನಗಳ ಸೆಗ್ ಮೆಂಟಿನಲ್ಲಿ 44,480 ಯೂನಿಟ್ ವಾಹನಗಳು ಮಾರಾಟವಾಗಿ 30.32%ನಷ್ಟು ಕುಸಿತ ದಾಖಲಾಗಿದೆ. ಈ ಸೆಗ್ ಮೆಂಟಿನಲ್ಲಿ 2019ರ ಅಕ್ಟೋಬರ್‌ ತಿಂಗಳಿನಲ್ಲಿ 63,837 ಯೂನಿಟ್‌ಗಳು ಮಾರಾಟವಾಗಿದ್ದವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ಇನ್ನು ದೇಶಾದ್ಯಂತ ಕೃಷಿ ಚಟುವಟಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಟ್ರಾಕ್ಟರ್ ಮಾರಾಟವು ಮೊದಲಿಗಿಂತ ಉತ್ತಮವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ 55,146 ಯೂನಿಟ್‌ ಟ್ರಾಕ್ಟರ್ ಗಳು ಮಾರಾಟವಾಗಿವೆ. ಈ ಮೂಲಕ ಟ್ರಾಕ್ಟರ್ ಮಾರಾಟವು 55.53%ನಷ್ಟು ಹೆಚ್ಚಳವಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

2019ರ ಅಕ್ಟೋಬರ್‌ನಲ್ಲಿ 35,456 ಯೂನಿಟ್‌ ಟ್ರಾಕ್ಟರ್ ಗಳು ಮಾರಾಟವಾಗಿದ್ದವು. ದಸರಾ ಹಬ್ಬದ ಸಂದರ್ಭದಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಟಾಟಾ ಮೋಟಾರ್ಸ್‌ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಮಾರಾಟ ಮಾಡಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

2020ರ ದಸರಾ ಹಬ್ಬದ ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ವಿತರಿಸಲಾಗಿದೆ. ಈ ಹತ್ತು ದಿನಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕಾರುಗಳ ಮಾರಾಟವು ಎರಡು ಅಂಕಿಗಳ ಬೆಳವಣಿಗೆಯನ್ನು ದಾಖಲಿಸಿದೆ.

ಭಾರೀ ಪ್ರಮಾಣದಲ್ಲಿ ಕುಸಿದ ಹೊಸ ವಾಹನಗಳ ರಿಜಿಸ್ಟ್ರೇಷನ್ ಪ್ರಮಾಣ

ದ್ವಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷದಂತೆಯೇ ಇದ್ದರೂ, ಕಾರು ಮಾರಾಟವು ಮಾತ್ರ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ.

Most Read Articles

Kannada
English summary
New vehicle registration decreases by 24 percent in October 2020. Read in Kannada.
Story first published: Tuesday, November 10, 2020, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X