ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಏಳು ಸೀಟರ್‍‍ಗಳ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು 5 ಸೀಟಿನ ಟಿಗ್ವಾನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಂಪನಿಯು ಮುಂದಿನ ಎರಡು ದಿನಗಳಲ್ಲಿ 5 ಸೀಟಿನ ಟಿಗ್ವಾನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು. ಹೊಸ 5 ಸೀಟಿನ ಟಿಗ್ವಾನ್ ಎಸ್‍ಯುವಿಯು ಹೊಸ ವಿನ್ಯಾಸವನ್ನು ಹೊಂದಿರಲಿದೆ. ಈ ಹೊಸ ಟಿಗ್ವಾನ್ ಎಸ್‍ಯುವಿಯನ್ನು ಸ್ಥಳೀಯವಾಗಿ ಜೋಡಿಸಬಹುದು.

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಹೊಸ 5 ಸೀಟಿನ ಟಿಗ್ವಾನ್ ಎಸ್‍ಯುವಿ ಮತ್ತು ಟಿಗ್ವಾನ್ ಆಲ್‌ಸ್ಪೇಸ್ ಮಾದರಿಯ ನಡುವೆ ಸಾಕಷ್ಟು ವ್ಯತ್ಯಾಸ ಇರಲಿದೆ. ಹೊಸ ಎಂಜಿನ್ ಆಯ್ಕೆಯೊಂದಿಗೆ 5 ಸೀಟಿನ ಟಿಗ್ವಾನ್ ಎಸ್‍ಯುವಿ ಬಿಡುಗಡೆಯಾಗಲಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯಲ್ಲಿ 2.0 ಲೀಟರಿನ ಟರ್ಬೊ‍‍ಚಾರ್ಜ್ಡ್ ಟಿ‍ಎಸ್‍ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 187 ಬಿ‍‍ಹೆಚ್‍‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸ್ಟಾಂಡರ್ಡ್ 7 ಸ್ಪೀಡ್‍‍ನ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಫೋಕ್ಸ್‌ವ್ಯಾಗನ್ ಕಂಪನಿಯ 4 ಮೋಷನ್ ಆಲ್ ವ್ಹೀಲ್ ಡ್ರೈವ್ (ಎ‍‍ಡಬ್ಲ್ಯು‍‍ಡಿ) ಮೂಲಕ ಪವರ್ ಕಳುಹಿಸುತ್ತದೆ. ಮೂರನೇ ಸಾಲಿನ ಸೀಟಿಂಗ್‍‍ಗಳಿಗಾಗಿ ಹೊಸ ಎಸ್‍‍ಯುವಿಯ ಗಾತ್ರ ಹಾಗೂ ವ್ಹೀಲ್‍‍ಬೇಸ್ ಅನ್ನು ಹೆಚ್ಚಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಹೊಸ 5 ಸೀಟಿನ ಟಿಗ್ವಾನ್ ಎಸ್‍ಯುವಿ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ಹೊಂದಿರಲಿದೆ. 1.5 ಟಿಎಸ್‌ಐ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹೊಂದಿರಲಿದೆ.

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍ಯುವಿಯು ಇಂಟಿಗ್ರೇಟೆಡ್ ಎಲ್‍ಇ‍‍ಡಿ ಡಿ‍ಆರ್‍ಎಲ್ ಹೊಂದಿರುವ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಟರ್ನ್ ಇಂಡಿಕೇಟರ್, ಎಲ್‍ಇ‍‍ಡಿ ಫಾಗ್ ಲ್ಯಾಂಪ್ ಹಾಗೂ ಹಿಂಭಾಗದಲ್ಲಿ ಎಲ್‍ಇ‍‍ಡಿ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ.

MOST READ: ಹೊಸ ಹೋಂಡಾ ಸಿಟಿ ಕಾರಿನ ಟೀಸರ್ ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಹೊಸ ಟಿಗ್ವಾನ್ ಎಸ್‍‍ಯುವಿಯಲ್ಲಿ ಅಲಾಯ್ ವ್ಹೀಲ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಈ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಬ್ಲಾಕ್/ಬೀಜ್ ಡ್ಯುಯಲ್ ಟೋನ್ ಹೊಂದಿರುವ ಡ್ಯಾಶ್‍‍ಬೋರ್ಡ್ ನೀಡಲಾಗಿದೆ. ಸೆಂಟರ್ ಕಂಸೋಲ್‍‍‍ನಲ್ಲಿ ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳಿಗೆ ಹೊಂದಿಕೊಳ್ಳುವ ದೊಡ್ಡ ಗಾತ್ರದ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ ಬ್ಲೂಟೂಥ್ ಕನೆಕ್ಟಿವಿಟಿ ನೀಡಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಅತ್ಯುತ್ತಮ ಫೀಚರ್ ಗಳೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರಲಿದೆ. ಈ ಎಸ್‍ಯುವಿಯನ್ನು ಸ್ಥಳೀಯವಾಗಿ ಜೋಡಿಸುವುದರಿಂದ ಸ್ಮರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
New generation Volkswagen Tiguan set for Lunch. Read In Kannada.
Story first published: Tuesday, June 30, 2020, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X