Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನವರಿಯಿಂದ ಪ್ರಾರಂಭವಾಗಲಿದೆ ಟಾಟಾ ಗ್ರಾವಿಟಾಸ್ ಎಸ್‍ಯುವಿ ಉತ್ಪಾದನೆ
ಟಾಟಾ ಮೋಟಾರ್ಸ್ ಕಂಪನಿಯು ಹೊಸ ಗ್ರಾವಿಟಾಸ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿಯು ಭಾರತದಲ್ಲಿ ಈಗಾಗಲೇ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ.

ಟಾಟಾ ಕಂಪನಿಯು ಈ ವರ್ಷ ಫೇಸ್‌ಲಿಫ್ಟೆಡ್ ಟಿಯಾಗೊ, ಟೀಗೊರ್ ಮತ್ತು ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಮತ್ತು ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಜೊತೆಗೆ ನವೀಕರಿಸಿದ ಹ್ಯಾರಿಯರ್ ಅನ್ನು ಸಹ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಫೇಸ್‌ಲಿಫ್ಟ್‌ಗಳು ಮತ್ತು ಹೊಸ ಮಾದರಿಗಳು ಕಳೆದ ನಾಲ್ಕು ತಿಂಗಳುಗಳಲ್ಲಿ ಗಮನಾರ್ಹವಾದ ಮಾರಾಟವನ್ನು ದಾಖಲಿಸುವಲ್ಲಿ ಸಹಾಯ ಮಾಡಿವೆ,

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರದ ಕಾರು ಉತ್ಪಾದಕರ ಸ್ಥಾನಗಳಲ್ಲಿ ಮೂರನೇ ಸ್ಥಾನವನ್ನು ಟಾಟಾ ಮೋಟಾರ್ಸ್ ಪಡೆದುಕೊಂಡಿದೆ. ಟಾಟಾ ಕಾರುಗಳ ಮಾರಾಟದಲ್ಲಿ ಉತ್ತಮ ಚೇತರಿಕೆಯನ್ನು ಕಂಡಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ವರ್ಷದ ಪೆಬ್ರವರಿಯಲ್ಲಿ 7-ಸೀಟರ್ ಗ್ರಾವಿಟಾಸ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಗ್ರಾವಿಟಾಸ್ ಎಸ್‍ಯುವಿಯನ್ನು ಫೆಬ್ರವರಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದರು,

ಈ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿಯ ಉತ್ಪಾದನೆಯು ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಈ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಎಂಜಿ ಹೆಕ್ಟರ್ ಪ್ಲಸ್, ಬಿಡುಗಡೆಯಾಗಲಿರುವ ಜೀಪ್ ಕಂಪಾಸ್ 7 ಸೀಟರ್ ಮತ್ತು ಹ್ಯುಂಡೈ ಕ್ರೆಟಾ 7 ಸೀಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಗ್ರಾವಿಟಾಸ್ ಎಸ್‍ಯುವಿಯನ್ನು ತನ್ನದೇ ಸರಣಿಯ ಹ್ಯಾರಿಯರ್ ಎಸ್‍ಯುವಿಗೆ ಹೋಲಿಸಿದರೆ ಹಲವರು ಬದಲಾವಣೆಗಳನ್ನು ಹೊಂದಿದೆ. ಟಾಟಾ ಗ್ರಾವಿಟಾಸ್ ಮೂರು ಸಾಲಿನ ಸೀಟುಗಳ ವಿನ್ಯಾಸದಲ್ಲಿ 7 ಸಿಟುಗಳು ಅಥವಾ 6 ಸೀಟುಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಎರಡನೇ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟುಗಳನ್ನು ನೀಡಲಾಗುತ್ತದೆ. ಟಾಟಾ ಗ್ರಾವಿಟಾಸ್ ಎಸ್‍ಯುವಿಯು 4,661 ಎಂಎಂ ಉದ್ದ, 1,894 ಮಿಮೀ ಅಗಲ ಮತ್ತು 1,786 ಎಂಎಂ ಎತ್ತರವನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಟಾಟಾ ಹ್ಯಾರಿಯರ್ ಎಸ್‍ಯುವಿಗಿಂತ ಗ್ರಾವಿಟಾಸ್ ಮಾದರಿಯು 63 ಎಂಎಂ ಉದ್ದ, 72 ಎಂಎಂ ಅಗಲ ಮತ್ತು 80 ಎಂಎಂ ಎತ್ತರವನ್ನು ಹೊಂದಿದೆ. ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚುವರಿ ಹೆಡ್‌ರೂಮ್‌ಗಾಗಿ, ಗ್ರಾವಿಟಾಸ್‌ನ ರೂಫ್ ಹೆಚ್ಚಿಸಲಾಗಿದೆ.

ಟಾಟಾ ಗ್ರಾವಿಟಾಸ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಹ್ಯಾರಿಯರ್ ಮಾದರಿಯಲ್ಲಿರುವಂತಹ ಅದೇ ಫೀಚರ್ ಗಳನ್ನು ಹೊಂದಿರಲಿದೆ. ಇನ್ನು ಟಾಟಾ ಗ್ರಾವಿಟಾಸ್ ಎಸ್‍ಯುವಿಯಲ್ಲಿ ಮುಂಭಾಗದ ಬಂಪರ್‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍ಗಳನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಗ್ರಾವಿಟಾಸ್ ಎಸ್‍ಯುವಿಯು ಹ್ಯಾರಿಯರ್ ಮಾದರಿಯಂತೆ ಎಕ್ಸ್ಇ, ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಬಹುದು. ಈ ಎಸ್‍ಯುವಿಯಲ್ಲಿ 16-ಇಂಚಿನ ಅಲಾಯ್ ವ್ಹೀಲ್ಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವಿಭಿನ್ನವಾದ ಬೂಟ್ ಲಿಡ್ ಮತ್ತು ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿಯಲ್ಲಿ ಫಿಯೆಟ್ ಮೂಲದ ಅದೇ 2.0-ಲೀಟರ್ ಕ್ರೈಟೆಕ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಪವರ್ ಅನ್ನು ಟಯರುಗಳಿಗೆ ಕಳುಹಿಸಲಾಗುತ್ತದೆ, ಗ್ರಾವಿಟಾಸ್ ಎಸ್‍ಯುವಿಯನ್ನು ಹೊರತುಪಡಿಸಿ, ಟಾಟಾ ಇನ್ನೂ ಎರಡು ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಶೀಘ್ರದಲ್ಲೇ ಟಾಟಾ ಕಂಪನಿಯು ಟಾಟಾ ಆಲ್‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯ ಮತ್ತು ಹೆಚ್‌ಬಿಎಕ್ಸ್ ಮಿನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ