ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟಿ.7 ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆ ಮಾಡಿದ್ದು, ಹೊಸ ಟ್ರಕ್ ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶದಲ್ಲಿನ ದಿನನಿತ್ಯದ ಸರಕು ಸಾಗಾಣಿಕೆ ಅನುಕೂಲಕವಾಗುವಂತೆ ನಿರ್ಮಾಣ ಮಾಡಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ಅಡ್ವಾನ್ಸ್ ಟೆಕ್ನಾಲಜಿಯೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಟಿ.7 ಟ್ರಕ್ ಮಾದರಿಯು ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ವಾಹನ ದಟ್ಟಣೆಯಿಂದ ಕೂಡಿರುವ ನಗರಪ್ರದೇಶಗಳಲ್ಲಿನ ಸುಲಭ ಸಂಚರಿಸಲು ಸಾಧ್ಯವಾಗುವಂತೆ ಅಭಿವೃದ್ದಿಪಡಿಸಲಾಗಿದೆ. ಹೊಸ ಟ್ರಕ್ ಮಾದರಿಯ ವಿನ್ಯಾಸವು ತುಸು ಕಡಿಮೆ ಅಗಲ ಹೊಂದಿದ್ದು, ಡೆಕ್ ಉದ್ದವು ಪ್ರತಿಸ್ಪರ್ಧಿ ಟ್ರಕ್ ಮಾದರಿಗಳಿಂತಲೂ ಹೆಚ್ಚಿನ ಸ್ಥಳಾವಕಾಶ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ಲಾಜಿಸ್ಟಿಕ್ ಕಂಪನಿಗಳ ಬೇಡಿಕೆ ಅನುಸಾರವಾಗಿ ಹೊಸ ಟ್ರಕ್ ಮಾದರಿಯನ್ನು ಸಿದ್ದಪಡಿಸಲಾಗಿದ್ದು, ಮಾಡ್ಯೂಲರ್ ಚಾರ್ಸಿಸ್ ವಿನ್ಯಾಸವನ್ನು ಹೊಂದಿದೆ. ಹಾಗೆಯೇ ಗ್ರಾಹಕರು ತಮ್ಮ ಬೇಡಿಕೆ ಅನುಸಾರವಾಗಿ ನಾಲ್ಕು ಟೈರ್ ಮತ್ತು ಆರು ಟೈರ್ ಮಾದರಿಯನ್ನು ಖರೀದಿಸಬಹುದಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ವಾಣಿಜ್ಯ ಸರಕು ಸಾಗಾಣಿಕೆಗೆ ಅನುಗುಣವಾಗಿ ಟಿ.7 ಟ್ರಕ್ ಮಾದರಿಯಲ್ಲಿ ಎರಡು ಟೈರ್ ಆವೃತ್ತಿಗಳನ್ನು ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಮಾದರಿಯ ಕ್ಯಾಬಿನ್ ಸೌಲಭ್ಯವನ್ನು ಅಭಿವೃದ್ದಿಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ಹೊಸ ಟಿ.7 ಟ್ರಕ್ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನಾಲ್ಕು ಸಿಲಿಂಡರ್‌ ಪ್ರೇರಣೆಯ 4ಎಸ್‌ಪಿಸಿಆರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 100-ಬಿಎಚ್‌ಪಿ ಮತ್ತು 300-ಎನ್ಎಂ ಉತ್ಪಾದನಾ ಶಕ್ತಿಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತದೆ. ಉತ್ತಮ ಇಂಧನ ದಕ್ಷತೆಯಿಂದಾಗಿ ನಿರ್ವಹಣಾ ವೆಚ್ಚಗಳು ಸಾಕಷ್ಟು ಕಡಿತಗೊಳ್ಳಲಿದ್ದು, ಟ್ರಕ್ ವಿನ್ಯಾಸವು ಸಹ ಗ್ರಾಹಕರನ್ನು ಆಕರ್ಷಿಸಲಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ಟಿ.7 ಟ್ರಕ್ ಮಾದರಿಯಲ್ಲಿನ ಕ್ಯಾಬಿನ್ ವಿನ್ಯಾಸವು ಕೂಡಾ ಸಾಕಷ್ಟು ಆಕರ್ಷಕವಾಗಿದ್ದು, ಟ್ರಕ್ ಚಾಲಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂಲಕ ವಾಣಿಜ್ಯ ವಾಹನಗಳಲ್ಲೂ ತನ್ನ ಸುರಕ್ಷಾ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಟಾಟಾ ಯಶಸ್ವಿಯಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ಹೊಸ ಟ್ರಕ್‌ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಏರ್ ಬ್ರೇಕ್, ಬೆಸ್ಟ್ ಇನ್ ಸೆಗ್ಮೆಂಟ್ ಎನ್‌ವಿಹೆಚ್ ಲೆವಲ್ಸ್, ಮ್ಯೂಜಿಕ್ ಸಿಸ್ಟಂ, ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಎಲ್ಇಡಿ ಟೈಲ್ ಲ್ಯಾಂಪ್ಸ್ ಜೋಡಿಸಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ವಾಣಿಜ್ಯ ವಾಹನಗಳ ನಿರ್ವಹಣಾ ಕಂಪನಿಗಳಿಗೆ ನೇರವಾಗಲು ಕನೆಕ್ವೆಡ್ ಫೀಚರ್ಸ್ ನೀಡಲಿದ್ದು, ಕನೆಕ್ಟೆಡ್ ಫೀಚರ್ಸ್‌ಗಳು ವಾಣಿಜ್ಯ ವಾಹನಗಳ ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ ಮಾಡಿದ ಟಾಟಾ

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ವಾಣಿಜ್ಯ ವಾಹನಗಳ ಮೂಲಕ ಮತ್ತಷ್ಟು ಮುಂಚೂಣಿ ಸಾಧಿಸಲಿದ್ದು, ಟಾಟಾ ಮೋಟಾರ್ಸ್ ನಿರ್ಮಾಣದ ಟ್ರಕ್ ಮಾದರಿಗಳು ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ 50ಕ್ಕೂ ಹೆಚ್ಚ ರಾಷ್ಟ್ರಗಳಲ್ಲಿ ಗರಿಷ್ಠ ಬೇಡಿಕೆ ಹೊಂದುವ ಮೂಲಕ ದೇಶದ ನಂ.1 ವಾಣಿಜ್ಯ ವಾಹನ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿದೆ.

Most Read Articles

Kannada
English summary
Tata Motors Introduce Ultra T.7 Truck For Urban Transportation. Read in Kanada.
Story first published: Thursday, December 24, 2020, 0:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X