ವಾರದ ಟಾಪ್ 5 ಆಟೋ ಸುದ್ದಿ: ಆಟೋ ಉದ್ಯಮಕ್ಕೆ ವಿನಾಯ್ತಿ, ಟೊಯೊಟಾ ಲಾಕೌಟ್, ಬಿಡುಗಡೆಗೆ ಸಿದ್ದವಾದ ಮ್ಯಾಗ್ನೈಟ್

ಭಾರತೀಯ ಆಟೋ ಉದ್ಯಮವು ದೀಪಾವಳಿ ಸಂಭ್ರಮದಲ್ಲಿ ನೀರಿಕ್ಷೆಗೂ ಮೀರಿ ಬೆಳವಣಿಗೆ ಸಾಧಿಸುತ್ತಿದ್ದು, ಹೊಸ ವಾಹನಳ ಬಿಡುಗಡೆ ಮತ್ತು ಮಾರಾಟ ಪ್ರಕ್ರಿಯೆಯೂ ಜೋರಾಗಿದೆ. ಹಾಗೆಯೇ ಲಾಕ್‌ಡೌನ್ ಅವಧಿಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಉತ್ಪಾದನಾ ವಲಯವನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಯಾಗಿದ್ದು, ಈ ವಾರದ ಪ್ರಮುಖ ಆಟೋ ಸುದ್ದಿಗಳು ಇಲ್ಲಿವೆ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಬಿಡಿಭಾಗಗಳ ತಯಾರಿಕೆ ಮೇಲಿನ ಹೂಡಿಕೆಗೆ ಅನುಮೋದನೆ

ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ 10 ಪ್ರಮುಖ ಕ್ಷೇತ್ರಗಳ ಉತ್ಪಾದನೆ ಸಂಬಂಧಿತ ಹೂಡಿಕೆ (ಪಿಎಲ್ಐ) ಯೋಜನೆಗೆ ರೂ.1.46 ಲಕ್ಷ ಕೋಟಿಗಳ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದಾಗಿ ಭಾರತದ ವಾಹನ ಉದ್ಯಮ ಹಾಗೂ ಬಿಡಿಭಾಗಗಳ ತಯಾರಕರು ಹೆಚ್ಚು ಲಾಭ ಪಡೆಯಲಿದ್ದಾರೆ.

ಕೇಂದ್ರ ಸರ್ಕಾರದ ಪ್ರೋತ್ಸಾಹಕ ಯೋಜನೆಗೆ ಭಾರತೀಯ ಆಟೋಮೊಬೈಲ್ ಅಸೋಸಿಯೇಷನ್ ​​(ಎಫ್‌ಎಡಿಎ) ಬೆಂಬಲ ನೀಡಿದೆ. ಪ್ರೋತ್ಸಾಹಕ ಯೋಜನೆಯನ್ನು ಫಾಡಾ ಸ್ವಾಗತಿಸಿದ್ದು, ಈ ಯೋಜನೆಯಿಂದ ಭಾರತೀಯ ಆಟೋಮೊಬೈಲ್ ಉದ್ಯಮವು ಹೆಚ್ಚಿನ ಲಾಭ ಪಡೆಯಲಿದೆ ಎಂದು ಹೇಳಿದೆ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಮುಂದಿನ ಐದು ವರ್ಷಗಳಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ಸುಮಾರು ರೂ.57,042 ಕೋಟಿಗಳ ನೆರವು ದೊರೆಯಲಿದ್ದು, ಭಾರತದ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಜಾಗತಿಕವಾಗಿ ಉತ್ಪನ್ನಗಳನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಥರ್ಡ್ ವಿಮೆಗೂ ಫಾಸ್ಟ್‌ಟ್ಯಾಗ್ ಕಡ್ಡಾಯ

2021ರ ಜನವರಿ 1ರಿಂದ ಟೋಲ್ ಗೇಟ್‌ ಮೂಲಕ ಸಾಗುವ ಎಲ್ಲಾ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದ್ದು, 2021ರ ಏಪ್ರಿಲ್ 1ರಿಂದ ನಾಲ್ಕು ಚಕ್ರ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಮಾಡಿಸುವಾಗ ಫಾಸ್ಟ್‌ಟ್ಯಾಗ್ ಸಂಖ್ಯೆಯನ್ನು ನೀಡಬೇಕೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಹಾಗೆಯೇ 2017ರ ಡಿಸೆಂಬರ್ 1ಕ್ಕೂ ಮುನ್ನ ಮಾರಾಟವಾದ ಎಲ್ಲಾ ಎಂ ಹಾಗೂ ಎನ್ ವಿಭಾಗದ ನಾಲ್ಕು ಚಕ್ರ ವಾಹನಗಳಿಗೆ 2020ರ ಜನವರಿ 1ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿರಲಿದ್ದು, 1989ರ ಮೋಟಾರು ವಾಹನ ಕಾಯ್ದೆಯನ್ವಯ ಹೊಸ ನಾಲ್ಕು ಚಕ್ರ ವಾಹನಗಳನ್ನು ರಿಜಿಸ್ಟರ್ ಮಾಡುವಾಗ ಫಾಸ್ಟ್‌ಟ್ಯಾಗ್ ಸಂಖ್ಯೆಯನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಟೊಯೊಟಾ ಲಾಕೌಟ್‌ನಿಂದ ಹೊಸ ವಾಹನಗಳ ಬಿಡುಗಡೆ ಮೇಲೆ ಎಫೆಕ್ಟ್

ಕರೋನಾ ವೈರಸ್ ಪರಿಣಾಮ ಕಾರು ಉತ್ಪಾದನೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಕಾರು ಕಂಪನಿಗಳು ಇದೀಗ ಬೇಡಿಕೆ ಹೆಚ್ಚುತ್ತಿದ್ದಂತೆ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದ್ದು, ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಭರಾಟೆಯಲ್ಲಿ ಕಾರ್ಮಿಕರ ನೀತಿಗಳಿಗೆ ವಿರುದ್ಧವಾಗಿ ಉತ್ಪಾದನೆ ಕೈಗೊಳ್ಳುತ್ತಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಕಾರ್ಮಿಕರ ಮತ್ತ ಆಡಳಿತ ಮಂಡಳಿಯ ನಡುವಿನ ಕಲಹದಿಂದ ಟೊಯೊಟಾ ಕಂಪನಿಯು ತಾತ್ಕಾಲಿಕವಾಗಿ ಲಾಕೌಟ್ ಘೋಷಣೆ ಮಾಡಿದ್ದು, ಲಾಕೌಟ್‌ದಿಂದ ಹೊಸ ವಾಹನಗಳ ಉತ್ಪಾದನೆ ಕುಂಠಿತಗೊಳ್ಳುವುದರ ಜೊತೆಗೆ ಹೊಸ ವಾಹನಗಳ ಬಿಡುಗಡೆಯ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ನಿಸ್ಸಾನ್ ಮ್ಯಾಗ್ನೈಟ್

ಮ್ಯಾಗ್ನೈಟ್ ಕಾರು ಖರೀದಿಗೆ ನಿಸ್ಸಾನ್ ಕಂಪನಿಯು ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಇದುವರೆಗೂ ಆರಂಭಿಸಿಲ್ಲವಾದರೂ ಆಸಕ್ತ ಗ್ರಾಹಕರು ಡೀಲರ್ಸ್ ಮಟ್ಟದಲ್ಲಿ ಬುಕ್ಕಿಂಗ್ ಸಲ್ಲಿಸುತ್ತಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಳ್ಳುವ ಸುಳಿವು ನೀಡಿದೆ. ಹೊಸ ಕಾರು ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಸ್ಪೋರ್ಟಿ ಲುಕ್‌ನೊಂದಿಗೆ ಕಟಿಂಗ್ ಎಡ್ಜ್ ವಿನ್ಯಾಸಗಳನ್ನು ಪಡೆದುಕೊಂಡಿದೆ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಮಾಹಿತಿಗಳ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.55 ಲಕ್ಷ ಬೆಲೆಯೊಂದಿಗೆ ಇದೇ ತಿಂಗಳು 26ಕ್ಕೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರಿನ ಬಿಡುಗಡೆ ದಿನಾಂಕ ಮತ್ತು ಬೆಲೆ ಮಾಹಿತಿ ಬಗೆಗೆ ಇನ್ನು ಯಾವುದೇ ನಿಖರ ಮಾಹಿತಿಗಳಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಹೊಸ ಥಾರ್‌ನಲ್ಲಿ ಬೆಸ್ ಎಎಕ್ಸ್ ವೆರಿಯೆಂಟ್ ಸ್ಥಗಿತ

ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಮಾದರಿಗಳಲ್ಲೂ ಸಾಫ್ಟ್ ಮತ್ತು ಹಾರ್ಡ್ ಟಾಪ್ ವರ್ಷನ್‌ಗಳನ್ನು ನೀಡಲಾಗಿದೆ. ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಆರಂಭಿಕ ಆವೃತ್ತಿಗಿಂತಲೂ ಟಾಪ್ ಎಂಡ್ ಮಾದರಿಗಳಾದ ಡೀಸೆಲ್ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚು ಬೇಡಿಕೆ ಹರಿದುಬರುತ್ತಿದೆ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಗ್ರಾಹಕರ ಬೇಡಿಕೆಯೆಂತೆ ಮಹೀಂದ್ರಾ ಕಂಪನಿಯು ಥಾರ್ ಕಾರಿನ ಆರಂಭಿಕ ಆವೃತ್ತಿಯಾದ ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಸ್ಟ್ಯಾಂಡರ್ಡ್ ಟಾಪ್ ಪೆಟ್ರೋಲ್ ಮ್ಯಾನುವಲ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಪೆಟ್ರೋಲ್ ಮ್ಯಾನುವಲ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಡೀಸೆಲ್ ಮ್ಯಾನುವಲ್ ಆವೃತ್ತಿಗಳ ಮಾರಾಟ ಕೈಬಿಡಲು ನಿರ್ಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ವೆಹಿಕಲ್ ಇನ್ಶ್ಯೂರೆನ್ಸ್ ಆರಂಭಿಸಿದ ಏರ್‌ಟೆಲ್

ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್, ಭಾರ್ತಿ ಆಕ್ಸಾ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಎರಡೂ ಕಂಪನಿಗಳು ಈ ಸಹಭಾಗಿತ್ವದಲ್ಲಿ ಕಾರುಗಳಿಗೆ ಸಮಗ್ರ ವಿಮಾ ಯೋಜನೆಯನ್ನು ನೀಡುವುದಾಗಿ ಹೇಳಿವೆ.

ಟಾಪ್ 5 ಸುದ್ದಿ: ಆಟೋ ಉದ್ಯಮಕ್ಕೆ ಕೇಂದ್ರದ ವಿನಾಯ್ತಿ, ಟೊಯೊಟಾ ಲಾಕೌಟ್

ಏರ್‌ಟೆಲ್ ಕಂಪನಿಯು ಏರ್‌ಟೆಲ್ ಪೇಮೆಂಟ್ಸ್ ಎಂಬ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನಿರ್ವಹಿಸುತ್ತದೆ. ಭಾರ್ತಿ ಕಂಪನಿಯು ಆಕ್ಸಾ ಜನರಲ್ ಇನ್ಶೂರೆನ್ಸ್‌ನೊಂದಿಗೆ ಸೇರಿ ಹಲವು ವಿಮಾ ಸೇವೆಗಳನ್ನು ನೀಡುತ್ತಿದೆ. ಹೊಸ ವಿಮಾ ಯೋಜನೆಯಲ್ಲಿ ಏರ್‌ಟೆಲ್ ಹಾಗೂ ಭಾರ್ತಿ ಆಕ್ಸಾ ಕಂಪನಿಗಳು ವಾಹನ ಕಳ್ಳತನ, ನೈಸರ್ಗಿಕ ಅಥವಾ ಮಾನವ ನಿರ್ಮಿತ ಹಾನಿಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Most Read Articles

Kannada
English summary
Top 5 Auto News Of The Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X