Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನವೆಂಬರ್ ಅವಧಿಯಲ್ಲಿ ಹೆಚ್ಚಳವಾದ ಕಾರು ಮತ್ತು ಟ್ರ್ಯಾಕ್ಟರ್ ನೋಂದಣಿ
ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಸಂಸ್ಥೆಯು ನವೆಂಬರ್ ಅವಧಿಯಲ್ಲಿನ ವಾಹನಗಳ ನೋಂದಣಿ ಸಂಖ್ಯೆಯನ್ನು ಬಹಿರಂಗಪಡಿಸಿದ್ದು, ನವೆಂಬರ್ ಅವಧಿಯಲ್ಲಿ ವಾಹನ ಮಾರಾಟದಲ್ಲಿ ಕಾರು ಮತ್ತು ಟ್ರ್ಯಾಕ್ಟರ್ ಹೊರತುಪಡಿಸಿ ಇನ್ನುಳಿದ ವಾಹನ ಮಾದರಿಗಳು ಗ್ರಾಹಕರ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸಿವೆ.

ದಸರಾ ಮತ್ತು ದೀಪಾವಳಿ ಸಂಭ್ರಮದ ವೇಳೆ ಬಹುತೇಕ ಆಟೋ ಕಂಪನಿಗಳು ನೀರಿಕ್ಷೆಗೂ ಮೀರಿ ಗ್ರಾಹಕರ ಬೇಡಿಕೆ ಪಡೆದುಕೊಂಡಿದ್ದರೂ ಕಳೆದ ವರ್ಷದ ವಾಹನ ಮಾರಾಟ ಸಂಖ್ಯೆಗೂ ಪ್ರಸ್ತುತ ನೋಂದಣಿಯಾಗಿರುವ ವಾಹನಗಳ ಸಂಖ್ಯೆಗೂ ಸಾಕಷ್ಟು ಏರಿಳಿಕೆಯಾಗಿದೆ. ನವೆಂಬರ್ ಅವಧಿಯಲ್ಲಿ ಹೊಸ ವಾಹನ ನೋಂದಣಿಯಲ್ಲಿ ಪ್ರಯಾಣಿಕರ ಕಾರು ಮಾದರಿಗಳು ಮತ್ತು ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್ ಮಾದರಿಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

ಹೊಸ ವಾಹನಗಳ ನೋಂದಣಿಯಲ್ಲಿ ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನ ಮಾರಾಟದಲ್ಲಿ ಕುಸಿತ ಕಂಡುಬಂದಿದ್ದು, ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಒಟ್ಟು 25,15,256 ವಾಹನಳನ್ನು ಮಾರಾಟಮಾಡಿವೆ.

ಆದರೆ ಕಳೆದ ವರ್ಷದ ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ 26,40,280 ವಾಹನಗಳನ್ನು ಮಾರಾಟ ಮಾಡಿದ್ದ ಆಟೋ ಉತ್ಪಾದನಾ ಕಂಪನಿಗಳು ಈ ಬಾರಿ ಶೇ.4 ರಷ್ಟು ಹಿನ್ನಡೆ ಅನುಭವಿಸಿದ್ದು, ಕಾರು ಮತ್ತು ಟ್ರ್ಯಾಕ್ಟರ್ ನೋಂದಣಿಯಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಈ ವರ್ಷದ ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ 19,06,490 ಯುನಿಟ್ ದ್ವಿಚಕ್ರ ವಾಹನಗಳು ಮಾರಾಟಗೊಂಡಲ್ಲಿ 34,328 ಯನಿಟ್ ತ್ರಿ ಚಕ್ರ ವಾಹನಗಳು, 69,838 ಯುನಿಟ್ ವಾಣಿಜ್ಯ ವಾಹನಗಳು, 4,31,597 ಯನಿಟ್ ಕಾರುಗಳು ಮತ್ತು 73,003 ಯನಿಟ್ ಟ್ರ್ಯಾಕ್ಟರ್ ಮಾರಾಟಗೊಂಡಿವೆ. ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಶೇ.6 ರಷ್ಟು, ತ್ರಿ ಚಕ್ರ ವಾಹನಗಳ ನೋಂದಣಿಯಲ್ಲಿ ಶೇ.60 ರಷ್ಟು ಮತ್ತು ವಾಣಿಜ್ಯ ವಾಹನಗಳ ನೋಂದಣಿಯಲ್ಲಿ ಶೇ.22 ರಷ್ಟು ಕುಸಿತ ಕಂಡುಬಂದಿದ್ದರೆ ಕಾರುಗಳ ನೋಂದಣಿಯಲ್ಲಿ ಶೇ.13ರಷ್ಟು ಮತ್ತು ಟ್ರ್ಯಾಕ್ಟರ್ ನೋಂದಣಿಯಲ್ಲಿ ಶೇ. 48ರಷ್ಟು ಹೆಚ್ಚಳಗೊಂಡಿದೆ.

ಕರೋನಾ ವೈರಸ್ ಪರಿಣಾಮ ಸತತ ಹಿನ್ನಡೆ ಅನುಭವಿಸಿದ್ದ ಹಲವಾರು ಆಟೋ ಕಂಪನಿಗಳು ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳವಣಿ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ವಾಹನ ಮಾರಾಟ ಮತ್ತಷ್ಟು ಸುಧಾರಣೆಗೊಳ್ಳುವ ನೀರಿಕ್ಷೆಯಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವೈರಸ್ ಪರಿಣಾಮ ಸ್ವಂತ ಬಳಕೆಯ ವಾಹನಗಳ ಸಂಖ್ಯೆಯು ಹೆಚ್ಚುತ್ತಿರುವ ಆಟೋ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಕೃಷಿ ಚಟುವಟಿಕೆಯಲ್ಲಿ ಯಂತ್ರೊಪಕರಣಗಳ ಬಳಕೆಯು ಹೆಚ್ಚುತ್ತಿರುವುದು ಕೂಡಾ ಟ್ರ್ಯಾಕ್ಟರ್ ಮತ್ತು ಬಿಡಿಭಾಗಗಳ ಮಾರಾಟದಲ್ಲೂ ಸಾಕಷ್ಟು ಏರಿಕೆಯಾಗಿದೆ.

ಹಾಗೆಯೇ ತ್ರಿ ಚಕ್ರವಾಹನಗಳ ಮಾರಾಟ ಚೇತರಿಕೆಗೆ ಇನ್ನು ಕೆಲವು ತಿಂಗಳು ಕಾಲಾವಕಾಶ ತೆಗೆದುಕೊಳ್ಳಲಿದ್ದು, ವಾಣಿಜ್ಯ ವಾಹನಗಳ ಮಾರಾಟವು ಕಳೆದ ಎರಡು ತಿಂಗಳಿಗಿಂತ ಸಾಕಷ್ಟು ಏರಿಕೆಯಾಗಿರುವುದು ಮುಂಬರುವ ದಿನಗಳಲ್ಲಿ ಬೇಡಿಕೆ ಯಥಾಸ್ಥಿತಿಯತ್ತ ಮರಳುವ ವಿಶ್ವಾಸವಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಒಟ್ಟಿನಲ್ಲಿ ಕಳೆದ ಐದಾರು ತಿಂಗಳಿನಿಂದ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ವಾಹನ ಉತ್ಪಾದನಾ ಕಂಪನಿಗಳು ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ವಾಹನ ಖರೀದಿ ಭರಾಟೆ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.