ಬಿಎಸ್-6 ಜಾರಿ ನಂತರ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್ ಗ್ರೂಪ್

ಭಾರತದಲ್ಲಿ ಮಾಲಿನ್ಯ ತಡೆಗಾಗಿ ಜಾರಿಗೆ ತರಲಾದ ಬಿಎಸ್-6 ಎಮಿಷನ್‌ನಿಂದಾಗಿ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಬದಲಾವಣೆಗಳಾಗಿದ್ದು, ಹಲವಾರು ಕಂಪನಿಗಳು ಹೊಸ ಎಮಿಷನ್ ಜಾರಿ ನಂತರ ಡೀಸೆಲ್ ವಾಹನಗಳ ಮಾರಾಟವನ್ನೇ ಸ್ಥಗಿತಗೊಳಿಸಿ ಕೇವಲ ಪೆಟ್ರೋಲ್ ಮಾದರಿಗಳ ಮಾರಾಟದತ್ತ ಮುಖಮಾಡಿವೆ.

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಜರ್ಮನ್ ಕಾರು ಉತ್ಪಾದನಾ ಕಂಪನಿಯಾದ ಫೋಕ್ಸ್‌ವ್ಯಾಗನ್ ಕೂಡಾ ಡೀಸೆಲ್ ವಾಹನಗಳ ಮಾರಾಟ ಹಗರಣ ನಂತರ ಹೊಸ ವಾಹನ ಮಾದರಿಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವುದಲ್ಲದೆ ತನ್ನ ಅಧೀನ ಕಾರು ಮಾರಾಟ ಕಂಪನಿಗಳಾದ ಸ್ಕೋಡಾ, ಆಡಿ, ಫೋರ್ಸೆ ಕಾರುಗಳ ಮಾರಾಟದಲ್ಲೂ ಮಹತ್ವದ ಬದಲಾವಣೆ ತಂದಿದೆ. ಹಲವು ಕಾರು ಮಾದರಿಗಳಲ್ಲಿ ಈಗಾಗಲೇ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಪೆಟ್ರೋಲ್ ಎಂಜಿನ್‌ಗಳನ್ನು ಪರಿಚಯಿಸುತ್ತಿದೆ.

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಮಾಲಿನ್ಯ ತಡೆಗಾಗಿ ಯುರೋಪಿನಲ್ಲಿ ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಪ್ರಮುಖ ಆಟೋ ಕಂಪನಿಗಳು ಸಂಪೂರ್ಣವಾಗಿ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿ ಪೂರ್ಣಪ್ರಮಾಣದ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡಿವೆ.

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಯುರೋಪ್ ಮಾರುಕಟ್ಟೆಯಲ್ಲಿನ ಬದಲಾವಣೆ ನಂತರ ಇದೀಗ ಭಾರತದಲ್ಲೂ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಮಾತ್ರವಲ್ಲದೆ ಅಧೀನ ಕಾರು ಕಂಪನಿಗಳ ಪ್ರಮುಖ ವಾಹನಗಳಲ್ಲಿ ಡೀಸೆಲ್ ಎಂಜಿನ್ ತೆಗೆದುಹಾಕಿದೆ.

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ ಪರಿಣಾಮ ಅದಕ್ಕೆ ಪರ್ಯಾಯವಾಗಿ ಪೆಟ್ರೋಲ್ ಎಂಜಿನ್‌ಗಳ ಮಾರಾಟವನ್ನು ಹೆಚ್ಚಿಸಲಾಗುತ್ತಿದ್ದು, ಶೀಘ್ರದಲ್ಲೇ ಫೋಕ್ಸ್‌ವ್ಯಾಗನ್, ಸ್ಕೋಡಾ, ಆಡಿ ಮತ್ತು ಫೋರ್ಸೆ ಕಾರುಗಳಲ್ಲಿ ಮತ್ತಷ್ಟು ಹೊಸ ಪೆಟ್ರೋಲ್ ಎಂಜಿನ್ ಆಯ್ಕೆಗಳು ಲಭ್ಯವಾಗಲಿವೆ.

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಇನ್ನು ಭಾರತದಲ್ಲಿ ಫೋಕ್ಸ್‌ವ್ಯಾಗನ್ ಜೊತೆಗೂಡಿ ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಿರುವ ಸ್ಕೋಡಾ ಇಂಡಿಯಾ ಕಂಪನಿಯು ವಿವಿಧ ಮಾದರಿಯ ಹಲವು ಹೊಸ ಕಾರುಗಳನ್ನು ಪರಿಚಯಿಸುತ್ತಿದ್ದು, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಬಜೆಟ್ ಕಾರು ಮಾದರಿಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಸ್ಕೋಡಾ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ ಇಂಡಿಯಾ 2.0 ಪ್ರೋಜೆಕ್ಟ್‌ಗೆ ಚಾಲನೆ ನೀಡಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಸುಮಾರು ರೂ.7,500 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಯುರೋಪ್ ಮಾರುಕಟ್ಟೆಯಲ್ಲಿರುವ ಹಲವು ಕಾರುಗಳನ್ನು ಭಾರತದಲ್ಲೂ ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿವೆ.

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಇದಕ್ಕಾಗಿ ಸ್ಕೋಡಾ ಕಾರು ನಿರ್ಮಾಣ ಘಟಕಗಳನ್ನು ಉನ್ನತೀಕರಿಸುತ್ತಿರುವ ಸ್ಕೋಡಾ ಕಂಪನಿಯು 2025ರ ವೇಳೆಗೆ ಭಾರತದಲ್ಲಿ ವಾರ್ಷಿಕವಾಗಿ 1 ಲಕ್ಷ ಕಾರುಗಳ ಮಾರಾಟ ಮಾಡುವ ಗುರಿಹೊಂದಿದೆ. ಸದ್ಯ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಕಂಪನಿಯು ಶೀಘ್ರದಲ್ಲೇ ಹಲವು ಮಧ್ಯಮ ಗಾತ್ರದ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಎಸ್-6 ಜಾರಿ ನಂತರ ಭಾರೀ ಬದಲಾವಣೆ ತರುತ್ತಿದೆ ಫೋಕ್ಸ್‌ವ್ಯಾಗನ್

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಕ್ಲಿಕ್ ಹೆಸರಿನ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಭಾರತದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Most Read Articles

Kannada
English summary
According to report, Volkswagen Group will offer only petrol engines in India and here is the full details in Kannada.
Story first published: Monday, August 17, 2020, 14:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X