ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ ನೀಡಿದ ಸ್ಕೋಡಾ

ಸ್ಕೋಡಾ ಕಂಪನಿಯು ತನ್ನ ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಜೊತೆಗೂಡಿ ಭಾರತದಲ್ಲಿ ಹಲವಾರು ಹೊಸ ಯೋಜನೆಯೊಂದಿಗೆ ಕಾರು ಉತ್ಪಾದನೆ ಕೈಗೊಳ್ಳುತ್ತಿದ್ದು, ವ್ಯಾಪಾರ ಅಭಿವೃದ್ದಿ ಜೊತೆ ಜೊತೆಗೆ ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆಯನ್ನು ಸಹ ಸಮರ್ಥವಾಗಿ ನಿಭಾಯಿಸುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಕರೋನಾ ವೈರಸ್ ವಿರುದ್ಧ ಹೋರಾಟದಲ್ಲೂ ಸರ್ಕಾರದ ಜೊತೆ ಕೈಜೋಡಿಸಿರುವ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಆರ್ಥಿಕ ಸಹಾಯದೊಂದಿಗೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸಹ ದೇಣಿಗೆಯಾಗಿ ನೀಡಿದ್ದು, ಇದೀಗ ಗ್ರಾಮೀಣ ಭಾಗದ ಜನರ ಆರೋಗ್ಯ ಕಾಳಜಿಗಾಗಿ ವಿಶೇಷ ಸೌಲಭ್ಯಗಳನ್ನು ಹೊಂದಿರುವಂತಹ ಮೊಬೈಲ್ ಕ್ಲಿನಿಕ್ ವ್ಯಾನ್ ಮಾದರಿಯನ್ನು ತಾಲೂಕು ಆರೋಗ್ಯ ಕೇಂದ್ರಕ್ಕೆ ದೇಣಿಯಾಗಿ ನೀಡಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಪುಣೆ ಬಳಿಯಿರುವ ಖೇಡ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸ ಮೊಬೈಲ್ ಕ್ಲಿನಿಕ್ ವ್ಯಾನ್ ಅನ್ನು ದೇಣಿಯಾಗಿ ನೀಡಿದ್ದು, ವಾಹನದ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ಸ್ಕೋಡಾ ಕಂಪನಿಯೇ ಭರಿಸಲಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಹೊಸ ಮೊಬೈಲ್ ಕ್ಲಿನಿಕ್‌ನಿಂದ ಸುಮಾರು 12 ಹಳ್ಳಿಗಳಿಗೆ ಆರೋಗ್ಯ ಕವಕ ನೀಡಿದಂತಾಗಿದ್ದು, ಮೊಬೈಲ್ ಕ್ಲಿನಿಕ್‌ನಿಂದಾಗಿ ಗ್ರಾಮೀಣ ಭಾಗದ ಆರೋಗ್ಯ ಕಾಳಜಿಗೆ ಸಾಕಷ್ಟು ಸಹಕಾರಿಯಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಇನ್ನು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲೂ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿವೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಕರೋನಾ ವೈರಸ್ ಮಾಹಾಮಾರಿ ವೈರಸ್ ವಿರುದ್ಧ ಹೋರಾಟದಲ್ಲಿ ಸರ್ಕಾರದ ಕೈಜೋಡಿಸಿರುವ ಸ್ಕೋಡಾ ಕಂಪನಿಯು ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸುವ ಮೂಲಕ ಭಾರೀ ಪ್ರಮಾಣದ ಧನ ಸಹಾಯದ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ಒದಗಿಸಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ರೂ.1 ಕೋಟಿ ದೇಣಿಗೆ ಘೋಷಣೆ ಮಾಡಿರುವ ಸ್ಕೋಡಾ ಕಂಪನಿಯು, ಸಿಬ್ಬಂದಿಯ ವೇತನದಲ್ಲಿ ರೂ.1.20 ಕೋಟಿ ಸಹಾಯಧನ ಸಂಗ್ರಹಿಸಿ ಪಿಪಿಇ ಕಿಟ್ ಮತ್ತು ವೆಂಟಿಲೇಟರ್ ಖರೀದಿಸಿ ಕೋವಿಡ್ ಕೇರ್ ಕೇಂದ್ರಗಳಿಗೆ ದೇಣಿಯಾಗಿ ನೀಡಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಜೊತೆಗೆ ಸ್ಕೋಡಾ ಕಂಪನಿಯು ದೇಣಿಗೆ ಹಣದಲ್ಲಿ ಪುಣೆಯಲ್ಲಿನ ಸರ್ಕಾರಿ ಆಸ್ಪತ್ರೆಯೊಂದನ್ನು ಉನ್ನತೀಕರಿಸುತ್ತಿದ್ದು, ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಸುಸಜ್ಜಿತ ಮಾದರಿಯ 1,100 ಬೆಡ್‌ಗಳನ್ನು ಜೋಡಣೆ ಮಾಡಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊಬೈಲ್ ಕ್ಲಿನಿಕ್ ವ್ಯಾನ್ ದೇಣಿಗೆ

ಇದಲ್ಲದೆ ಫೇಸ್ ಮಾಸ್ಕ್ ಮತ್ತು ಫೇಸ್ ‌ಶಿಲ್ಡ್‌ಗಳನ್ನು ಪುಣೆಯಲ್ಲಿರುವ ಕಾರು ಘಟಕದಲ್ಲೇ ಉತ್ಪಾದನೆ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ವೆಂಟಿಲೇಟರ್ ಸೇರಿದಂತೆ ವಿವಿಧ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

Most Read Articles

Kannada
Read more on ಸ್ಕೋಡಾ skoda
English summary
Volkswagen & Skoda Auto Provides Mobile Clinic Van Providing Medical Services To Villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X