ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ವೊಲ್ವೊ-ಐರಿಷ್ ಕಂಪನಿಗಳು ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕವು ಆಟೋ ಉದ್ಯಮದ 4.0 ಸ್ಟ್ಯಾಂಡರ್ಡ್ ನಿಯಮ ಅನುಸಾರವಾಗಿ ನಿರ್ಮಾಣಗೊಂಡಿದೆ.

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕವನ್ನು ವೊಲ್ವೊ-ಐರಿಷ್ ಕಂಪನಿಗಳು ಮಧ್ಯಪ್ರದೇಶದ ಭೂಪಾಲ್‌ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಿಶೇಷವಾಗಿ ಭಾರೀ ಗಾತ್ರದ ವಾಣಿಜ್ಯ ವಾಹನಗಳ ನಿರ್ಮಾಣಕ್ಕಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಿವೆ. ಭೂಪಾಲ್‌ನಲ್ಲಿ ನಿರ್ಮಾಣವಾಗಿರುವ ವಾಹನ ಉತ್ಪಾದನಾ ಘಟಕವು ವೊಲ್ವೊ-ಐರಿಷ್ ಕಂಪನಿಗಳ ಸಹಭಾಗೀತ್ವದ ಎಂಟನೇ ಉತ್ಪಾದನಾ ಘಟಕವಾಗಿದ್ದು, ಇನ್ನುಳಿದ ಏಳು ಉತ್ಪಾದನಾ ಘಟಕಗಳು ದೇಶದ ಪ್ರಮುಖ ನಗರಗಳಲ್ಲಿ ನೆಲೆಗೊಂಡಿವೆ.

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರತ್ಯೇಕವಾಗಿ ವಾಣಿಜ್ಯ ವ್ಯವಹಾರಗಳನ್ನು ಕೈಗೊಳ್ಳುತ್ತಿರುವ ಐರಿಷ್ ಮೋಟಾರ್ಸ್ ಮತ್ತು ವೊಲ್ವೊ ಗ್ರೂಪ್ಸ್ ಕಂಪನಿಗಳು ಭಾರತದಲ್ಲಿ ಮಾತ್ರ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

50:50 ಅನುಪಾತದಲ್ಲಿ ವಾಹನ ಉತ್ಪಾದನೆ, ಮಾರಾಟ, ಮಾರುಕಟ್ಟೆ ನಿರ್ವಹಣೆಯೊಂದಿಗೆ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅತ್ಯಧಿಕ ಬೇಡಿಕೆ ಪಡೆದುಕೊಂಡಿರುವ ವೊಲ್ವೊ-ಐರಿಷ್ ಕಂಪನಿಗಳು 2008ರಿಂದ ಈಚೆಗೆ ಸುಮಾರು 8 ವಾಹನಗಳ ಉತ್ಪಾದನಾ ಘಟಕಗಳ ಮೇಲೆ ಸುಮಾರು ರೂ. 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿವೆ.

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ಹೆವಿ ಡ್ಯೂಟಿ ಟ್ರಕ್ಸ್, ಲೈಟ್ ಅಂಡ್ ಮಿಡಿಯಂ ಡ್ಯೂಟಿ ಟ್ರಕ್ಸ್ ಮತ್ತು ಮಧ್ಯಮ ಗಾತ್ರದ ವಿವಿಧ ಪ್ರಯಾಣಿಕ ಸೇವೆಗಳ ಬಸ್ ನಿರ್ಮಾಣ ಸೌಲಭ್ಯಗಳನ್ನು ಹೊಂದಿರುವ ವೊಲ್ವೊ-ಐರಿಷ್ ಕಂಪನಿಗಳು 4.9-55ಟಿ ಅಲ್ಟ್ರಾ ಮಾಡರ್ನ್ ಟ್ರಕ್ಸ್ ಮಾದರಿಗಳೊಂದಿಗೆ 150 ಮಾದರಿಯ ಬಸ್ ಚಾರ್ಸಿ ಉತ್ಪಾದನೆ ಮಾಡುತ್ತವೆ. ಪ್ರತಿ ವಾಣಿಜ್ಯ ವಾಹನ ಮಾದರಿಯನ್ನು ಕಸ್ಟಮ್ ಬಿಲ್ಟ್‌ನೊಂದಿಗೆ ಅಭಿವೃದ್ದಿಗೊಳಿಸುವ ವೊಲ್ವೊ-ಐರಿಷ್ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ಟ್ರಕ್ ಬಾಡಿಗಳನ್ನು ಸಿದ್ದಪಡಿಸುತ್ತವೆ.

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ಇದೀಗ ಉತ್ಪಾದನೆ ಸಿದ್ದವಾಗಿರುವ 8ನೇ ಘಟಕವು ಕೂಡಾ ಹೊಸ ವಾಣಿಜ್ಯಗಳ ಉತ್ಪಾದನೆಗೆ ಸಾಕಷ್ಟು ಸಹಕಾರಿಯಾಗಲಿದ್ದು, 147 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಹೊಸ ಉತ್ಪಾದನಾ ಘಟಕವು ಆರಂಭಿಕ ಹಂತದಲ್ಲಿ ವಾರ್ಷಿಕವಾಗಿ 40 ಸಾವಿರ ವಾಹನಗಳನ್ನು ಉತ್ಪಾದನೆ ಮಾಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ಆಟೋ ಉದ್ಯಮದ 4.0 ಸ್ಟ್ಯಾಂಡರ್ಡ್ ನಿಯಮ ಅನುಸಾರವಾಗಿ ನಿರ್ಮಾಣಗೊಂಡಿರುವ ಹೊಸ ಘಟಕದಲ್ಲಿ ವಾರ್ಷಿಕವಾಗಿ 1 ಲಕ್ಷದ ತನಕ ವಾಹನಗಳನ್ನು ನಿರ್ಮಾಣಗೊಳಿಸಬಹುದಾಗಿದ್ದು, ಹಂತ-ಹಂತವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ವೊಲ್ವೊ-ಐರಿಷ್ ಕಂಪನಿಗಳ 8ನೇ ಉತ್ಪಾದನಾ ಘಟಕದೊಂದಿಗೆ ಒಟ್ಟು 30 ಸಾವಿರ ಉದ್ಯೋಗಗಳಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಅವಕಾಶಗಳ ದೊರಲಿದ್ದು, ಉತ್ಪಾದನಾ ಘಟಕಗಳು ನೆಲೆಗೊಂಡಿರುವ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳ ಒಡಂಬಡಿಕೆಯೆಂತೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಹೊಸ ವಾಣಿಜ್ಯ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ವೊಲ್ವೊ-ಐರಿಷ್

ಇನ್ನು ವೊಲ್ವೊ-ಐರಿಷ್ ಉತ್ಪಾದನೆ ಪ್ರಮುಖ ವಾಣಿಜ್ಯ ವಾಹನಗಳು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ದೇಶಿಯ ಮಾರುಕಟ್ಟೆಯಿಂದಲೇ ರಫ್ತು ಮಾಡಲಾಗುತ್ತಿದ್ದು, ಗುಣಮಟ್ಟದ ಉತ್ಪನ್ನಗಳು ಮತ್ತು ಗ್ರಾಹಕರ ಸೇವೆಗಳ ಮೂಲಕ ವೊಲ್ವೊ-ಐರಿಷ್ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ.

Most Read Articles

Kannada
English summary
Volvo-Eicher New Manufacturing Plant Inaugurated. Read in Kannada.
Story first published: Monday, December 7, 2020, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X