ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ವೊಲ್ವೊ ಆಟೋ ಇಂಡಿಯಾ ಕಂಪನಿಯು ಬಿಎಸ್-6 ಎಕ್ಸ್‌ಸಿ 40 ಎಸ್‍ಯುವಿಯನ್ನು 2020ರ ಮಾರ್ಚ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಈ ವೊಲ್ವೊ ಎಕ್ಸ್‌ಸಿ 40 ಎಸ್‍ಯುವಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ಈ ವೊಲ್ವೊ ಎಕ್ಸ್‌ಸಿ 40 ಎಸ್‍ಯುವಿಯನ್ನು ಎಕ್ಸ್ ಶೋರೂಂ ಪ್ರಕಾರ ರೂ.39.9 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ವೊಲ್ವೊ ಕಂಪನಿಯು ಈ ಎಸ್‍ಯುವಿಗೆ ರೂ.3 ಲಕ್ಷ ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದೀಗ ವೊಲ್ವೊ ಎಕ್ಸ್‌ಸಿ 40ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.36.90 ಲಕ್ಷಗಳಾಗಿದೆ. ಇದಲ್ಲದೇ ಕಂಪನಿಯು ಈ ಎಸ್‍ಯುವಿ ಖರೀದಿಸುವಾಗ ರೂ.1 ಲಕ್ಷ ಮೌಲ್ಯದ ಅಕ್ಸೆಸರೀಸ್ ಅನ್ನು ನೀಡುತ್ತದೆ.

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ವೊಲ್ವೊ ಸರಣಿಯ ಕಾರುಗಳು ತಯಾರಾಗುವ ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ (ಸಿಎಂಎ) ಪ್ಲಾಟ್‌ಫಾರಂ ಮೇಲೆಯೇ ಈ ಎಸ್‍ಯುವಿಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ಎಕ್ಸ್‌ಸಿ 40 ಎಸ್‍ಯುವಿಯಲ್ಲಿ 2.0-ಲೀಟರ್‍‍ನ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಗೇರ್ಟ್ರಾನಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ಎಕ್ಸ್‌ಸಿ 40 ಎಸ್‍ಯುವಿ, ಐಕೋಟಿಯಿಂದ 2019ರ ಪ್ರೀಮಿಯಂ ಕಾರ್ ಪ್ರಶಸ್ತಿ ಪಡೆದಿದೆ. ಎಕ್ಸ್‌ಸಿ 40 ಈ ಪ್ರಶಸ್ತಿಯನ್ನು ಪಡೆದ ಮೊದಲ ಐಷಾರಾಮಿ ಕಾರ್ ಆಗಿದೆ. ಎಕ್ಸ್‌ಸಿ 40 ಕಾರು, 2018ರ ವರ್ಷದ ಯುರೋಪಿಯನ್ ಕಾರ್ ಕೂಡ ಆಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ಈ ಎಸ್‍ಯುವಿಯ ಡ್ಯಾಶ್‌ಬೋರ್ಡ್‌ನಲ್ಲಿ ಪಿಯಾನೋ ಬ್ಲಾಕ್ ಹಾಗೂ ಅಲ್ಯೂಮಿನಿಯಂ ಬಣ್ಣವನ್ನು ಹೊಂದಿದೆ. ಟಚ್‌ಸ್ಕ್ರೀನ್ ಸುತ್ತಲೂ ಅಲ್ಯೂಮಿನಿಯಂ ಬಣ್ಣವನ್ನು ನೀಡಲಾಗಿದೆ. ಎಕ್ಸ್‌ಸಿ 40 ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿರುವಂತಹ ಎಲ್ಲಾ ಬೆಲ್‌ಗಳು ಹಾಗೂ ವಿಸಲ್‍‍ಗಳನ್ನು ಅಳವಡಿಸಲಾಗಿದೆ.

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ಈ ಎಸ್‍ಯುವಿಯಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್‍‍ಗಳನ್ನು ಹೊಂದಿರುವ 12.3 ಇಂಚಿನ ವರ್ಟಿಕಲ್ ಆಗಿರುವ ಟಚ್‌ಸ್ಕ್ರೀನ್, ಡ್ಯಾಶ್ ಮೌಂಟೆಡ್ ವೂಫರ್, ಪನೋರಮಿಕ್ ಸನ್‌ರೂಫ್ ಹಾಗೂ ಸ್ಮಾರ್ಟ್ ಫೋನ್‌ಗಳಿಗಾಗಿ ವೈರ್‌ಲೆಸ್ ಚಾರ್ಜಿಂಗ್‍‍ಗಳಿವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ಇದರ ಜೊತೆಗೆ ಎಂಐಡಿ ಟಚ್‌ಸ್ಕ್ರೀನ್, ಡಿಸ್ಟನ್ಸ್ ಅಲರ್ಟ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಅಸಿಸ್ಟ್, ಡೈಮಂಡ್ ಕಟ್ ಅಲಾಯ್ ವ್ಹೀಲ್ ಹಾಗೂ ಹ್ಯಾಂಡ್ಸ್ ಫ್ರೀಯಾಗಿ ಆಪರೇಟ್ ಮಾಡುವ ಟೇಲ್‌ಗೇಟ್‍‍ಗಳಿವೆ.

ವೊಲ್ವೊ ಎಕ್ಸ್‌ಸಿ 40 ಎಸ್‍‍ಯುವಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್

ವೊಲ್ವೊ ಕಂಪನಿಯ ಹೊಸ ಎಕ್ಸ್‌ಸಿ 40 ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಎ, ಬಿ‍ಎಂ‍‍ಡಬ್ಲ್ಯು ಎಕ್ಸ್ 1 ಹಾಗೂ ಆಡಿ ಕ್ಯೂ 3 ಎಸ್‍ಯುವಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ವೊಲ್ವೊ volvo
English summary
Volvo Offers Discounts Of ₹ 3 Lakh On The XC 40 SUV. Read In Kannada.
Story first published: Wednesday, August 12, 2020, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X