Just In
Don't Miss!
- News
ಶಶಿಕಲಾಗೆ ಶ್ವಾಸಕೋಶ ಸೋಂಕು, ಕೊರೊನಾ ವರದಿ ನೆಗೆಟಿವ್
- Finance
ಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನ
- Sports
ಧೋನಿ ಜೊತೆಗೆ ನನ್ನನ್ನು ಹೋಲಿಸುವುದು ನ್ಯಾಯ ಅಲ್ಲ ಎಂದ ರಿಷಭ್ ಪಂತ್
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಲೆ ಕಡಿತಗೊಳಿಸಿ ಹೊಸ ಇಕೊಸ್ಪೋರ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಫೋರ್ಡ್
ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ 2021ರ ಇಕೋಸ್ಪೋರ್ಟ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಫೋರ್ಡ್ ಇಕೊಸ್ಪೋರ್ಟ್ ಕಾಂಪ್ಯಾಕ್ಟ್-ಎಸ್‌ಯುವಿಯು ಕೆಲವು ಸೂಕ್ಷ್ಮ ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ.

ಇನ್ನು ಹೊಸ ಫೋರ್ಡ್ ಇಕೊಸ್ಪೋರ್ಟ್ ಎಸ್‍ಯುವಿಯ ಬೆಲೆಯ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಗಿಂತ ರೂ.35,000 ಗಳವರೆಗೆ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಈ 2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯ ಆರಂಭಿಕ ಬೆಲೆಯು ರೂ.7.99 ಲಕ್ಷಗಳಾಗಿದೆ. ಇನ್ನು ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯ ಟಾಪ್-ಸ್ಪೆಕ್ ಬೆಲೆಯು ರೂ.11.49 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರವಾಗಿದೆ.

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು ಐದು ರೂಪಾಂತರಗಳಲ್ಲಿ ಲಭ್ಯವಿದೆ. ಇದು ಆಂಬಿಡೆಂಟ್, ಟ್ರೆಂಡ್, ಟೈಟಾನಿಯಂ, ಟೈಟಾನಿಯಂ ಪ್ಲಸ್ ಮತ್ತು ಸ್ಪೋರ್ಟ್ಸ್ ಆಗಿದೆ. ಟಿಟಾನಿಯಂ ಪ್ಲಸ್ ರೂಪಾಂತರವನ್ನು ಹೊರತುಪಡಿಸಿ ಉಳಿದವೆಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಹೊಸ ಫೋರ್ಡ್ ಇಕೊಸ್ಪೋರ್ಟ್ ಎಸ್‍ಯುವಿಯ ಟೈಟಾನಿಯಂ ರೂಪಾಂತರದಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ನೀಡಲಾಗಿದೆ. ಎಲೆಕ್ಟ್ರಿಕ್ ಸನ್‌ರೂಫ್ ಈ ಹಿಂದೆ ಟಾಪ್-ಸ್ಪೆಕ್ ಸ್ಪೋರ್ಟ್ಸ್ ರೂಪಾಂತರದಲ್ಲಿ ಮಾತ್ರ ಲಭ್ಯವಿತ್ತು.

ಹೊಸ ಫೋರ್ಡ್ ಇಕೋಸ್ಪೋರ್ಟ್ ಫೋರ್ಡ್ ಪಾಸ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ತಂತ್ರಜ್ಞಾನವು ಗ್ರಾಹಕರಿಗೆ ತಮ್ಮ ಎಸ್‍ಯುವಿಯಲ್ಲಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟಿವಿಟಿಯೊಂದಿಗೆ ಮತ್ತು ಹಲವಾರು ಫೀಚರ್ ಗಳನ್ನು ನಿಯಂತ್ರಿಸಬಹುದು. ಇದರಲ್ಲಿ ಲಾನ್ ಆನ್ ಲಾಕ್ ಮತ್ತು ಎಸಿ ಕಂಟ್ರೋಲ್ ಗಳನ್ನು ಒಳಗೊಂಡಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಮೇಲಿನ ಸೇರ್ಪಡೆಗಳ ಹೊರತಾಗಿ, ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿಯಲ್ಲಿ ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಹಿಂದಿನ ಮಾದರಿಯಲ್ಲಿದ್ದ ಫೀಚರ್ ಗಳನ್ನು ಅದೇ ರೀತಿ ಮುಂದಕ್ಕೆ ಸಾಗಿಸಲಾಗಿದೆ.

ಇದರಲ್ಲಿ ಎಸ್‌ವೈಎನ್‌ಸಿ 3 ಟೆಕ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್ಸ್, ರೈನ್ ಸೆನ್ಸಿಂಗ್ ವೈಪರ್ಸ್, ಆರು ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು ಅದೇ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 123 ಬಿಹೆಚ್‍ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 215 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಎರಡು ಎಂಜಿನ್ ಗಳೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಇದರೊಂದಿಗೆ ಪೆಟ್ರೋಲ್ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.

2021ರ ಫೋರ್ಡ್ ಇಕೋಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ಇತ್ತೀಚೆಗೆ ಪರಿಚಯಿಸಲಾದ ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.