Just In
- 57 min ago
ಮಕ್ಕಳಿಗಾಗಿ 60-70 ಕಿ.ಮೀ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
- 1 hr ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 3 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 3 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
Don't Miss!
- News
ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ
- Movies
ಕಹಿಯೇ ಹೆಚ್ಚಿದ್ದರು ಸಿಹಿಯಾಗಿ ಯುಗಾದಿ ಶುಭಾಶಯ ಕೋರಿದ ಸಿನಿ ತಾರೆಯರು
- Sports
19 ವರ್ಷದ ಈ ಬ್ಯಾಟ್ಸ್ಮನ್ ಬಾರಿಸಿರೋ 8 ಐಪಿಎಲ್ ಸಿಕ್ಸರ್ ಸಾಮಾನ್ಯದ್ದಲ್ಲ!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗ್ರಾಹಕರ ಕೈ ಸೇರಲು ಸಿದ್ದವಾದ 2021ರ ಸ್ವಿಫ್ಟ್ ಕಾರಿನ ವಿಶೇಷತೆಗಳೇನು?
2021ರ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ವಿತರಣೆ ಮಾಡಲಿದ್ದು, ಹೊಸ ಕಾರನ್ನು ಈಗಾಗಲೇ ಅಧಿಕೃತ ಡೀಲರ್ಸ್ ಬಳಿ ಸ್ಟಾಕ್ ಮಾಡುತ್ತಿರುವುದು ಕಂಡಬಂದಿದೆ.

ಹೊಸ ಸ್ವಿಫ್ಟ್ ಕಾರು ಉನ್ನತೀಕರಿಸಿದ ಎಂಜಿನ್ ಸೇರಿದಂತೆ ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಕಾರು ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್ ಪಡೆದುಕೊಂಡಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.73 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.41 ಲಕ್ಷ ಬೆಲೆ ಹೊಂದಿದ್ದು, ಜೆಡ್ಎಕ್ಸ್ಐ ಪ್ಲಸ್ ಆವೃತ್ತಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

ಹ್ಯಾಚ್‌ಬ್ಯಾಕ್ ಕಾರು ವಿಭಾಗದಲ್ಲಿ ಕಳೆದ ಒಂದು ದಶಕದಿಂದಲೂ ನಂ.1 ಸ್ಥಾನ ಕಾಯ್ದುಕೊಂಡು ಬಂದಿರುವ ಸ್ವಿಫ್ಟ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಹಲವಾರು ಬದಲಾವಣೆಗಳೊಂದಿಗೆ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ.

ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿರುವ ಹೊಸ ಸ್ವಿಫ್ಟ್ ಕಾರು 2020ರ ಆವೃತ್ತಿಗಿಂತ ತುಸು ದುಬಾರಿಯಾಗಿದ್ದರೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಸ್ವಿಫ್ಟ್‌ನ ಕಾರಿನ ಮುಂಭಾಗದಲ್ಲಿ ಕ್ರೋಮ್ ಆಕ್ಸೆಂಟ್ ಹೊಂದಿರುವ ಆಕರ್ಷಕ ಕ್ರಾಸ್ ಮೆಶ್ ಗ್ರಿಲ್ ಮತ್ತು ಗ್ರಿಲ್ ಸುತ್ತಲು ನೀಡಲಾಗಿರುವ ಕಪ್ಪು ಪಟ್ಟಿಯು ಕಾರಿನ ಹೊಸ ಲುಕ್ ನೀಡಲಿದ್ದು, ಗ್ರಿಲ್ ಡಿಸೈನ್ ಹೊರತುಪಡಿಸಿ ಹೊಸ ಕಾರಿನ ಹೊರಭಾಗದ ವಿನ್ಯಾಸಗಳಲ್ಲಿ ಈ ಹಿಂದಿನ ಮಾದರಿಯಂತೆಯೇ ಮುಂದುವರಿಸಲಾಗಿದೆ.
ಹೊಸ ಸ್ವಿಫ್ಟ್ ಮಾದರಿಯ ವಿಎಕ್ಸ್ಐ ವೆರಿಯೆಂಟ್‌ನಲ್ಲಿ ಈ ಬಾರಿ ಟಚ್ ಸ್ಕ್ರೀನ್ ಹೊಂದಿರುವ ಹೊಸ ಆಡಿಯೋ ಹೆಡ್ ಯುನಿಟ್ ನೀಡಲಾಗಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಕ್ರೂಸ್ ಕಂಟ್ರೋಲ್, ವಿವಿಧ ಬಣ್ಣಗಳನ್ನು ಮಲ್ಟಿ ಇನ್ಪಾರ್ಮೆಷನ್ ಡಿಸ್‌ಪ್ಲೇ ಮತ್ತು ಆಟೋ ಫ್ಲೋಡಿಂಗ್ ಹೊಂದಿರುವ ರಿಯಲ್ ವ್ಯೂ ಮಿರರ್ ನೀಡಲಾಗಿದೆ.

ಇನ್ನುಳಿದಂತೆ ಹಳೆಯ ಮಾದರಿಯಲ್ಲಿರುವಂತೆ ಎಲ್ಇಡಿ ಹೆಡ್‌ಲ್ಯಾಂಪ್ಸ್, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕೀ ಲೆಸ್ ಎಂಟ್ರಿ, ಆಟೋ ಕ್ಲೈಮೆಟ್ ಕಂಟ್ರೋಲ್, ಲೈವ್ ಟ್ರಾಫಿಕ್ ಅಪ್‌ಡೆಟ್ ನೀಡುವ ಸ್ಮಾರ್ಟ್ ಸ್ಟುಡಿಯೋ ಆ್ಯಪ್ ಕನೆಕ್ಟ್ ಸೌಲಭ್ಯಗಳಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಈ ಬಾರಿ ಮೂರು ಹೊಸ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ನೀಡಲಾಗಿದೆ.

2021ರ ಸ್ವಿಫ್ಟ್ ಕಾರಿನ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಅದು ಹೊಸದಾಗಿ ಜೋಡಣೆ ಮಾಡಲಾಗಿರುವ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿದ್ದು, ಈ ಹಿಂದಿನ 83-ಬಿಎಚ್‌ಪಿ ಪ್ರೇರಿತ 1.2-ಲೀಟರ್ ಕೆ12 ಪೆಟ್ರೋಲ್ ಮಾದರಿಗಿಂತಲೂ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚು ಇಂಧನ ದಕ್ಷತೆ ಹೊಂದಿರುವ ಡ್ಯುಯಲ್‌ಜೆಟ್ ಎಂಜಿನ್ ಮಾದರಿಯು ಸ್ವಿಫ್ಟ್ ಕಾರಿನ ಆಯ್ಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಮಾರುತಿ ಸುಜುಕಿಯ ಅಭಿವೃದ್ದಿಪಡಿಸಿರುವ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಬಲೆನೊ ಮತ್ತು ಡಿಜೈರ್ ನಂತರ ಸ್ವಿಫ್ಟ್ ಮಾದರಿಯಲ್ಲಿ ಜೋಡಣೆ ಮಾಡಿದ್ದು, ಹೊಸ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 90-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಮೂಲಕ ಹೊಸ ಸ್ವಿಫ್ಟ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು 23.20 ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು 23.76 ಕಿ.ಮೀ ಮೈಲೇಜ್ ನೀಡಲಿದ್ದು, ಕೆ12 ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 21.21 ಕಿ.ಮೀ ಮೈಲೇಜ್ ಹೊಂದಿತ್ತು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಅತ್ಯಧಿಕ ಮೈಲೇಜ್ ಪಡೆದುಕೊಂಡಿರುವ ಹೊಸ ಸ್ವಿಫ್ಟ್ ಕಾರು ಇದೀಗ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಫೋರ್ಡ ಫಿಗೊ ಕಾರು ಮಾದರಿಗಳಿಗೆ ಮತ್ತಷ್ಟು ಪೈಟೋಟಿ ನೀಡಲಿದ್ದು, ಹೊಸ ಕಾರಿನಲ್ಲಿ ಹೊಸದಾಗಿ ನೀಡಿರುವ ಡ್ಯುಯಲ್ ಆವೃತ್ತಿಗಳು ಸಹ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.