ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ದೇಶದಲ್ಲಿ 7 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ. ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಕಡಿಮೆ ಮಾಡಿ ವಿತರಣೆಯನ್ನು ಮುಂದೂಡಿವೆ. ಇದರ ನಡುವೆ ವಾಹನಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಗ್ರಾಹಕರು ಹೆಚ್ಚು ಬೆಲೆ ತೆರಬೇಕಾಗುತ್ತದೆ. ಹೊಸದಾಗಿ ಬಿಡುಗಡೆಯಾಗುವ ವಾಹನಗಳ ವಿತರಣೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಕೋವಿಡ್ ಕಾರಣಕ್ಕೆ ವಿಶ್ವಾದಾದ್ಯಂತ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಂ ಆಯ್ಕೆಯನ್ನು ನೀಡಿದವು. ಇದರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಯಿತು. ಇದರಿಂದ ಸಹಜವಾಗಿಯೇ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳಲ್ಲಿ ಬಳಸುವ ಸೆಮಿಕಂಡಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಯಿತು. ಆದರೆ ಬೇಡಿಕೆಗೆ ತಕ್ಕಂತೆ ಸೆಮಿಕಂಡಕ್ಟರ್ ಗಳನ್ನು ಪೂರೈಸಲಾಗುತ್ತಿಲ್ಲ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಇದರಿಂದಾಗಿ ವಾಹನಗಳ ಉತ್ಪಾದನೆಯಾಗುತ್ತಿಲ್ಲ. ಇತ್ತೀಚಿಗೆ ಬಿಡುಗಡೆಯಾಗುವ ಕಾರುಗಳಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗುತ್ತದೆ. ಆ ಕಾರುಗಳಲ್ಲಿ ಸೆಮಿಕಂಡಕ್ಟರ್ ಗಳನ್ನು ಬಳಸಲಾಗುತ್ತದೆ. ಕೆಲವು ಕಂಪನಿಗಳು ಕಾರುಗಳನ್ನು ಉತ್ಪಾದಿಸುತ್ತಿವೆಯಾದರೂ ಆ ಕಾರುಗಳಲ್ಲಿ ಆಧುನಿಕ ಫೀಚರ್ ಗಳನ್ನು ಅಳವಡಿಸುತ್ತಿಲ್ಲ. ಇನ್ನು ಕೆಲವು ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಇದರಿಂದಾಗಿ ವಾಹನಗಳ ವಿತರಣೆಗೆ ಕಾಯುತ್ತಿರುವ ಗ್ರಾಹಕರು ಮುಂಬರುವ ದಿನಗಳಲ್ಲಿ ಹೆಚ್ಚು ಬೆಲೆ ಪಾವತಿಸಬೇಕಾಗುತ್ತದೆ. ಉತ್ಪಾದನಾ ವೆಚ್ಚದ ಹೆಚ್ಚಳವಾಗಿರುವುದರಿಂದ ಕಂಪನಿಗಳು ಕಾರುಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ವರ್ಷದ ಆರಂಭದಿಂದ ಇಲ್ಲಿಯವರೆಗೆ ವಾಹನಗಳ ಬೆಲೆಯನ್ನು 6%ನಷ್ಟು ಹೆಚ್ಚಿಸಲಾಗಿದೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಮಾರುತಿ ಸುಜುಕಿ ಕಂಪನಿಯ 2.5 ಲಕ್ಷ, ಹ್ಯುಂಡೈ ಕಂಪನಿಯ 1 ಲಕ್ಷ, ಟಾಟಾ ಮೋಟಾರ್ಸ್ ಕಂಪನಿಯ 1 ಲಕ್ಷ, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ 1 ಲಕ್ಷ, ಕಿಯಾ ಮೋಟಾರ್ಸ್ ಕಂಪನಿಯ 75,000, ಎಂಜಿ ಮೋಟಾರ್ಸ್ ಕಂಪನಿಯ 46,000, ಫೋಕ್ಸ್‌ವ್ಯಾಗನ್, ಸ್ಕೋಡಾ, ಟೊಯೊಟಾ, ನಿಸ್ಸಾನ್, ರೆನಾಲ್ಟ್, ಆಡಿ ಕಂಪನಿಗಳ 75,000 ಗ್ರಾಹಕರು ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಈ ಕಂಪನಿಗಳು ಇತ್ತೀಚೆಗೆ ಅನೇಕ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿವೆ. ಇದರಿಂದ ಗ್ರಾಹಕರು ದೀರ್ಘಕಾಲ ಕಾಯಬೇಕಾಗಿದೆ. ಮಹೀಂದ್ರಾ ಎಕ್ಸ್‌ಯುವಿ 700, ಮಾರುತಿ ಸುಜುಕಿಯ ಸಿಎನ್‌ಜಿ ಮಾದರಿಗಳು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಟಾಟಾ ಪಂಚ್, ಮರ್ಸಿಡಿಸ್ ಜಿಎಲ್‌ಎಸ್ ಹಾಗೂ ಆಡಿ ಇ-ಟ್ರಾನ್ ಎಲೆಕ್ಟ್ರಿಕ್‌ನಂತಹ ಹಲವು ಕಾರುಗಳಿಗೆ ಹೆಚ್ಚು ಸಮಯ ಕಾಯಬೇಕಾಗಿದೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಇದು ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದ್ದು, ಭಾರತೀಯ ಆಟೋಮೊಬೈಲ್ ಉದ್ಯಮವು ಇದುವರೆಗೂ ಇಂತಹ ಪರಿಸ್ಥಿತಿಯನ್ನು ನೋಡಿಲ್ಲವೆಂದು ಉದ್ಯಮದ ತಜ್ಞರು ಹೇಳಿದ್ದಾರೆ. ಮಹೀಂದ್ರಾ ಎಕ್ಸ್‌ಯುವಿ 700 ತನ್ನ ಡೆಲಿವರಿ ಟೈಮ್‌ಲೈನ್‌ಗಾಗಿ ಸುದ್ದಿಯಲ್ಲಿದೆ. ಇತ್ತೀಚೆಗೆ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 700 ವಿತರಣೆಗೆ 2023ರ ಮೇವರೆಗೂ ಟೈಮ್‌ಲೈನ್ ನೀಡಿದ ನಂತರ ಗ್ರಾಹಕರ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟಗೊಂಡಿದೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಈ ಮುನ್ನ ಮೊದಲು ಕಾರುಗಳ ವಿತರಣೆ ಪಡೆಯಲು ಕಾಯುವ ಸರಾಸರಿ ಅವಧಿ ಸುಮಾರು ಆರು ತಿಂಗಳುಗಳಷ್ಟಿತ್ತು. ಆದರೆ ಸೆಮಿಕಂಡಕ್ಟರ್ ಕೊರತೆಯಿಂದಾಗಿ, ಪರಿಸ್ಥಿತಿ ಹದಗೆಡುತ್ತಿದೆ. ಈ ಬಗ್ಗೆ ಮಹೀಂದ್ರಾ ಕಂಪನಿಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ದೀರ್ಘ ಕಾಲ ಕಾಯಬೇಕಾದ ಹಿನ್ನೆಲೆಯಲ್ಲಿ ಕಾರುಗಳನ್ನು ಬುಕ್ ಮಾಡಿರುವ ಹಲವು ಅನೇಕ ಗ್ರಾಹಕರು ಬುಕ್ಕಿಂಗ್ ಗಳನ್ನು ರದ್ದು ಮಾಡುತ್ತಿದ್ದಾರೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಈ ಗ್ರಾಹಕರು ಎಕ್ಸ್‌ಯುವಿ 700 ಬದಲು ಟಾಟಾ ಸಫಾರಿಯಂತಹ ಎಸ್‌ಯುವಿಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಆಟೋಮೊಬೈಲ್ ಉದ್ಯಮದಲ್ಲಿ ನಡೆಯುತ್ತಿರುವ ಸೆಮಿಕಂಡಕ್ಟರ್ ಚಿಪ್ ಕೊರತೆಯು MG Aster ಕಾರಿನ ವಿತರಣೆ ಮೇಲೂ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ MG ಮೋಟಾರ್ ತನ್ನ ಎಲ್ಲಾ ಪೂರೈಕೆದಾರರು ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಕಾರುಗಳ ಉತ್ಪಾದನೆ ಹಾಗೂ ವಿತರಣೆ ಮೇಲೆ ಪರಿಣಾಮ ಬೀರಿದೆ ಎಂದು ಮಾಹಿತಿ ನೀಡಿದೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಸೆಮಿಕಂಡಕ್ಟರ್ ಚಿಪ್‌ ಕೊರತೆಯು ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಆಟೋಮೊಬೈಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಈ ಪರಿಸ್ಥಿತಿಯಲ್ಲಿ ಗ್ರಾಹಕರು ಬಹಳ ಸಮಯ ಕಾಯಬೇಕಾಗಿದೆ. ಕಂಪನಿಗಳು ಸಾಧ್ಯವಾದಷ್ಟು ಬೇಗ ಇದಕ್ಕೆ ಪರಿಹಾರ ನೀಡಬೇಕಾಗಿದೆ. ಆಗ ಮಾತ್ರ ಮಾರಾಟವು ಉತ್ತಮವಾಗಿರುತ್ತದೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಈಗ ದೆಹಲಿಯಲ್ಲಿ ವಾಹನವನ್ನು ಖರೀದಿಸುವವರು ನೋಂದಣಿ ಪ್ರಮಾಣಪತ್ರಕ್ಕಾಗಿ (ಆರ್‌ಸಿ) ಹೆಚ್ಚು ಸಮಯ ಕಾಯಬೇಕಾಗಿಲ್ಲ. ಅವರು ಆರ್‌ಟಿಒಗೂ ಹೋಗಬೇಕಾಗಿಲ್ಲ. ಇನ್ನು ಮುಂದೆ ದೆಹಲಿಯ ವಾಹನ ವಿತರಕರೇ ತಮ್ಮ ಗ್ರಾಹಕರಿಗೆ ವಾಹನ ನೋಂದಣಿ ಸಂಖ್ಯೆಗಳನ್ನು ನೀಡಲಿದ್ದಾರೆ. ದೆಹಲಿಯ ವಾಹನ ವಿತರಕರು ಸ್ಥಳದಲ್ಲೇ ನೋಂದಣಿ ಪ್ರಮಾಣಪತ್ರಗಳನ್ನು ಒದಗಿಸುವ ಸೌಲಭ್ಯವನ್ನು ಆರಂಭಿಸಿದ್ದಾರೆ.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಈಗ ಹೊಸ ಆರ್‌ಸಿಯನ್ನು ಹೈಟೆಕ್ ಮಾಡಲಾಗಿದೆ. ಹೊಸ ಆರ್‌ಸಿಯಲ್ಲಿ ಹಳೆಯ ಚಿಪ್ ಬದಲಿಸಿ ಹೊಲೊಗ್ರಾಮ್ ನೀಡಲಾಗುತ್ತದೆ. ಈ ಹಾಲೋಗ್ರಾಮ್‌ನಿಂದ ನಕಲಿ ಆರ್‌ಸಿಗಳನ್ನು ನಕಲು ಮಾಡುವ ಸಮಸ್ಯೆಯೂ ಕೊನೆಗೊಳ್ಳುತ್ತದೆ. ಹೊಸ ಆರ್‌ಸಿಯಲ್ಲಿ ಕ್ಯೂಆರ್ ಕೋಡ್ ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ಚಾಲಕ ಹಾಗೂ ಅವರ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಬಹುದು.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಈ ವರ್ಷದ ಮಾರ್ಚ್ 17ರಂದು ದೆಹಲಿಯಲ್ಲಿ ಹೊಸ ಆರ್‌ಸಿ ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಈ ಪ್ರಾಯೋಗಿಕ ಯೋಜನೆಯಲ್ಲಿ 1.4 ಲಕ್ಷಕ್ಕೂ ಹೆಚ್ಚು ಚಾಲಕರಿಗೆ ಆರ್‌ಸಿ ನೀಡಲಾಗಿದೆ. ದೆಹಲಿಯಲ್ಲಿ ಪ್ರತಿ ವರ್ಷ 6 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಖರೀದಿಸಲಾಗುತ್ತದೆ. ಈ ಹಿಂದೆ ವಾಹನದ ಆರ್‌ಸಿ ಪಡೆಯಲು ಜನರು ಆರ್‌ಟಿಒ ಕಚೇರಿಗಳಿಗೆ ತೆರಳಬೇಕಾಗಿತ್ತು.

ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಸುಮಾರು ಏಳು ಲಕ್ಷ ಗ್ರಾಹಕರು

ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ದಿನಗಳು ಬೇಕಾಗುತ್ತವೆ. ಆದರೆ ಈಗ ಹೊಸ ವ್ಯವಸ್ಥೆಯ ಮೂಲಕ ವಾಹನ ಡೀಲರ್ ಗಳು ವಾಹನ ಖರೀದಿಸಿದವರಿಗೆ ತಕ್ಷಣವೇ ಆರ್‌ಸಿ ವಿತರಿಸುತ್ತಿದ್ದಾರೆ. ಇನ್ನು ದೆಹಲಿ ಸಾರಿಗೆ ಇಲಾಖೆಯು ಆಗಸ್ಟ್ 7 ರಿಂದ ತನ್ನ ಬಹುತೇಕ ಎಲ್ಲಾ ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಇಲಾಖೆಯು ಒಟ್ಟು 33 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
About 7 lakh customers waiting to get car delivery details
Story first published: Friday, December 17, 2021, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X