ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಮರ್ಸಿಡಿಸ್ ಬೆಂಝ್ ಕಂಪನಿಯ ಜಿ-ವ್ಯಾಗನ್ ವಿಶ್ವದಾದ್ಯಂತ ಸೆಲಬ್ರಿಟಿಗಳು ಸಾಮಾನ್ಯವಾಗಿ ಈ ಎಸ್‍ಯುವಿಯನ್ನು ಬಳಸುತ್ತಾರೆ. ಅಲ್ಲದೇ ಮರ್ಸಿಡಿಸ್ ಜಿ-ವ್ಯಾಗನ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಎಸ್‍ಯುವಿಗಳಲ್ಲಿ ಒಂದಾಗಿದೆ.

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಮರ್ಸಿಡಿಸ್ ಬೆಂಝ್ ಕಂಪನಿಯು ಮೊದಲ ಬಾರಿಗೆ ಜಿ-ವ್ಯಾಗನ್ ಜಿ350ಡಿ ಎಸ್‍ಯುವಿಯು ಡೀಸೆಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 2019ರಲ್ಲಿ ಬಿಡುಗಡೆಗೊಳಿಸಿತ್ತು. ಜಿ-ವ್ಯಾಗನ್ ಜಿ350ಡಿ ಎಸ್‍ಯುವಿಯು ಡೀಸೆಲ್ ಎಂಜಿನ್ಅನ್ನು ಹೊಂದಿದೆ. ಇದು ಜಿ63 ಎಎಂಜಿ ಎಸ್‍ಯುವಿಗಿಂತ ಕಡಿಮೆ ಬೆಲೆಯ ಮಾದರಿಯಾಗಿದೆ. ಇದೀಗ ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಅವರು ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ವರದಿಗಳ ಪ್ರಕಾರ, ಬಾಲಿವುಡ್ ನಟ ವರುಣ್ ಧವನ್ ಅವರ ಮನೆಯಲ್ಲಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕಾಣಿಸಿಕೊಂಡಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಬಿಳಿ ಬಣ್ಣದ ಜಿ-ವ್ಯಾಗನ್ ಎಸ್‍ಯುವಿಯ ಆಕರ್ಷಕ ಲುಕ್ ಅನ್ನು ಹೊಂದಿದೆ. ಜಿ63 ಎಎಂಜಿ ಎಸ್‍ಯುವಿನಂತೆಯೇ ಹೊರಭಾಗದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಇದು ಬಾಕ್ಸೀ ವಿನ್ಯಾಸವನ್ನು ಪಡೆಯುತ್ತದೆ. ತುಂಬಾ ಬಾಕ್ಸಿಯಾಗಿ ಕಾಣುವ ಎಸ್‍ಯುವಿಯಾಗಿದ್ದು, ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿದೆ.

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ನಟಿ ಸಾರಾ ಅಲಿ ಖಾನ್ ಜನಪ್ರಿಯ ನಟ ಸೈಫ್ ಅಲಿ ಖಾನ್ ಅವರ ಪುತ್ರಿ, ಅವರ ಗ್ಯಾರೇಜ್‌ನಲ್ಲಿ ವೈವಿಧ್ಯಮಯ ಕಾರುಗಳು ಮತ್ತು ಬೈಕ್‌ಗಳಿವೆ. ನಟ ಸೈಫ್ ಅಲಿ ಖಾನ್ ಅವರ ಬಳಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್, ರೇಂಜ್ ರೋವರ್ ವೋಗ್, ಬಿಎಂಡಬ್ಲ್ಯು 7-ಸೀರೀಸ್, ಫೋರ್ಡ್ ಮುಸ್ತಾಂಗ್, ಆಡಿ ಆರ್8 ಸ್ಪೈಡರ್ ಮುಂತಾದ ಕಾರುಗಳಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಬಾಲಿವುಡ್ ಸೆಲೆಬ್ರಿಟಿಗಳನ್ನು ಜಿ350ಡಿ ಎಸ್‍ಯುವಿಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಮರ್ಸಿಡಿಸ್ ಬೆಂಝ್ ಇದನ್ನು ದೇಶದಲ್ಲಿ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಮರ್ಸಿಡಿಸ್ ಬೆಂಝ್ ಜಿ350ಡಿ ಎಸ್‍ಯುವಿಯ ಬೆಲೆ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.1.5 ಕೋಟಿಯಾಗಿದೆ.

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಮರ್ಸಿಡಿಸ್ ಬೆಂಝ್ ಕಂಪನಿಯು 2019ರಲ್ಲಿ ಭಾರತದಲ್ಲಿ ಜಿ-ಕ್ಲಾಸ್ ಸರಣಿಯ ಜಿ 350ಡಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಮರ್ಸಿಡಿಸ್ ಬೆಂಝ್ ಕಂಪನಿಯ ಜಿ-ಕ್ಲಾಸ್ ಸರಣಿಯ ಈ ಜಿ 350ಡಿ ಮಾದರಿ ಎಂಟ್ರಿ ಲೆವೆಲ್ ಎಸ್‍‍ಯುವಿಯಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಮರ್ಸಿಡಿಸ್ ಬೆಂಝ್ ಜಿ 350 ಡಿ ಎಸ್‍‍ಯು‍ವಿಯು 3.0 ಲೀಟರ್ ಇನ್‍‍ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್‍ ಅನ್ನು ಹೊಂದಿದೆ. ಈ ಎಂಜಿನ್ 282 ಬಿಹೆಚ್‍ಪಿ ಪವರ್ ಮತ್ತು 600 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 9ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಜನಪ್ರಿಯ ಜಿ-ವ್ಯಾಗನ್ ಎಸ್‍‍ಯು‍ವಿಯು ಪ್ರತಿ ಗಂಟೆಗೆ 199 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ

ಜಿ 350 ಡಿ ಎಸ್‍‍ಯು‍ವಿ 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿ350ಡಿ ಎಸ್‍‍ಯು‍ವಿಯು ಬಾಕ್ಸೀ ಮತ್ತು ಐಕಾನಿಕ್ ವಿನ್ಯಾಸವನ್ನು ಹೊಂದಿದೆ. ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಎಸ್‍ಸಿ, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಒಳಗೊಂಡಿದೆ.

Source: Pinkvilla

Most Read Articles

Kannada
English summary
Bollywood Actress Sara Ali Khan Spotted In Her New Mercedes G-Wagen G350D Luxury Suv. Read In Kannada.
Story first published: Monday, March 8, 2021, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X