ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಅಮೆರಿಕಾದ ಅರಿಝೊನಾ ಟ್ಯೂಸಾನ್ ಅಗ್ನಿಶಾಮಕ ಇಲಾಖೆ ಇತ್ತೀಚೆಗೆ ವೊಲ್ವೊ ಗ್ರೂಪ್ ಸಹಯೋಗದೊಂದಿಗೆ ಅಗ್ನಿಶಾಮಕ ವಾಹನ ತಯಾರಕ ಕಂಪನಿಯಾದ ರೋಸೆನ್‌ಬೌರ್ ನಿರ್ಮಿಸಿದ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ಟ್ರಕ್ ಅನ್ನು ಇತ್ತೀಚೆಗೆ ಪ್ರದರ್ಶಿಸಿತು.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

'ರೆವಲ್ಯೂಷನರಿ ಟೆಕ್ನಾಲಜಿ' (ಆರ್ಟಿ) ಎಂದು ಕರೆಯಲ್ಪಡುವ ಅಗ್ನಿಶಾಮಕ ಟ್ರಕ್ ಅನ್ನು ಮೊದಲ ಕಾನ್ಸೆಪ್ಟ್ ರೂಪದಲ್ಲಿ 2019ರ ಆರಂಭದಲ್ಲಿ ಮೊದಲಿಗೆ ಅನಾವರಣಗೊಳಿಸಿತ್ತು. ಅಂದಿನಿಂದ ಬರ್ಲಿನ್, ಆಮ್ಸ್ಟರ್‌ಡ್ಯಾಮ್ ಮತ್ತು ದುಬೈನಲ್ಲಿ ಈ ವಾಹನದ ಹಲವು ಹಂತಗಳ ಟೆಸ್ಟಿಂಗ್ ಅನ್ನು ನಡೆಸಿದ್ದರು. ಈ ಹೊಸ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನವು ವೊಲ್ವೊ ಪೆಂಟಾದ ಎಲೆಕ್ಟ್ರಿಕ್ ಡ್ರೈವ್‌ಲೈನ್ ಅನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಇದರ ಎರಡು ವೊಲ್ವೊ ಎಲೆಕ್ಟ್ರಿಕ್ ಮೋಟರ್‌ಗಳು, ಪ್ರತಿ ಆಕ್ಸಲ್‌ನಲ್ಲಿ ಒಂದು, ಮತ್ತು ಪ್ರತಿ ಮೋಟರ್‌ನಲ್ಲಿ ಎರಡು-ಸ್ಪೀಡ್ ಟ್ರಾನ್ಸ್‌ಮಿಷನ್ ಅನ್ನು ಸಂಯೋಜಿಸಲಾಗಿದೆ. ಇದು 50 ಕಿ.ವ್ಯಾಟ್ ಮತ್ತು 100 ಕಿ.ವ್ಯಾಟ್ ಹೆಚ್ ಸಂರಚನೆಗಳಲ್ಲಿ ಲಭ್ಯವಿರುವ ಬ್ಯಾಟರಿ ಪ್ಯಾಕ್‌ಗೆ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಇನ್ನು ಇದು 490 ಬಿಹೆಚ್‍ಪಿ ಪವರ್ ಮತ್ತು ಎನ್‌ಎಂ ವರೆಗೆ ಉತ್ಪಾದಿಸುತ್ತದೆ. ಇನ್ನು ಇದರ ಡೀಸೆಲ್ ಎಂಜಿನ್ 272 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ 150 ಕಿ.ವ್ಯಾಟ್ ವರೆಗೆ ಡಿಸಿ ಫಾಸ್ಟ್ ಚಾರ್ಜಿಂಗ್ ನೀಡುತ್ತದೆ. 100 ಕಿಲೋವ್ಯಾಟ್ ಬ್ಯಾಟರಿ ಆವೃತ್ತಿಯಲ್ಲಿ ವಾಹನವು ಒಂದು ಗಂಟೆಯಲ್ಲಿ ಶೇಕಡಾ 50 ರಿಂದ 80 ರವರೆಗೆ ಚಾರ್ಚ್ ಆಗುತ್ತದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಇದು ಆಲ್-ಎಲೆಕ್ಟ್ರಿಕ್ ವಾಹನವಲ್ಲದಿದ್ದರೂ, ಇದನ್ನು ಮೀಸಲಾದ ಇವಿ ಮೋಡ್‌ನಲ್ಲಿ ಓಡಿಸಬಹುದು ಮತ್ತು ಅದರ ಬ್ಯಾಟರಿ ಪವರ್ ಮೂಲಕ ಇತರ ಭಾಗಗಳು ಕಾರ್ಯನಿರ್ವಹಿಸುವ ಸಾಮರ್ಥ್ಯವಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಈ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನವು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ಪಡೆಯಬಲ್ಲದು, ತಿರುವುಗಳಲ್ಲಿ ಉತ್ತಮ ಕಂಟ್ರೋಲ್ ನಿಂದ ವೇಗವಾಗಿ ಸಾಗುತ್ತದೆ. ಇದು ತುರ್ತು ಸಂದರ್ಭಗಳಲ್ಲಿ ಹೆಚ್ಚು ನೆರವಾಗುತ್ತದೆ ಎಂದು ವೊಲ್ವೊ ಈ ಹಿಂದೆ ಹೇಳಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಇನ್ನು ಈ ವಾಹನವು ಉತ್ತಮ ದಕ್ಷತೆ, ಕ್ರಿಯಾತ್ಮಕತೆ ಮತ್ತು ಸುರಕ್ಷತೆ, ಜೊತೆಗೆ ಹೆಚ್ಚಿನ ಲೋಡಿಂಗ್ ಸಂಪುಟಗಳು, ಕಾಂಪ್ಯಾಕ್ಟ್ ಆಯಾಮಗಳು ಮತ್ತು ಒಂದು ರೀತಿಯ ಚುರುಕುತನವನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಇನ್ನು ಇಂಡಿಪೆಂಡಡ್ ಸಸ್ಪೆಂಕ್ಷನ್ ಮತ್ತು ಹೈಡ್ರೊಪ್ನ್ಯೂಮ್ಯಾಟಿಕ್ ಚಾಸಿಸ್ ನೊಂದಿಗೆ ಜೋಡಿಯಾಗಿರುವ ಅಗ್ನಿಶಾಮಕ ಟ್ರಕ್‌ನ ಎಲೆಕ್ಟ್ರಿಕ್ ಡ್ರೈವ್‌ಲೈನ್ ಉತ್ತಮ ಗುಣಮಟ್ಟದ ಸುರಕ್ಷತೆ ಮತ್ತು ಉತ್ತಮ ಚಾಲನಾ ಕಾರ್ಯಕ್ಷಮತೆಯನ್ನು ನೀಡುತ್ತದೆ

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ

ಇನ್ನು ಇದು ಪ್ರಪಂಚದಾದ್ಯಂತದ ಅಗ್ನಿಶಾಮಕ ಇಲಾಖೆಗಳು ತಮ್ಮ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಈ ಎಲೆಕ್ಟ್ರಿಕ್ ಅಗ್ನಿಶಾಮಕ ವಾಹನ ಅಗ್ನಿಶಾಮಕ ವಿಭಾಗದಲ್ಲಿ ಗೇಮ್ ಚೇಂಜರ್ ಆಗಿರಬಹುದು ಮತ್ತು ಶೂನ್ಯ ಎಕ್ಸಾಸ್ಟ್ ನೊಂದಿಗೆ ಮಾಲಿನ್ಯ ಮತ್ತು ಶಬ್ದದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆಗೊಳಿಸುವುದರಿಂದ ಪರಿಸರಕ್ಕೆ ಹೆಚ್ಚಿನ ಪ್ರಯೋಜನ ವಾಗುತ್ತದೆ.

Most Read Articles

Kannada
English summary
World's First Electric Fire Truck Demonstrated. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X