Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಾಗತಿಕ ಮಾರುಕಟ್ಟೆಗಾಗಿ ನವೀಕರಿಸಿದ ಇ-ಟ್ರಾನ್ ಜಿಟಿ ಬಿಡುಗಡೆ ಮಾಡಲಿದೆ ಆಡಿ
ಆಡಿ ಕಂಪನಿಯು ತನ್ನ ಮೂರನೇ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಇ-ಟ್ರಾನ್ ಜಿಟಿ ಆವೃತ್ತಿಯನ್ನು ಜಾಗತಿಕ ಮಾರುಕಟ್ಟೆಗಳಿಗೆ ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಬಿಡುಗಡೆಗೂ ಇ-ಟ್ರಾನ್ ಜಿಟಿ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ.

2018ರ ಲಾಸ್ ಏಂಜಲೀಸ್ ಮೋಟಾರ್ ಶೋನಲ್ಲಿ ಕಾನ್ಸೆಪ್ಟ್ ಕಾರ್ ಆಗಿ ಪ್ರದರ್ಶನಗೊಂಡಿದ್ದ ಇ-ಟ್ರಾನ್ ಜಿಟಿ ಆವೃತ್ತಿಯು ಇದೀಗ ಉತ್ಪಾದನಾ ಮಾದರಿಯನ್ನು ಪಡೆದುಕೊಂಡಿದ್ದು, ಉತ್ಪಾದನಾ ಆವೃತ್ತಿಯು ಕಾನ್ಸೆಪ್ಟ್ ಮಾದರಿಯಲ್ಲೇ ಬಹುತೇಕ ವಿನ್ಯಾಸಗಳನ್ನು ಪಡೆದುಕೊಂಡಿದೆ. ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಪರ್ಫಾಮೆನ್ಸ್ ಆವೃತ್ತಿಯಾಗಿ ಬಿಡುಗಡೆ ಮಾಡುತ್ತಿರುವ ಆಡಿ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ನೀಡಿದೆ.

ಹೊಸ ಕಾರಿನಲ್ಲಿ ಪರ್ಫಾಮೆನ್ಸ್‌ಗೆ ಪೂರಕವಾಗಿ ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಲು ಮುಂಭಾಗದ ವಿನ್ಯಾಸವನ್ನು ವಾಯುಬಲವೈಜ್ಞಾನಿಕವಾಗಿ ಅಭಿವೃದ್ದಿಗೊಳಿಸಿದ್ದು, ಸ್ಪೋರ್ಟ್ಸ್ ಸಲೂನ್ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದೆ.

ಇ-ಟ್ರಾನ್ ಜಿಟಿ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಬಲಿಷ್ಠತೆ ನೀಡಲು ಸಹಸಂಸ್ಥೆಯಾಗಿರುವ ಪೋರ್ಷೆ ಟೈಕಾನ್‌ನಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಟೀಸರ್‌ನಲ್ಲಿ ಕಂಪನಿಯು ಇ-ಟ್ರಾನ್ ಕಾರಿನ ಸೈಡ್ ಪ್ರೊಫೈಲ್ ಮಾತ್ರ ತೋರಿಸಿದೆ.

ಹೊಸ ಇ-ಟ್ರಾನ್ ಜಿಟಿ ಪ್ರತ್ಯೇಕ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಕಾರು ಮಾದರಿಯಾಗಿದ್ದು, 590 ಬಿಎಚ್‌ಪಿ ಮತ್ತು 830 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಆಡಿ ಇ-ಟ್ರಾನ್ ಜಿಟಿಯಲ್ಲಿ 83.7 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಕೆ ಮಾಡಲಾಗಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 400 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇ-ಟ್ರಾನ್ ಜಿಟಿ ಮಾದರಿಯು ಮುಂಬರುವ ಕೆಲವೇ ದಿನಗಳಲ್ಲಿ ಯುರೋಪ್ ಮತ್ತು ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಈ ಕಾರು ಸದ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

ಆದರೆ ಆಡಿ ಕಂಪನಿಯು ಸ್ಟ್ಯಾಂಡರ್ ಇ-ಟ್ರಾನ್ ಮಾದರಿಯನ್ನು ಮುಂಬರುವ ಏಪ್ರಿಲ್ ಹೊತ್ತಿಗೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, 2019ರ ಆರಂಭದಲ್ಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿರುವ ಇ-ಟ್ರಾನ್ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಮಾರಾಟಗೊಂಡಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಯುರೋಪ್ ಮಾರುಕಟ್ಟೆಯಲ್ಲಿ ಕಳೆದ ವರ್ಷ ಅವಧಿಯಲ್ಲಿ ಒಟ್ಟು 17,641 ಯುನಿಟ್ ಮಾರಾಟಗೊಳ್ಳುವ ಮೂಲಕ ಬೆಸ್ಟ್ ಸೆಲ್ಲಿಂಗ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯಾಗಿ ಹೊರಹೊಮ್ಮಿರುವ ಇ-ಟ್ರಾನ್ ಕಾರು ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಇ-ಟ್ರಾನ್ ಎಲೆಕ್ಟ್ರಿಕ್ ಕಾರು ದುಬಾರಿ ಬೆಲೆ ನಡುವೆಯೂ ಭರ್ಜರಿ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಳ್ಳುತ್ತಿದ್ದು, ಅಮೆರಿಕದಲ್ಲೂ ಟೆಸ್ಲಾ ಕಾರುಗಳಿಗೂ ಉತ್ತಮ ಪೈಪೋಟಿ ನೀಡುವ ಮೂಲಕ ಕಳೆದ ವರ್ಷಕ್ಕಿಂತ ಶೇ.50ರಷ್ಟು ಬೆಳವಣಿಗೆ ಸಾಧಿಸಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿರುವ ಇ-ಟ್ರಾನ್ ಕಾರು ಈಗಾಗಲೇ ಪ್ರದರ್ಶನಗೊಳ್ಳುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಕಳೆದ ವರ್ಷದ ಮಾರ್ಚ್‌ನಲ್ಲಿಯೇ ಬಿಡುಗಡೆಯಾಗಬೇಕಿದ್ದ ಹೊಸ ಕಾರು ಕರೋನಾ ವೈರಸ್ ಪರಿಣಾಮ ಬಿಡುಗಡೆಯು ವಿಳಂಬವಾಗಿದೆ.