ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕೆಲ ದಿನಗಳ ಹಿಂದಷ್ಟೇ ರಣವೀರ್ ಸಿಂಗ್ ಹೊಸ ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಖರೀದಿಸಿದ್ದರು.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ರಣವೀರ್ ಸಿಂಗ್ ಈಗ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಕಾರ್ ಅನ್ನು ಖರೀದಿಸಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ರಣವೀರ್ ಸಿಂಗ್ ಈ ಐಷಾರಾಮಿ ಎಸ್‌ಯು‌ವಿಯನ್ನು ಖರೀದಿಸಿದ್ದಾರೆ. ರಣವೀರ್ ಸಿಂಗ್ ತಮ್ಮ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿಯೊಂದಿಗೆ ಕಾಣಿಸಿಕೊಂಡಿರುವ ಚಿತ್ರ ವೈರಲ್ ಆಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ದೇಶಿಯ ಮಾರುಕಟ್ಟೆಯಲ್ಲಿ ಇದುವರೆಗೂ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯು‌ವಿಯ 50ಕ್ಕೂ ಹೆಚ್ಚು ಯುನಿಟ್'ಗಳನ್ನು ಮಾತ್ರ ವಿತರಿಸಲಾಗಿದೆ ಎಂಬುದು ಗಮನಾರ್ಹ. ಮೂಲಗಳ ಪ್ರಕಾರ ಈ ಎಸ್‌ಯು‌ವಿಯನ್ನು 2021ರ ಡಿಸೆಂಬರ್ ವರೆಗೆ ಸಂಪೂರ್ಣವಾಗಿ ಮಾರಾಟ ಮಾಡಲಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಈ ಎಸ್‌ಯು‌ವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.2.43 ಕೋಟಿಗಳಾಗಿದೆ. ಸಂಪೂರ್ಣವಾಗಿ ಲೋಡ್ ಮಾಡಲಾದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 4 ಮ್ಯಾಟಿಕ್ ಎಸ್‌ಯು‌ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಈ ಎಸ್‌ಯು‌ವಿಯು ರೇಡಿಯೇಟರ್ ಗ್ರಿಲ್, 22 ಇಂಚು ಹಾಗೂ 23 ಇಂಚಿನ ಸ್ಪೋಕ್ ಅಲಾಯ್ ವ್ಹೀಲ್ಸ್, ಡಿ ಪಿಲ್ಲರ್‌ನಲ್ಲಿ ಮೇಬ್ಯಾಕ್ ಬ್ರಾಂಡ್ ಲೋಗೊ, ಕ್ರೋಮ್ ಇನ್ಸರ್ಟ್'ಗಳನ್ನು ಹೊಂದಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಈ ಎಸ್‌ಯು‌ವಿಯನ್ನು 4 ಹಾಗೂ 5 ಸೀಟುಗಳ ಕ್ಯಾಬಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. 4 ಸೀಟುಗಳ ಆವೃತ್ತಿಯಲ್ಲಿ ಫಿಕ್ಸೆಡ್ ಸೆಂಟರ್ ಕನ್ಸೋಲ್‌ ನೀಡಲಾಗಿದೆ. ಇದರಲ್ಲಿರುವ ರೆಫ್ರಿಜರೇಟರ್'ನಲ್ಲಿ ಶಾಂಪೇನ್ ಸಂಗ್ರಹಿಸಬಹುದು.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

4 ಸೀಟು ಹಾಗೂ 5 ಸೀಟುಗಳ ಎರಡೂ ಆವೃತ್ತಿಗಳಲ್ಲಿ ಹಿಂಭಾಗದಲ್ಲಿ ರಿಕ್ಲೈನ್ ಸೀಟುಗಳನ್ನು ನೀಡಲಾಗಿದೆ. ಈ ಎಸ್‌ಯು‌ವಿಯಲ್ಲಿರುವ ಕ್ಯಾಬಿನ್ ಅನ್ನು ಹಲವಾರು ಮಾದರಿಗಳಲ್ಲಿ ನೀಡಲಾಗುತ್ತದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿಯು 12.3 ಇಂಚಿನ ಎಂಬಕ್ಸ್ ಇನ್ಫೋಟೇನ್ಮೆಂಟ್ ಸಿಸ್ಟಂ, 12.3-ಇಂಚಿನ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಬರ್ಮಿಸ್ಟರ್ ಸರೌಂಡ್ ಸೌಂಡ್ ಸಿಸ್ಟಂ, ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್, ಡ್ಯಾಶ್ ಬೋರ್ಡ್'ನಲ್ಲಿ ನಪ್ಪಾ ಲೆದರ್ ಅನ್ನು ಹೊಂದಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಈ ಎಸ್‌ಯು‌ವಿಯಲ್ಲಿ ಮರ್ಸಿಡಿಸ್ ಮಿ ಕನೆಕ್ಟೆಡ್ ಕಾರ್ ಟೆಕ್ನಾಲಜಿಯನ್ನು ನೀಡಲಾಗಿದೆ. ಇದರ ಜೊತೆಗೆ 8 ಏರ್‌ಬ್ಯಾಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್, ಆಫ್ ರೋಡ್ ಡ್ರೈವಿಂಗ್ ಮೋಡ್ ಸೇರಿದಂತೆ ಹಲವು ಫೀಚರ್'ಗಳನ್ನು ನೀಡಲಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಈ ಎಸ್‌ಯು‌ವಿಯು ಪನೋರಾಮಿಕ್ ಸ್ಲೈಡಿಂಗ್ ಸನ್‌ರೂಫ್, ಮಸಾಜ್ ಸೀಟ್ ಹಾಗೂ ಫೋಲ್ಡಿಂಗ್ ಟೇಬಲ್'ಗಳನ್ನು ಸಹ ಹೊಂದಿದೆ. ಈ ಐಷಾರಾಮಿ ಎಸ್‌ಯುವಿಯಲ್ಲಿ 4.0 ಲೀಟರ್ ವಿ 8 ಎಂಜಿನ್‌ ಅಳವಡಿಸಲಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 600 ಎಸ್‌ಯು‌ವಿ ಖರೀದಿಸಿದ ರಣವೀರ್ ಸಿಂಗ್

ಈ ಎಂಜಿನ್ 542 ಬಿಹೆಚ್‌ಪಿ ಪವರ್ ಹಾಗೂ 730 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 9 ಜಿ ಟ್ರೋನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ ಅನ್ನು ಇಕ್ಯೂ ಬೂಸ್ಟ್ ಸ್ಟಾರ್ಟರ್ ಜನರೇಟರ್‌ಗೆ ಜೋಡಿಸಲಾಗಿದೆ. ಇದು ಅಲ್ಪಾವಧಿಗೆ ಹೆಚ್ಚುವರಿ 21 ಬಿಹೆಚ್‌ಪಿ ಪವರ್ ಹಾಗೂ 249 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಚಿತ್ರಕೃಪೆ: ಆಟೋ ಹ್ಯಾಂಗರ್ ಮರ್ಸಿಡಿಸ್ ಬೆಂಝ್

Most Read Articles

Kannada
English summary
Bollywood actor Ranveer Singh buys new Mercedes Maybach GLS600 SUV. Read in Kannada.
Story first published: Thursday, July 8, 2021, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X