Just In
- 40 min ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 2 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 12 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 14 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- News
ದೇಶ ಉದ್ದೇಶಿಸಿ ಮೋದಿ ಭಾಷಣ; ಮನ್ ಕೀ ಬಾತ್ ಮುಖ್ಯಾಂಶಗಳು
- Movies
ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ವಿನೂತನ ವಿನ್ಯಾಸದ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್
ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯಾದ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುತ್ತಿರುವ ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಆಟೋ ಉತ್ಪಾದನಾ ವಲಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿರುವ ಸಿಟ್ರನ್ ಕಂಪನಿಯು ತಮಿಳುನಾಡಿನ ತಿರುವಲ್ಲೂರ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ಈಗಾಗಲೇ ಹೊಸ ಕಾರುಗಳ ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಹಂತವಾಗಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆಗೊಳಿಸಿದ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಹಲವು ಕಾರು ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಸಿಟ್ರನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟಗೊಂದಿಗೆ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಆಟೋ ಉತ್ಪಾದನೆಯಲ್ಲಿ ಸುಮಾರು 100 ವರ್ಷಗಳ ಅನುಭವವನ್ನು ಹೊಂದಿದೆ.

ಆಟೋ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಇದೀಗ ಸಿಟ್ರನ್ ಕಂಪನಿಯು ತನ್ನ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ವಿವಿಧ ಮಾದರಿಯ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದೆ.

ಸಿಟ್ರನ್ ಕಂಪನಿಯು ಸಿ5 ಏರ್‌ಕ್ರಾಸ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲಿದ್ದು, ಶೇ.90 ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆಯೊಂದಿಗೆ ಹೊಸ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವು ಯೋಜನೆ ಹೊಂದಿದೆ. ಸಿ5 ಏರ್‌ಕ್ರಾಸ್ ಎಸ್‌ಯುವಿ ನಂತರ ಸಿ3 ಸ್ಪೋರ್ಟಿ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಮೈಕ್ರೊ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲಿರುವ ಸಿಟ್ರನ್ ಇಂಡಿಯಾ ಕಂಪನಿಯು ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಸಿಟ್ರನ್ ಕಂಪನಿಯು ಹೊಸ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಈಗಾಗಲೇ ಭಾರತದಲ್ಲಿ ವಿವಿಧ ಹಂತದ ಎಂಜಿನ್ ಕಾರ್ಯಕ್ಷಮತೆಯ ಪರೀಕ್ಷೆಗಳನ್ನು ಕೈಗೊಂಡಿದ್ದು, ಮೊದಲ ಬಾರಿಗೆ ಸಿಸಿ21 ಕೋಡ್ ನೆಮ್ ಆಧರಿಸಿರುವ ಮೈಕ್ರೊ ಎಸ್‌ಯುವಿ ಮಾದರಿಯನ್ನು ಪರೀಕ್ಷೆ ಮಾಡುತ್ತಿರುವುದು ಬಹಿರಂಗವಾಗಿದೆ.

ಮಾರುತಿ ಇಗ್ನಿಸ್, ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಮತ್ತು ಬಿಡುಗಡೆಯಾಗಲಿರುವ ಟಾಟಾ ಹೆಬಿಎಕ್ಸ್ ಮೈಕ್ರೊ ಎಸ್‌ಯುವಿ ಕಾರುಗಳಿಗೆ ಪೈಪೋಟಿ ಸಿಟ್ರನ್ ಹೊಸ ಮೈಕ್ರೊ ಎಸ್‌ಯುವಿ ಬಿಡುಗಡೆಯಾಗಲಿದ್ದು, ಹೊಸ ಕಾರು ಭಾರತದಲ್ಲೇ ಮೊದಲ ಬಾರಿಗೆ ಫ್ಲೆಕ್ಸ್ ಫ್ಯೂಲ್ ಎಂಜಿನ್ ಆಧರಿಸಿ ಬಿಡುಗಡೆಯಾಗಲಿದೆ.
MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ಫ್ಲೆಕ್ಸ್ ಫ್ಯೂಲ್ ಎಂಜಿನ್ ಹೊಂದಲಿರುವ ಸಿಟ್ರನ್ ಹೊಸ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಟರ್ಬೊ ಅಳವಡಿಸಲಾಗುತ್ತಿದ್ದು, ಹೊಸ ಎಂಜಿನ್ ಅನ್ನು ಪೆಟ್ರೋಲ್ ಜೊತೆಗೆ ಎನೆಥಾಲ್ ಮೂಲಕವೂ ಓಡಿಸಬಹುದಾಗಿದೆ.

ಯುರೋಪಿನ್ ಮಾರುಕಟ್ಟೆಗಳಲ್ಲಿ ಈಗಾಗಲೇ ಹಲವಾರು ಕಾರು ಕಂಪನಿಗಳು ಫ್ಲೆಕ್ಸ್ ಫ್ಯೂಲ್ ಎಂಜಿನ್ ಅಳವಡಿಕೆಯಲ್ಲಿ ಯಶಸ್ವಿ ಸಾಧಿಸಿದ್ದು, ಸಿಟ್ರನ್ ಕೂಡಾ ತನ್ನ ಹೊಸ ಮೈಕ್ರೊ ಎಸ್‌ಯುವಿ ಮಾದರಿಯಲ್ಲಿ ಹೊಸ ಎಂಜಿನ್ ಜೋಡಣೆ ಮಾಡುತ್ತಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಹೊಸ ಕಾರನ್ನು ಸದ್ಯಕ್ಕೆ ಸಿಸಿ21 ಎನ್ನುವ ಕೋಡ್ ನೆಮ್ ಮೇಲೆ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಸಿ5 ಏರ್‌ಕ್ರಾಸ್ ಬಿಡುಗಡೆಯ ನಂತರ ಹೊಸ ಕಾರುಗಳ ಬಗೆಗೆ ಸಿಟ್ರನ್ ಕಂಪನಿಯು ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.