ಸಿ5 ಏರ್‌ಕ್ರಾಸ್ ನಂತರ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಸಿ5 ಏರ್‌ಕ್ರಾಸ್ ಎಸ್‌ಯುವಿಯ ಉತ್ಪಾದನಾ ಆವೃತ್ತಿಯನ್ನು ಭಾರತದಲ್ಲಿ ಅನಾವರಣಗೊಳಿಸುವ ಮೂಲಕ ಶೀಘ್ರದಲ್ಲೇ ಹೊಸ ಕಾರನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ಸಿಟ್ರನ್ ಕಂಪನಿಯು ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಆಟೋ ಉತ್ಪಾದನಾ ವಲಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿರುವ ಸಿಟ್ರನ್ ಕಂಪನಿಯು ತಮಿಳುನಾಡಿನ ತಿರುವಲ್ಲೂರ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ಈಗಾಗಲೇ ಹೊಸ ಕಾರುಗಳ ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಹಂತವಾಗಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆಗೊಳಿಸಿದ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಹಲವು ಕಾರು ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಸಿಟ್ರನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟಗೊಂದಿಗೆ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಆಟೋ ಉತ್ಪಾದನೆಯಲ್ಲಿ ಸುಮಾರು 100 ವರ್ಷಗಳ ಅನುಭವವನ್ನು ಹೊಂದಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಆಟೋ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಇದೀಗ ಸಿಟ್ರನ್ ಕಂಪನಿಯು ತನ್ನ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ವಿವಿಧ ಮಾದರಿಯ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಮತ್ತು ಎಂಪಿವಿ ಕಾರುಗಳನ್ನು ಮಾರಾಟ ಮಾಡಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಸಿಟ್ರನ್ ಕಂಪನಿಯು ಸಿ5 ಏರ್‌ಕ್ರಾಸ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲಿದ್ದು, ಶೇ.90 ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆಯೊಂದಿಗೆ ಹೊಸ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವು ಯೋಜನೆ ಹೊಂದಿದೆ. ಸಿ5 ಏರ್‌ಕ್ರಾಸ್ ಎಸ್‌ಯುವಿ ನಂತರ ಸಿ3 ಸ್ಪೋರ್ಟಿ ಕಾರು ಮಾದರಿಯನ್ನು ಬಿಡುಗಡೆ ಮಾಡಲಿರುವ ಸಿಟ್ರನ್ ಇಂಡಿಯಾ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಸಿಟ್ರನ್ ಕಂಪನಿಯು ಹೊಸ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಈಗಾಗಲೇ ಭಾರತದಲ್ಲಿ ವಿವಿಧ ಹಂತದ ಎಂಜಿನ್ ಕಾರ್ಯಕ್ಷಮತೆಯ ಪರೀಕ್ಷೆಗಳನ್ನು ಕೈಗೊಂಡಿದ್ದು, ಮುಂಬರುವ ದೀಪಾವಳಿ ಹೊತ್ತಿಗೆ ಹೊಸ ಕಾರು ಬಿಡುಗಡೆಯಾಗಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಹೊಸ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬ್ರೆಜಿಲ್‌ನಲ್ಲಿರುವ ತನ್ನ 2ನೇ ಅತಿ ದೊಡ್ಡ ಕಾರು ಉತ್ಪಾದನಾ ಘಟಕದಲ್ಲಿ ಅಭಿವೃದ್ದಿಗೊಳಿಸಿರುವ ಸಿಟ್ರನ್ ಕಂಪನಿಯು ಹೊಸ ಕಾರನ್ನು ಬ್ರೆಜಿಲ್ ಮತ್ತು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಎಂಜಿನ್ ಆಯ್ಕೆಗಳು ವಿವಿಧ ಮಾರುಕಟ್ಟೆಗಳಿಗೆ ವಿಭಿನ್ನವಾಗಿರಲಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಲಿರುವ ಸಿ3 ಸ್ಟೋರ್ಟಿ ಕಾರು ಮಾದರಿಯು ಸಾಮಾನ್ಯ ಮಾದರಿಯ 1.6 ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಹೊಂದಲಿದ್ದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರು ಮಾದರಿಯು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ವಿವಿಧ ರಾಷ್ಟ್ರಗಳಿಗಾಗಿ "ಸ್ಮಾರ್ಟ್ ಕಾರ್" ಯೋಜನೆಯನ್ನು ಆರಂಭಿಸಿರುವ ಸಿಟ್ರನ್ ಕಂಪನಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಸಿ5 ಏರ್‌ಕ್ರಾಸ್ ಬಿಡುಗಡೆಯೊಂದಿಗೆ ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯಗಳನ್ನು ವಿಸ್ತರಿಸಲಿರುವ ಕಂಪನಿಯು ವರ್ಷಾಂತ್ಯದಲ್ಲಿ ಕಂಪ್ಯಾಕ್ಟ್ ಬಿಡುಗಡೆ ಮಾಡಲಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಸಿಟ್ರನ್ ಇಂಡಿಯಾ

ಮತ್ತೊಂದು ಪ್ರಮುಖ ವಿಚಾರವೆಂದರೆ ಸಿಟ್ರನ್ ಕಂಪನಿಯು ಸದ್ಯ ಬಿಡುಗಡೆಯ ಸಿದ್ದತೆಯಲ್ಲಿರುವ ಸಿ5 ಏರ್‌ಕ್ರಾಸ್ ಕಾರಿನಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊರತುಪಡಿಸಿ ಭವಿಷ್ಯದಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮಾತ್ರ ನೀಡಲಿದ್ದು, ಸಿಟ್ರನ್ ಹೊಸ ಕಾರುಗಳು ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರಲಿವೆ.

Most Read Articles

Kannada
English summary
Citroen To Launch C3 Sporty In India During Second Quadrant Of 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X