ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಸಿಟ್ರನ್ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ನಿರತವಾಗಿದೆ. ಸಿಟ್ರನ್ ಕಂಪನಿಯು ಇನ್ನು ಕೆಲವು ದಿನಗಳಲ್ಲಿ ತನ್ನ ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಸಿಟ್ರನ್ ಕಂಪನಿಯು ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ಬಿಡುಗಡೆಗೊಳಿಸುವುದಕ್ಕಿಂತ ಮುನ್ನ ಹಲವು ಬಾರಿ ಈ ಎಸ್‌ಯುವಿಯ ರೋಡ್ ಟೆಸ್ಟ್ ನಡೆಸಿದೆ. ಕಂಪನಿಯು ಸಿ 5 ಏರ್‌ಕ್ರಾಸ್ ಎಸ್‌ಯುವಿಯ ಜೊತೆಗೆ ಭಾರತದಲ್ಲಿ ತನ್ನ ಜನಪ್ರಿಯ ಕಾರುಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಸಿಟ್ರನ್ ಕಂಪನಿಯು ಭಾರತದಲ್ಲಿ ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಇವುಗಳಲ್ಲಿ ಸಿ 5 ಏರ್‌ಕ್ರಾಸ್ ಎಸ್‌ಯುವಿಯು ಮೊದಲು ಬಿಡುಗಡೆಯಾಗಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಇತರ ಮಾದರಿಗಳು ಮುಂದಿನ ಮೂರು ವರ್ಷಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಸಿಟ್ರನ್ ಕಂಪನಿಯು ಸಿಸಿ 26 ಹೆಸರಿನ ಕಾರ್ ಅನ್ನು ಭಾರತಕ್ಕಾಗಿ ಮೀಸಲಿಟ್ಟಿದೆ. ಈ ಕಾರು ಮಧ್ಯಮ ಗಾತ್ರದ ಸೆಡಾನ್ ಆಗಿದೆ.

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವರ್ನಾ, ಮಾರುತಿ ಸುಜುಕಿ ಸಿಯಾಜ್ ಹಾಗೂ ಟೊಯೊಟಾ ಯಾರಿಸ್‌ ಕಾರುಗಳಿಗೆ ಪೈಪೋಟಿ ನೀಡಲು ಸಿಸಿ 26 ಕಾರ್ ಅನ್ನು ಬಿಡುಗಡೆಗೊಳಿಸಲು ಸಿಟ್ರನ್ ನಿರ್ಧರಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಕಂಪನಿಯು 2023ರ ವೇಳೆಗೆ ಈ ಕಾರನ್ನು ಬಿಡುಗಡೆಗೊಳಿಸಲು ಚಿಂತಿಸಿದೆ. ಈ ಕಾರಿನ ಬೆಲೆ ರೂ.10 ಲಕ್ಷಗಳಿಗಿಂತ ಕಡಿಮೆ ಇರುವ ನಿರೀಕ್ಷೆಗಳಿವೆ. ಸಿಟ್ರನ್‌ನ ಮೂಲ ಕಂಪನಿಯಾದ ಪಿಎಸ್‌ಎ ಕೆಲವು ವರ್ಷಗಳ ಹಿಂದೆ ಹಿಂದೂಸ್ತಾನ್ ಮೋಟಾರ್ಸ್‌ನಲ್ಲಿ ಸುಮಾರು ರೂ.80 ಕೋಟಿ ಮೌಲ್ಯದ ಷೇರುಗಳನ್ನು ಸ್ವಾಧೀನ ಪಡಿಸಿಕೊಂಡಿತ್ತು.

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಇದರಲ್ಲಿ ಅಂಬಾಸಿಡರ್ ಸಹ ಸೇರಿದೆ. ಸಿಟ್ರನ್ ಕಂಪನಿಯು ಈ ಹೆಸರನ್ನು ತನ್ನ ಮುಂಬರುವ ಸಿಸಿ 26 ಕಾರಿನ ಮಾದರಿಯಲ್ಲಿ ಬಳಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರಿಂದಾಗಿ ಅಂಬಾಸಿಡರ್ ಕಾರು ಶೀಘ್ರದಲ್ಲೇ ಮತ್ತೆ ಭಾರತದ ರಸ್ತೆಗಿಳಿಯುವ ನಿರೀಕ್ಷೆಗಳಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಅಂಬಾಸಿಡರ್ ಕಾರು ಹಿಂದೆ ಭಾರತೀಯ ರಾಜಕಾರಣಿಗಳ ನೆಚ್ಚಿನ ಕಾರ್ ಆಗಿತ್ತು. ಕಾಮರಾಜ್‌ರವರಿಂದ ಎಂಜಿಆರ್ ರವರವರೆಗೆ ತಮಿಳುನಾಡಿನ ಹಲವು ಪ್ರಮುಖ ರಾಜಕೀಯ ನಾಯಕರು ಈ ಕಾರ್ ಅನ್ನು ಬಳಸುತ್ತಿದ್ದರು.

ಅಂಬಾಸಿಡರ್ ಹೆಸರಿನಲ್ಲಿ ಹೊಸ ಕಾರು ಬಿಡುಗಡೆಗೊಳಿಸಲಿದೆ ಸಿಟ್ರನ್

ಆದ್ದರಿಂದ ಅಂಬಾಸಿಡರ್ ಹೆಸರಿನಲ್ಲಿ ಬಿಡುಗಡೆಯಾಗಲಿರುವ ಕಾರು ದೇಶದ ಜನರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅದರಲ್ಲೂ ರಾಜಕಾರಣಿಗಳಲ್ಲಿ ಹೆಚ್ಚಿನ ಕುತೂಹಲವನ್ನು ಉಂಟು ಮಾಡಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Citroen plans to launch CC 26 car in ambassador name. Read in Kannada.
Story first published: Thursday, March 4, 2021, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X