ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ವಾಹನ ತಯಾರಕ ಕಂಪನಿಗಳು ತಮ್ಮ ಏಪ್ರಿಲ್ ತಿಂಗಳ ಮಾರಾಟ ಅಂಕಿಅಂಶಗಳನ್ನು ಬಿಡುಗಡೆಗೊಳಿಸುತ್ತಿವೆ. ಕರೋನಾ ಸಾಂಕ್ರಾಮಿಕದಿಂದಾಗಿ ಏಪ್ರಿಲ್ ತಿಂಗಳಿನಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮಾರಾಟವು ಕುಸಿದಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಇದೇ ವೇಳೆ ಕಮರ್ಷಿಯಲ್ ವಾಹನಗಳ ಮಾರಾಟದಲ್ಲಿಯೂ ಭಾರಿ ಇಳಿಕೆ ಕಂಡುಬಂದಿದೆ. ಈ ಅಂಕಿ ಅಂಶಗಳನ್ನು ತಿಂಗಳ ಆಧಾರದ ಮೇಲೆ ಮಾಡಲಾಗಿದೆ. ಏಪ್ರಿಲ್ ತಿಂಗಳ ಮಾರಾಟವನ್ನು ಮಾರ್ಚ್ ತಿಂಗಳ ಮಾರಾಟಕ್ಕೆ ಹೋಲಿಸಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

2020ರ ಏಪ್ರಿಲ್‌ ತಿಂಗಳಿನಲ್ಲಿ ಕರೋನಾ ವೈರಸ್‌ ಕಾರಣಕ್ಕೆ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಯಾವುದೇ ಕಂಪನಿಗಳು ಒಂದೇ ಒಂದು ವಾಹನವನ್ನು ಸಹ ಮಾರಾಟ ಮಾಡಿರಲಿಲ್ಲ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಈಗ ಬಹಿರಂಗವಾಗಿರುವ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ ಏಪ್ರಿಲ್ ತಿಂಗಳಿನಲ್ಲಿ ಎಲ್ಲಾ ಕಮರ್ಷಿಯಲ್ ವಾಹನ ತಯಾರಕ ಕಂಪನಿಗಳು ಒಟ್ಟಾರೆಯಾಗಿ 38,104 ಯುನಿಟ್ ವಾಹನಗಳನ್ನು ಮಾರಾಟ ಮಾಡಿವೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಒಟ್ಟು 76,053 ಯುನಿಟ್ ವಾಹನಗಳು ಮಾರಾಟವಾಗಿದ್ದವು. ಕಮರ್ಷಿಯಲ್ ವಾಹನಗಳ ಮಾರಾಟ ಪ್ರಮಾಣವು ಕಳೆದ ತಿಂಗಳು 49.90%ನಷ್ಟು ಕುಸಿದಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ದೇಶದ ಅತಿದೊಡ್ಡ ಕಮರ್ಷಿಯಲ್ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಮಾರಾಟದ ಬಗ್ಗೆ ಹೇಳುವುದಾದರೆ, ಟಾಟಾ ಮೋಟಾರ್ಸ್ ಕಳೆದ ತಿಂಗಳು ಒಟ್ಟು 14,435 ಯುನಿಟ್ ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಿ, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಒಟ್ಟು 36,955 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟ ಪ್ರಮಾಣವು ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ತಿಂಗಳಿನಲ್ಲಿ 60.94%ನಷ್ಟು ಕುಸಿದಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಂಕಿಅಂಶಗಳ ಪ್ರಕಾರ ಮಹೀಂದ್ರಾ ಕಂಪನಿಯು ಏಪ್ರಿಲ್ ತಿಂಗಳಿನಲ್ಲಿ ಒಟ್ಟು 14,104 ಯುನಿಟ್ ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಒಟ್ಟು 17,116 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಮಹೀಂದ್ರಾ ಕಂಪನಿಯ ಮಾರಾಟ ಪ್ರಮಾಣವು ಮಾರ್ಚ್ ತಿಂಗಳಿಗೆ ಹೋಲಿಸಿದರೆ ಮಾರಾಟವು 17.60%ನಷ್ಟು ಕುಸಿದಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಈ ಪಟ್ಟಿಯಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯು ಮೂರನೇ ಸ್ಥಾನದಲ್ಲಿದೆ. ಅಶೋಕ್ ಲೇಲ್ಯಾಂಡ್‌ ಕಂಪನಿಯ ಕಮರ್ಷಿಯಲ್ ವಾಹನಗಳ ಮಾರಾಟ ಪ್ರಮಾಣವು ಕಳೆದ ತಿಂಗಳು 49.49%ನಷ್ಟು ಕುಸಿದಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಅಶೋಕ್ ಲೇಲ್ಯಾಂಡ್ ಕಂಪನಿಯು ಏಪ್ರಿಲ್ ತಿಂಗಳಿನಲ್ಲಿ ಒಟ್ಟು 7,961 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದರೆ, ಮಾರ್ಚ್ ತಿಂಗಳಿನಲ್ಲಿ ಒಟ್ಟು 15,761 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ವಿಇಸಿವಿ ಅಂದರೆ ವೋಲ್ವೋ-ಐಷರ್ ಕಮರ್ಷಿಯಲ್ ವೆಹಿಕಲ್ ಗ್ರೂಪ್ ಈ ಪಟ್ಟಿಯಲ್ಲಿ ಕೊನೆಯ ಹಾಗೂ ನಾಲ್ಕನೇ ಸ್ಥಾನದಲ್ಲಿದೆ. ವಿಇಸಿವಿ ಕಂಪನಿಯು ಏಪ್ರಿಲ್ ತಿಂಗಳಿನಲ್ಲಿ ಒಟ್ಟು 1,604 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಕಮರ್ಷಿಯಲ್ ವಾಹನ ಮಾರಾಟ

ಮಾರ್ಚ್ ತಿಂಗಳಿನಲ್ಲಿ ಕಂಪನಿಯು ಒಟ್ಟು 6,221 ಯುನಿಟ್ ವಾಹನಗಳನ್ನು ಮಾರಾಟ ಮಾಡಿತು. ಕಂಪನಿಯ ಮಾರಾಟ ಪ್ರಮಾಣವು ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ತಿಂಗಳಿನಲ್ಲಿ 74.22%ನಷ್ಟು ಕಡಿಮೆಯಾಗಿದೆ.

Most Read Articles

Kannada
English summary
Commercial vehicle sales declines in April 2021. Read in Kannada.
Story first published: Wednesday, May 5, 2021, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X