ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಅಮೆರಿಕಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ ಶೀಘ್ರದಲ್ಲೇ ಸೈಬರ್ ಟ್ರಕ್ ಎಂಬ ಹೊಸ ಪಿಕ್ ಅಪ್ ಟ್ರಕ್ ವಾಹನವನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವಾಹನವು ಟೆಸ್ಲಾ ಕಂಪನಿಯ ಇತರ ವಾಹನಗಳಿಗಿಂತ ಹೆಚ್ಚು ಟೆಕ್ನಾಲಜಿ ಹಾಗೂ ಫೀಚರ್'ಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಈ ಕಾರಣಕ್ಕೆ ಇಡೀ ಎಲೆಕ್ಟ್ರಿಕ್ ವಾಹನ ಉದ್ಯಮವು ಈ ವಾಹನದ ಬಿಡುಗಡೆಗೆ ಎದುರು ನೋಡುತ್ತಿದೆ. ಈಗ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಟೆಸ್ಲಾ ಸೈಬರ್ ಟ್ರಕ್ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹಂಚಿ ಕೊಂಡಿದ್ದಾರೆ. ಹೊಸ ಸೈಬರ್ ಟ್ರಕ್ ಎಲೆಕ್ಟ್ರಿಕ್ ವಾಹನದಲ್ಲಿ ಹ್ಯಾಂಡಲ್‌ಬಾರ್ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಈ ಮಾಹಿತಿ ಆಟೋ ಮೊಬೈಲ್ ಉತ್ಸಾಹಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಡೋರ್ ಹ್ಯಾಂಡಲ್‌'ಗಳಿಲ್ಲದಿದ್ದರೆ ವಾಹನದ ಬಾಗಿಲು ತೆರೆಯುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲಿ ಉದ್ಭವಿಸಿದೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ತಮ್ಮ ಟ್ವಿಟರ್ ಖಾತೆಯ ಮೂಲಕ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, ತಮ್ಮ ಸ್ವಂತ ಮಾಲೀಕರನ್ನು ಗುರುತಿಸಿ ಬಾಗಿಲು ತೆರೆಯುವ ಸೌಲಭ್ಯವನ್ನು ಸೈಬರ್ ಟ್ರಕ್‌ನಲ್ಲಿ ಸೇರಿಸಲಾಗುವುದು ಎಂದು ಹೇಳಿದ್ದಾರೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಸೈಬರ್ ಟ್ರಕ್ ಆಗಮನದ ನಿರೀಕ್ಷೆಯಲ್ಲಿರುವ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳ ಕುತೂಹಲವನ್ನು ಹೆಚ್ಚಿಸಲು ಈ ಮಾಹಿತಿ ನೀಡಲಾಗಿದೆ. ಟೆಸ್ಲಾ ಕಂಪನಿಯು ಸೈಬರ್ ಟ್ರಕ್ ಪಿಕ್ ಅಪ್ ಟ್ರಕ್ ವಾಹನವನ್ನು 2019 ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿತು.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಟೆಸ್ಲಾ ಕಂಪನಿಯು ಮುಂದಿನ ದಿನಗಳಲ್ಲಿ ಹೊಸ ಎಲೆಕ್ಟ್ರಿಕ್ ಟ್ರಕ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಕರೋನಾ ವೈರಸ್‌ ಕಾರಣದಿಂದಾಗಿ ಹೊಸ ವಾಹನದ ಪರಿಚಯವನ್ನು ಮುಂದಿನ ವರ್ಷಕ್ಕೆ (2022) ಮುಂದೂಡಲಾಗಿದೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಟೆಸ್ಲಾ ತನ್ನ ಟೆಕ್ಸಾಸ್ ಗಿಗಾಫ್ಯಾಕ್ಟರಿಯಲ್ಲಿ ಪಿಕ್-ಅಪ್ ಟ್ರಕ್ ಉತ್ಪಾದಿಸಲು ನಿರ್ಧರಿಸಿದೆ. ಟೆಸ್ಲಾ ಕಂಪನಿಯು ಈ ಪಿಕ್-ಅಪ್ ಟ್ರಕ್ ಅನ್ನು ಸರಕು ವಾಹನವಾಗಿ ಮಾತ್ರವಲ್ಲದೆ ವಿವಿಧ ರೀತಿಯ ಬಳಕೆಗಾಗಿಯೂ ಅಭಿವೃದ್ಧಿಪಡಿಸುತ್ತಿದೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಸೈಬರ್ ಟ್ರಕ್ ಪಿಕ್ ಅಪ್ ಟ್ರಕ್ ವಾಹನವನ್ನು 2019 ರಲ್ಲಿ ಅನಾವರಣಗೊಳಿಸಿದ್ದ ರೀತಿಯಲ್ಲಿಯೇ ಯಾವುದೇ ಬದಲಾವಣೆಗಳಿಲ್ಲದೆ ಬಳಕೆಗೆ ತರಲಾಗುವುದು ಎಂದು ಮತ್ತೊಂದು ಪೋಸ್ಟ್ ಮೂಲಕ ಎಲಾನ್ ಮಸ್ಕ್ ತಿಳಿಸಿದ್ದಾರೆ. ಸೈಬರ್ ಟ್ರ ಕ್ ಬಿಡುಗಡೆಗೂ ಮುನ್ನವೇ ವಿಶ್ವದ ಹಲವು ದೇಶಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗಿದೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಸೈಬರ್ ಟ್ರಕ್ ಪಿಕ್ ಅಪ್ ಟ್ರಕ್ ವಾಹನವು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 980 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಟೆಸ್ಲಾ ಕಂಪನಿ ಹೇಳಿಕೊಂಡಿದೆ. ಈ ವಾಹನವು 400 ಕಿ.ಮೀ ವೇಗಕ್ಕಿಂತ ಹೆಚ್ಚಿನ ವೇಗವನ್ನು ಹೊಂದಿದೆ ಎಂದು ಹೇಳಲಾಗಿದೆ.

ಸೈಬರ್ ಟ್ರಕ್ ವಾಹನದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎಲಾನ್ ಮಸ್ಕ್

ಈ ವಾಹನವು 0 - 100 ಕಿ.ಮೀ ವೇಗವನ್ನು 6.5 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡುತ್ತದೆ ಎಂದು ಹೇಳಲಾಗಿದೆ. ಟೆಸ್ಲಾ ಪಿಕ್ ಅಪ್ ಟ್ರಕ್ ವಾಹನವು ಇದುವರೆಗೂ 2 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್'ಗಳನ್ನು ಪಡೆದಿದೆ ಎಂಬುದು ಗಮನಾರ್ಹ.

Most Read Articles

Kannada
Read more on ಟೆಸ್ಲಾ tesla
English summary
Elon Musk shares interesting information about Cyber Truck vehicle. Read in Kannada.
Story first published: Friday, July 16, 2021, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X