ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಾಗಿ ಗೂಗಲ್ ಅಸಿಸ್ಟೆನ್ಸ್ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಹೊಸ ಫೀಚರ್ಸ್‌ನಲ್ಲಿ ಹಲವಾರು ವಾಯ್ಸ್ ಕಮಾಂಡ್ ಹೊಂದಿದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಹೊಸ ಕಾರು ಮಾದರಿಗಳಲ್ಲಿ ಗ್ರಾಹಕರು ಕಾರ್ ಕನೆಕ್ಟ್ ಮತ್ತು ವಾಯ್ಸ್ ಅಸಿಸ್ಟ್ ಫೀಚರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೋಂಡಾ ಕಾರ್ಸ್ ಕಂಪನಿಯು ಕೂಡಾ ತನ್ನ ಜನಪ್ರಿಯ ಕಾರು ಮಾದರಿಯಾದ ಸಿಟಿ ಸೆಡಾನ್ ಮಾದರಿಗಾಗಿ ಹೊಸ ಸೌಲಭ್ಯವನ್ನು ಇದೀಗ ಆಯ್ಕೆ ರೂಪದಲ್ಲಿ ಜೋಡಣೆ ಚಾಲನೆ ನೀಡಿದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಗೂಗಲ್ ಅಸಿಸ್ಟೆನ್ಸ್ ಅಲೆಕ್ಸಾ ಮೂಲಕ ಕಾರಿನ ಪ್ರಮುಖ ಫೀಚರ್ಸ್‌ಗಳನ್ನು ಕೇವಲ ಧ್ವನಿ ಆಜ್ಞೆಯ ಮೂಲಕವೇ ನಿಯಂತ್ರಿಸಬಹುದಾಗಿದ್ದು, ಇದು ಚಾಲನೆಯ ಸಂದರ್ಭದಲ್ಲೂ ಯಾವುದೇ ಗೊಂದಲಗಳಿಲ್ಲದೆ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗಲಿದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಆಧುನಿಕ ತಂತ್ರಜ್ಞಾನ ಹೊಂದಿರುವ ಕಾರುಗಳಲ್ಲಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಕಾರು ಚಾಲನೆ ಮಾಡುತ್ತಾ ವಿವಿಧ ಫೀಚರ್ಸ್‌ಗಳನ್ನು ಮ್ಯಾನುವಲ್ ಆಗಿ ನಿರ್ವಹಣೆ ಮಾಡುವುದು ಕೆಲವು ಬಾರಿ ಗೊಂದಲಗಳಿಗೆ ಕಾರಣವಾಗುತ್ತದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಕಾರು ಚಾಲನೆ ವೇಳೆ ಫೀಚರ್ಸ್ ಬಳಕೆ ಮಾಡುವ ಸಂದರ್ಭದಲ್ಲಿ ಚಾಲನೆ ಮೇಲಿನ ಗಮನವು ಬೇರೆಡೆ ಸೆಳೆಯುವ ಸಾಧ್ಯತೆಗಳಿದ್ದು, ಇದು ಟ್ರಾಫಿಕ್ ದಟ್ಟಣೆಯ ಸ್ಥಳಗಳಲ್ಲಿ ಕೆಲವು ಬಾರಿ ಅಪಘಾತಗಳಿಗೆ ಕಾರಣವಾಗಬಹುದು.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಹೀಗಾಗಿ ಕಾರಿನ ಸೇಫ್ಟಿ ಜೊತೆಗೆ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಲು ಹೋಂಡಾ ಕಂಪನಿಯು ಸಿಟಿ ಸೆಡಾನ್ ಮಾದರಿಗಾಗಿ ಗೂಗಲ್ ಅಸಿಸ್ಟೆನ್ಸ್ ಅಲೆಕ್ಸಾ ಫೀಚರ್ಸ್ ನೀಡಲಾಗಿದ್ದು, ಕಾರು ಚಾಲನೆ ಮಾಡುತ್ತಲೇ ಧ್ವನಿ ಆಜ್ಞೆಯ ಮೂಲಕ ವಿವಿಧ ಫೀಚರ್ಸ್‌ಗಳನ್ನು ನಿಯಂತ್ರಣ ಮಾಡಬಹುದು.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಧ್ವನಿ ಆಜ್ಞೆಗಳನ್ನು ಪಾಲಿಸಲು ಗೂಗಲ್ ನೆಸ್ಟ್ ಸ್ಪೀಕರ್ಸ್ ಇಲ್ಲವೆ ಅಂಡ್ರಾಯಿಡ್ ಫೋನ್ ಬಳಕೆ ಮಾಡಬಹುದಾಗಿದ್ದು, ಹೊಸ ವಾಯ್ಸ್ ಕಮಾಂಡ್‌ನಲ್ಲಿ ಒಟ್ಟು 36 ಫೀಚರ್ಸ್‌ಗಳನ್ನು ಧ್ವನಿ ಆಜ್ಞೆಯ ಮೂಲಕವೇ ನಿಯಂತ್ರಿಸಬಹುದು.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಗೂಗಲ್ ಅಸಿಸ್ಟೆನ್ಸ್ ಮೂಲಕ ಕಾರಿನ ಎಸಿ, ಡೋರ್ ಲಾಕ್ ಅಥವಾ ಅನ್‌ಲಾಕ್, ಕಾರ್ ಸ್ಟೇಟಸ್, ಬ್ಯಾಟರಿ ಲೈಫ್ ಚೆಕ್ಅಪ್, ಫ್ಯೂಲ್ ಸ್ಟೇಟಸ್, ಸರ್ವಿಸ್ ರಿಮೆಂಡರ್, ಇನ್ಸುರೆನ್ಸ್ ಲಭ್ಯತೆ ಸೇರಿದಂತೆ ಹಲವು ಸೇವೆಗಳನ್ನು ಕಾರು ಚಾಲನೆ ವೇಳೆ ಧ್ವನಿ ಮೂಲಕವೇ ಮರು ಉತ್ತರ ಪಡೆದುಕೊಳ್ಳಬಹುದು.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಇದರ ಜೊತೆಗೆ ಜಿಯೋ ಫೆನ್ಸ್(ಕಾರು ದಿನಂಪ್ರತಿ ಚಲಿಸುವ ನಿಗದಿತ ಪ್ರದೇಶವನ್ನು ಬಿಟ್ಟು ಹೊರಹೋದಲ್ಲಿ ಮಾಲೀಕನಿಗೆ ಎಚ್ಚರಿಸುವ ಫೀಚರ್ಸ್), ಇಂಧನ ಬಳಕೆ ಕುರಿತಾದ ಮಾಹಿತಿ ಮತ್ತು ತಾಂತ್ರಿಕ ದೋಷಗಳನ್ನು ಹೊಂದಿರುವ ಫೀಚರ್ಸ್ ಸರಿಪಡಿಸುವಂತೆ ವಾಯ್ಸ್ ಕಮಾಂಡ್ ಸೌಲಭ್ಯವು ಕಾರು ಮಾಲೀಕನಿಗೆ ಎಚ್ಚರಿಸುತ್ತದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಇನ್ನು ಸಿಟಿ ಸೆಡಾನ್ ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸಿದ ನಂತರ ಹೋಂಡಾ ಕಂಪನಿಯಯು ಅತಿಹೆಚ್ಚು ಗ್ರಾಹಕರ ಬೇಡಿಕೆ ಪಡೆದುಕೊಂಡಿದ್ದು, ಸೆಡಾನ್ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ಶೇ. 29 ರಷ್ಟು ಏರಿಕೆಯಾಗಿದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ನ್ಯೂ ಜನರೇಷನ್ ಸಿಟಿ ಕಾರು ವಿ, ವಿಎಕ್ಸ್, ಜೆಡ್ಎಕ್ಸ್ ಆವೃತ್ತಿಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರು ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.94 ಲಕ್ಷದೊಂದಿಗೆ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಹೊಸ ಸಿಟಿ ಕಾರಿನಲ್ಲಿ ಈ ಬಾರಿ ಡಬಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 120-ಬಿಎಚ್‌ಪಿ ಮತ್ತು 145-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

 ಸಿಟಿ ಸೆಡಾನ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ಸ್ ಜೋಡಣೆ ಮಾಡಿದ ಹೋಂಡಾ ಕಾರ್ಸ್

ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

Most Read Articles

Kannada
English summary
Honda City Gets Google Assistant Feature: Fifth-Generation Sedan Gets Voice-Commands.
Story first published: Saturday, July 31, 2021, 2:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X