ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ದೇಶಿಯ ಮಾರುಕಟ್ಟೆಯಲ್ಲಿ ಹಲವು ವಿಧದ ಐಷಾರಾಮಿ ಸೂಪರ್ ಕಾರುಗಳು ಖರೀದಿಗೆ ಲಭ್ಯವಿದೆ. ಈ ಐಷಾರಾಮಿ ಸೂಪರ್ ಕಾರುಗಳನ್ನು ಹೆಚ್ಚಾಗಿ ಸೆಲೆಬ್ರಿಟಿಗಳು, ಉದ್ಯಮಿಗಳು ಖರೀದಿಸುತ್ತಾರೆ. ಆದರೆ ಸಾಮಾನ್ಯ ಜನರಿಗೆ ಈ ಸೂಪರ್ ಕಾರುಗಳನ್ನು ಖರೀದಿಸುವ ಬಯಕೆ ಇದ್ದರೂ, ಇವುಗಳು ಬಹಳ ದುಬಾರಿಯಾಗಿದೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಅದರಲ್ಲಿ ಲ್ಯಾಂಬೊರ್ಗಿನಿ ಸೂಪರ್ ಕಾರುಗಳು ಅಥವಾ ಸ್ಪೋರ್ಟ್ಸ್‌ಕಾರ್‌ಗಳಿಗೆ ವಿಶ್ವಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಭಾರತದಲ್ಲಿಯು ಕೂಡ ಲ್ಯಾಂಬೊರ್ಗಿನಿ ಸೂಪರ್ ಕಾರುಗಳಿಗೆ ದೊಡ್ಡ ಅಭಿಮಾನಿಗಳ ವರ್ಗವಿದೆ. ಲ್ಯಾಂಬೊರ್ಗಿನಿ ಸೂಪರ್ ಕಾರುಗಳ ಖರೀದಿಸಬೇಕೆಂಬ ಕನಸು ಹೊಂದಿದ್ದಾರೆ. ಅದರೆ ಇದರಲ್ಲಿ ಬೆರಳಣಿಕೆಯಷ್ಟು ಜನರಿಗೆ ಮಾತ್ರ ಈ ಕನಸು ನನಸಾಗುತ್ತದೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಈ ಸೂಪರ್ ಕಾರುಗಳು ಖರೀದಿಸಲು ಮತ್ತು ನಿರ್ವಹಿಸಲು ಅತ್ಯಂತ ದುಬಾರಿಯಾಗಿದೆ. ಇದರಿಂದ ನಮ್ಮ ಬುದ್ಧಿವಂತ ಜನರು ಸಾಮಾನ್ಯ ಕಾರುಗಳನ್ನು ಐಷಾರಾಮಿ ಸೂಪರ್ ಕಾರುಗಳ ಮಾದರಿಯಂತೆ ಮಾಡಿಫೈಗೊಳಿಸುತ್ತಾರೆ. ಅದೇ ರೀತಿ ಹೋಂಡಾ ಸಿವಿಕ್ ಸೆಡಾನ್ ಅನ್ನು ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರಿನಂತೆ ಮಾಡಿಫೈಗೊಳಿಸಿದ ಉದಾಹರಣೆ ಇಲ್ಲಿದೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಡ್ರೀಮ್‌ಕಸ್ಟೋಮ್‌ಸಿಂಡಿಯಾ ಅವರು ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಹೋಂಡಾ ಸಿವಿಕ್ ಅನ್ನು ಮಾಡಿಫೈಗೊಳಿಸಿ ಅದರ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಕಾರಿನ ಹೆಸರಿನಲ್ಲಿರುವ ಎಸ್‌ವಿಜೆ ಎಂದರೆ, "ಸೂಪರ್‌ವೆಲೋಸ್ ಜೋಟಾ". ಸೂಪರ್‌ವೆಲೋಸ್ ಎಂದರೆ ಇಟಾಲಿಯನ್‌ನಲ್ಲಿ ಸೂಪರ್‌ಫಾಸ್ಟ್ ಆದರೆ ಜೋಟಾ ಎಂಬುದು ಲ್ಯಾಂಬೊರ್ಗಿನಿ ತಮ್ಮ ಟ್ರ್ಯಾಕ್ ಆವೃತ್ತಿ ಕಾರುಗಳಿಗೆ ನೀಡುವ ಹೆಸರಾಗಿದೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಅವೆಂಟಡಾರ್ ಎಸ್‌ವಿಜೆ ಸ್ಟ್ಯಾಂಡರ್ಡ್ ಅವೆಂಟಡಾರ್‌ಗಿಂತ ಹೆಚ್ಚು ಪವರ್ ಫುಲ್ ಆಗಿದೆ. ಇನ್ನು ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರಿನ ಆನ್ ರೋಡ್ ಬೆಲೆಯು ರೂ,9.5 ಕೋಟಿ ಯಾಗಿದೆ. ಇಷ್ಟು ದುಬಾರಿ ಕಾರನ್ನು ಖರೀದಿಸಲು ಸಾಧ್ಯವಾಗದ ಕಾರಣ ಅವರು ಸಾಮಾನ್ಯ ಹೋಂಡಾ ಸಿವಿಕ್ ಸೆಡಾನ್ ಕಾರನ್ನು ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಕಾರಿನ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾರೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಈ ಮಾಡಿಫೈಗೊಂಡ ಕಾರಿನಲ್ಲಿ ನೀಡಿರುವ ಎಲ್ಲಾ ಪ್ಯಾನೆಲ್ ಗಳು ಅವೆಂಟಡಾರ್ ಎಸ್‌ವಿಜೆಯಂತೆ ಕಾಣುವಂತೆ ಮಾಡುತ್ತದೆ. ಮುಂಭಾಗದ ಬಂಪರ್, ಬಾನೆಟ್, ಸ್ಪ್ಲಿಟರ್ ಮತ್ತು ಫೆಂಡರ್‌ಗಳೆಲ್ಲವೂ ಕಸ್ಟಮ್‌ನಿಂದ ಮಾಡಲ್ಪಟ್ಟವು, ಈ ಎಸ್‌ವಿಜೆಯಲ್ಲಿರುವಂತ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು ಮೂಲದಲ್ಲಿ ಕಂಡುಬರುವಂತೆಯೇ ಕಾಣುತ್ತವೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಈ ಕಾರಿನಲ್ಲಿ ಸಿಸ್ರಿಯನ್ ಗ್ಲಾಸ್ ಪಡೆಯುತ್ತದೆ ಆದರೆ ಎಸ್‌ವಿಜೆಯಲ್ಲಿ ಇಲ್ಲದಂತೆ ಫ್ರೇಮ್ ಅನ್ನು ಹಿಂಭಾಗದಲ್ಲಿ ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ ಎಕ್ಸಾಸ್ಟ್ ಪೈಪ್ ಗಳನ್ನು ಹೊಂದಿವೆ. ದೊಡ್ಡ ವ್ಹೀಲ್ ಅರ್ಚರ್ ಮತ್ತು ಇದರ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚಿಸಿದ್ದಾರೆ.

ಇನ್ನು ಕಾರಿನ ಒಳಭಾಗದಲ್ಲಿಯು ಕೂಡ ನವೀಕರಿಸಲಾಗಿದೆ. ಕಾರಿನ ಡ್ಯಾಶ್ ಬೋರ್ಡ್ ಮಧ್ಯದಲ್ಲಿ ಆಫ್ಟರ್ ಮಾರ್ಕೆಟ್ ಟಚ್‌ಸ್ಕ್ರೀನ್ ಮತ್ತು ಸ್ಪೋಕ್ ಸ್ಟಿಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಇಂಟಿರಿಯರ್ ಐಷಾರಾಮಿ ಆಗಿ ಕಾಣಲು ಕೆಲವು ನವೀಕರಣಗಳನ್ನು ನಡೆಸಿದ್ದಾರೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ಸೂಪರ್ ಕಾರಿನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಈ ಮಾಡಿಫೈಗೊಂಡ ಕಾರಿನ ಎಂಜಿನ್ ಬಗ್ಗೆ ಮಾಹಿತಿ ಇಲ್ಲ, ಆದರೆ ಈ ಕಾರಿನಲ್ಲಿ ಸಿವಿಕ್ ಎಂಜಿನ್ ಅನ್ನು ಹೊಂದಿರಬಹುದು. ನಿಜವಾದ ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರಿನಲ್ಲಿ 6.5 ಲೀಟರ್ ವಿ12 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 770 ಬಿಹೆಚ್‌ಪಿ ಪವರ್ ಮತ್ತು 720 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಐಎಸ್ಆರ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

Most Read Articles

Kannada
English summary
Honda Civic Modified Like A Lamborghini Aventador SVJ. Read In Kannada.
Story first published: Tuesday, July 6, 2021, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X