ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾಗಿರುವ ಹುವೈ, ಟೆಲಿಕಮ್ಯುನಿಕೇಷನ್ ಉಪಕರಣಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ಮಾರಾಟ ಮಾಡುವುದರಲ್ಲಿ ಹೆಚ್ಚು ಹೆಸರುವಾಸಿಯಾಗಿದೆ.

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಈ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಹುವೈ ಇದೀಗ ಹೊಸ ವಿಭಿನ್ನ ವಿಭಿನ್ನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ, ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಆಟೋ ಶೋನಲ್ಲಿ ಹ್ಯುವೈ ತನ್ನ ಮೊದಲ ಕಾರನ್ನು ಅನಾವರನಗೊಳಿಸಿದೆ. ಇದು ಎಲೆಕ್ಟ್ರಿಕ್ ಕಾರು ಆಗಿದ್ದು, ಇದಕ್ಕೆ ಎಸ್‌ಎಫ್5 ಎಂದು ಹೆಸರನ್ನು ಇಡಲಾಗಿದೆ. ಇದನ್ನು ಹ್ಯುವೈ ಕಂಪನಿಯು ಸೈರಸ್‌ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಈ ಹೊಸ ಎಲೆಕ್ಟ್ರಿಕ್ ಕಾರನ್ನು ‘ಸೆರೆಸ್' ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವುದು.

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಚೀನೀ ಟೆಕ್ ದೈತ್ಯ ಹುವೈ ಕಂಪನಿಯ ಸಿಇಒ ರಿಚರ್ಡ್ ಅವರು ಮಾತನಾಡಿ, ಎಲೆಕ್ಟ್ರಾನಿಕ್ಸ್ ಉದ್ಯಮದ ಜೊತೆ ವಾಹನ ಉದ್ಯಮದಲ್ಲಿಯು ನಾವು ಕಾಲಿಡುತ್ತಿದ್ದೇವೆ. ಭವಿಷ್ಯದಲ್ಲಿ ಪಾಲುದಾರರಿಗೆಯಲ್ಲಿ ನಾವು ಪ್ರಮುಖ ಸ್ಮಾರ್ಟ್ ಕಾರುಗಳನ್ನು ತಯಾರಿಸುತ್ತೇವೆ. ಚೀನಾದಾದ್ಯಂತ ನಮ್ಮ ವಾಹನ ಮಾರಾಟ ಜಾಲ ವಿಸ್ತರಿಸಲಿದ್ದೇವೆ ಎಂದು ಹೇಳಿದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಹುವೈ ಎಸ್‌ಎಫ್5 ಎಲೆಕ್ಟ್ರಿಕ್ ಕಾರು 4,700 ಎಂಎಂ ಉದ್ದ, 1,930 ಎಂಎಂ ಅಗಲ ಮತ್ತು 1,625 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು 2,875 ಎಂಎಂ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿದೆ.

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಎಸ್‌ಎಫ್5 ಎಲೆಕ್ಟ್ರಿಕ್ ಕಾರಿನಲ್ಲಿ ಸ್ವೆಪ್‌ಬ್ಯಾಕ್ ಹೆಡ್‌ಲೈಟ್‌ಗಳು ಮತ್ತು ಮೆಶ್ ಗ್ರಿಲ್, ವಿಶಿಷ್ಟವಾಗಿ ಕಾಣುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಫ್ಲಶ್-ಮೌಂಟೆಡ್ ಡೋರ್ ಹ್ಯಾಂಡಲ್‌ಗಳು ಮತ್ತು ಸ್ವಲ್ಪ ಕಾಂಪ್ಯಾಕ್ಟ್ ಗ್ರೀನ್ ಹೌಸ್ ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಇನ್ನು ಕಾರಿನ ಮೇಲ್ಭಾಗದಲ್ಲಿ ಸ್ಲೋಪಿಂಗ್ ರೂಫ್ ರೈಲ್ ಅನ್ನು ಹೊಂದಿದೆ. ಎಸ್‌ಎಫ್5 ಎಲೆಕ್ಟ್ರಿಕ್ ಕಾರಿನಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಇದ್ದು ಅದು ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಹುವೈ ಹೇಳಿದೆ.

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಇದರಲ್ಲಿ ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ. ಒಟ್ಟಾಗಿ 543 ಬಿಹೆಚ್‍ಪಿ ಪವರ್ ಮತ್ತು 820 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಇನ್ನು ಹೊಸ ಹುವೈ ಎಸ್‌ಎಫ್5 ಎಲೆಕ್ಟ್ರಿಕ್ ಕಾರು 4.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಹುವೈ ಎಸ್‌ಎಫ್5 ಎಲೆಕ್ಟ್ರಿಕ್ ಕಾರು ಕೇವಲ ಎಲೆಕ್ಟ್ರಿಕ್ ಚಾರ್ಜ್ ಮೂಲಕ ಮಾತ್ರ 180 ಕಿ.ಮೀ ವರೆಗೆ ಚಲಿಸುತ್ತದೆ.

ತನ್ನ ಮೊದಲ ಕಾರನ್ನು ಅನಾವರಣಗೊಳಿಸಿದ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ

ಒಟ್ಟು 1000 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹುವೈ ಹೇಳಿದೆ. ಇನ್ನು ಈ ಕಾರಿನಲ್ಲಿ ಆಟೋಮ್ಯಾಟಿಕ್ ಅಸಿಸ್ಟೆಡ್ ಡ್ರೈವಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ವೆಂಟಿಲೆಟಡ್ ಮತ್ತು ಮಸಾಜ್ ಸೀಟುಗಳೊಂದಿಗೆ ಹಲವಾರು ಅತ್ಯಾಧುನಿಕ ಪೀಚರ್ಸ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
Huawei Seres SF5 Electric Suv Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X