ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್'ನ ಜನಪ್ರಿಯ ಸಿ-ಟೈಪ್ ಕಾರು 70 ವರ್ಷಗಳನ್ನು ಪೂರೈಸಿದೆ. ಈ ಕಾರಿನ 70ನೇ ವಾರ್ಷಿಕೋತ್ಸವವನ್ನು ಆಚರಿಸಲು ಜಾಗ್ವಾರ್ ಕಂಪನಿಯು ಈ ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರಿನ 8 ಯೂನಿಟ್'ಗಳನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ.

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಮಾಹಿತಿಗಳ ಇಂಗ್ಲೆಂಡಿನ ಕೊವೆಂಟ್ರಿಯಲ್ಲಿರುವ ಕಂಪನಿಯ ಕ್ಲಾಸಿಕ್ ವರ್ಕ್ಸ್ ಘಟಕದಲ್ಲಿ ಈ ಕಾರುಗಳನ್ನು ಉತ್ಪಾದಿಸಲಾಗುವುದು. ಜಾಗ್ವಾರ್'ನ ಹೊಸ ಸಿ-ಟೈಪ್ ಕಾರು 1953ರಲ್ಲಿ ತಯಾರಾದ ಮಾದರಿಯನ್ನು ಆಧರಿಸಿದೆ. ಈ ಕಾರಿನಲ್ಲಿ 3.4-ಲೀಟರಿನ ಸ್ಟ್ರೈಟ್ ಸಿಕ್ಸ್ ಎಂಜಿನ್ ಬಳಸಲಾಗುವುದು.

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಟ್ರಿಪಲ್ ವೆಬರ್ 40 ಡಿ ಸಿಒ 3 ಕಾರ್ಬ್ಯುರೇಟರ್ ಅನ್ನು ಬಳಸುವ ಈ ಈ ಎಂಜಿನ್ 220 ಬಿಹೆಚ್'ಪಿ ಪವರ್ ಉತ್ಪಾದಿಸುತ್ತದೆ. ಜಾಗ್ವಾರ್ ಕಂಪನಿಯು ಈ ಕಾರಿನಲ್ಲಿ ಬ್ರೇಕಿಂಗ್'ಗಾಗಿ ಡಿಸ್ಕ್ ಬ್ರೇಕ್ ನೀಡಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಈ ಕಾರನ್ನು ಉತ್ಪಾದಿಸಲು ಕಂಪನಿಯು ಆಧುನಿಕ ತಂತ್ರಜ್ಞಾನವನ್ನು ಬಳಸಲಿದೆ. 3 ಡಿ ಸಿಎಡಿ ಹೊಂದಿರುವ ಎಂಜಿನಿಯರಿಂಗ್ ರೇಖಾಚಿತ್ರಗಳು ಹಾಗೂ ಕಂಪನಿಯ ಮೂಲ ಸಿ-ಟೈಪ್ ಡೆವಲಪ್‌ಮೆಂಟ್ ತಂಡದ ದಾಖಲೆಗಳನ್ನು ನಿಖರವಾದ ಉತ್ಪಾದನಾ ಮಾದರಿಯನ್ನು ಉತ್ಪಾದಿಸಲು ಬಳಸಲಾಗುತ್ತದೆ.

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಸಿ-ಟೈಪ್ 1951ರಲ್ಲಿ ಲೆ ಮ್ಯಾನ್ಸ್ 24 ಅವರ್ಸ್ ಪ್ರಶಸ್ತಿ ಗೆದ್ದ ಜಾಗ್ವಾರ್ ಕಂಪನಿಯ ಮೊದಲ ಕಾರು. ಈ ಕಾರು ಆ ಸ್ಪರ್ಧೆಯಲ್ಲಿ ಗೆದ್ದಿದ್ದು ಮಾತ್ರವಲ್ಲದೇ ಆ ರೇಸಿಗೆ ಸಂಬಂಧಿಸಿದ ವೇಗದ ಹಾಗೂ ದೂರದ ದಾಖಲೆಗಳನ್ನು ಮುರಿಯಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಸ್ಪರ್ಧೆಯಲ್ಲಿ ಸಿ-ಟೈಪ್ 9 ಕಾರು ಲ್ಯಾಪ್‌ಗಳ ಮುನ್ನಡೆಯೊಂದಿಗೆ ಗೆದ್ದರೆ, ರನ್ನರ್-ಅಪ್ ಕಾರು ಸಹ ಸಿ-ಟೈಪ್ ಆಗಿತ್ತು ಎಂಬುದು ವಿಶೇಷ. ರನ್ನರ್ ಅಪ್ ಕಾರು ಲ್ಯಾಪ್ ದಾಖಲೆಯನ್ನು 6 ಸೆಕೆಂಡುಗಳಷ್ಟು ಮುರಿಯಿತು.

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

1953ರಲ್ಲಿ ಈ ಕಾರಿಗೆ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಯಿತು. ಸಿ-ಟೈಪ್ ಕಾರು ಲೆ ಮ್ಯಾನ್ಸ್ 24 ಅವರ್ಸ್ ಸ್ಪರ್ಧೆಯಲ್ಲಿ 1, 2 ಹಾಗೂ 4ನೇ ಸ್ಥಾನಗಳನ್ನು ಗಳಿಸಿತು. ಈ ಕಾರು ಹಿಂದಿನ ದಾಖಲೆಯಾಗಿದ್ದ 96.7 ಎಂಪಿಹೆಚ್ ವೇಗವನ್ನು 105.85 ಎಂಪಿಹೆಚ್ ವೇಗದ ಮೂಲಕ ಮುರಿಯಿತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಆ ಸ್ಪರ್ಧೆಯಲ್ಲಿ ಜಾಗ್ವಾರ್ ಸಿ-ಟೈಪ್ ಕಾರ್ ಅನ್ನು ಡಂಕನ್ ಹ್ಯಾಮಿಲ್ಟನ್ ಹಾಗೂ ಟೋನಿ ರೌಲೆಟ್ ಚಾಲನೆ ಮಾಡಿದ್ದರು. ಈ ಮೂಲಕ ಲೆ ಮ್ಯಾನ್ಸ್ 24 ಅವರ್ಸ್ ರೇಸ್'ನಲ್ಲಿ ಸರಾಸರಿ 100 ಎಂಪಿಹೆಚ್ ವೇಗದಲ್ಲಿ ಅಥವಾ ಗಂಟೆಗೆ ಸುಮಾರು 160 ಕಿ.ಮೀ ವೇಗದಲ್ಲಿ ಚಲಿಸಿ ಗೆದ್ದ ಮೊದಲ ವಿಜೇತರಾದರು.

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಜಾಗ್ವಾರ್ ಕಂಪನಿಯು ತನ್ನ ಐ - ಪೇಸ್ ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್'ಗಳನ್ನು ಆರಂಭಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಳೆಯ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಅನ್ನು ರಿಮೇಕ್ ಮಾಡಿ ಮಾರಾಟ ಮಾಡಲಿದೆ ಜಾಗ್ವಾರ್

ಈ ಕಾರನ್ನು ಭಾರತಕ್ಕೆ ಸಿಬಿಯು ಮೂಲಕ ತರಲಾಗುವುದು. ಕಂಪನಿಯ ಪ್ರಕಾರ, ಈ ಎಲೆಕ್ಟ್ರಿಕ್ ಕಾರಿನ ವಿತರಣೆಯು 2021ರ ಮಾರ್ಚ್'ನಿಂದ ಆರಂಭವಾಗಲಿದೆ. ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರ್ ಅನ್ನು ಎಸ್, ಎಸ್ಇ ಹಾಗೂ ಹೆಚ್ಎಸ್ಇ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

Most Read Articles

Kannada
English summary
Jaguar company to remake its classic racing car and sell. Read in Kannada.
Story first published: Saturday, January 30, 2021, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X