ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ದಕ್ಷಿಣ ಕೊರಿಯಾದ ಕಿಯಾ ಕಂಪನಿ ನಿರ್ಮಾಣದ ಇವಿ6 ಕ್ರಾಸ್ ಓವರ್ ಎಲೆಕ್ಟ್ರಿಕ್ ಎಸ್‌‌ಯುವಿಯು ಬಿಡುಗಡೆಗೂ ಮುನ್ನವೇ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, 2022ರ ಆರಂಭದಲ್ಲಿ ಗ್ರಾಹಕರ ಕೈಸೇರಲು ಸಿದ್ದವಾಗಿರುವ ಹೊಸ ಕಾರು ಇದೀಗ ಗಿನ್ನಿಸ್ ದಾಖಲೆವೊಂದನ್ನು ತನ್ನದಾಗಿಸಿಕೊಂಡಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಹೌದು, ಕಿಯಾ ನಿರ್ಮಾಣದ ಹೊಸ ಇವಿ6 ಎಲೆಕ್ಟ್ರಿಕ್ ಕಾರು ಮಾದರಿಯು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಹೊಸ ಕಾರು ಇದೀಗ ಅಮೆರಿಕದಲ್ಲಿ ಟೆಸ್ಲಾ ಮಾಡೆಲ್ ಎಸ್ ಕಾರಿನ ದಾಖಲೆಯೊಂದನ್ನು ಹಿಂದಿಕ್ಕಿ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಅತಿ ಕಡಿಮೆ ಅವಧಿಯಲ್ಲಿ ಇವಿ6 ಮಾದರಿಯು ನ್ಯೂಯಾರ್ಕ್‌ನ ಪೂರ್ವ ಕರಾವಳಿಯಿಂದ ಲಾಸ್ ಏಂಜಲೀಸ್‌ನ ಪಶ್ಚಿಮ ಕರಾವಳಿಗೆ ಪ್ರಯಾಣಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಈ ಗರಿಷ್ಠ ದೂರವನ್ನು ಕ್ರಮಿಸಲು ಇವಿ6 ಒಟ್ಟು 7 ದಿನಗಳನ್ನು ತೆಗೆದುಕೊಂಡಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಈ ಹಿಂದೆ ಯಾವುದೇ ಎಲೆಕ್ಟ್ರಿಕ್ ಕಾರು ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಗರಿಷ್ಠ ದೂರ ಕ್ರಮಿಸಿಲ್ಲ ಎನ್ನಲಾಗಿದ್ದು, ಟೆಸ್ಲಾ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರಿನ ದಾಖಲೆಯನ್ನು ಇದೀಗ ಕಿಯಾ ಇವಿ6 ಹಿಂದಿಕ್ಕಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

2015ರಲ್ಲಿ ಟೆಸ್ಲಾ ಮಾಡೆಲ್ ಎಸ್ ಮಾದರಿಯು ಕೂಡಾ ನ್ಯೂಯಾರ್ಕ್‌ನ ಪೂರ್ವ ಕರಾವಳಿಯಿಂದ ಲಾಸ್ ಏಂಜಲೀಸ್‌ನ ಪಶ್ಚಿಮ ಕರಾವಳಿಗೆ ತಲುಪಲು 12 ಗಂಟೆ, 48 ನಿಮಿಷಗಳು ಮತ್ತು 19 ಸೆಕೆಂಡುಗಳ ಚಾರ್ಜಿಂಗ್ ಸಮಯ ತೆಗೆದುಕೊಳ್ಳುವ ಮೂಲಕ ಎಂಟು ದಿನಗಳ ಕಾಲ ಪ್ರಯಾಣಿಸಿ ಗುರಿತಲುಪಿತ್ತು. ಇದೀಗ ಕಿಯಾ ಇವಿ6 ಕಾರು 7 ಗಂಟೆ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಕೇವಲ 7 ದಿನಗಳಲ್ಲಿ ಗುರಿತಲುಪುವ ಮೂಲಕ ಹೊಸ ಗಿನ್ನಿಸ್ ದಾಖಲೆಗೆ ಕಾರಣವಾಗಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಜೊತೆಗೆ ಹೊಸ ಕಾರು ನ್ಯೂ ಎನರ್ಜಿ ವಿಭಾಗದಲ್ಲಿ ಜರ್ಮನ್ ನಿರ್ಮಾಣದ ಪ್ರಮುಖ ಎಲೆಕ್ಟ್ರಿಕ್ ಕಾರುಗಳನ್ನು ಹಿಂದಿಕ್ಕಿರುವ ಮೂಲಕ ಪ್ರತಿಷ್ಠಿತ 2022ರ ಜರ್ಮನ್ ಪ್ರಿಮಿಯಂ ಕಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದು, ಹೊಸ ಕಾರು ಯುರೋಪ್ ಮತ್ತು ಅಮೆರಿಕದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವುವಾಗಲೇ ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿರುವುದು ಹೊಸ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಳವಾಗಲಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಸದ್ಯ ಕಿಯಾ ಇವಿ6 ಮಾದರಿಯು ಅಮೆರಿಕ ಮತ್ತು ಯುರೋಪಿನ ಕೆಲವೇ ರಾಷ್ಟ್ರಗಳಲ್ಲಿ ಬಿಡುಗಡೆಗೆ ಸಿದ್ದುವಾಗಿದ್ದು, ಹೊಸ ಕಾರಿನ ವಿತರಣೆಯು ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿರುವ ಇವಿ6 ಮಾದರಿಯಲ್ಲಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಮಾಣ ಚಾರ್ಜ್ ಮಾಡಬಹುದಾಗಿದ್ದು, 77.4 kWh ಹೈ ವೋಲ್ಟೆಜ್ ಬ್ಯಾಟರಿಯೊಂದಿಗೆ ಅತ್ಯುತ್ತಮ ಫರ್ಪಾಮೆನ್ಸ್ ಮಾದರಿಯಾಗಿ ಗುರುತಿಸಿಕೊಂಡಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಇವಿ6 ಕ್ರಾಸ್ ಓವರ್ ಎಸ್‌ಯುವಿ ಮಾದರಿಯು ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, 576-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಹೊಸ ಕಾರು 400ವಿ ಮತ್ತು 800ವಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಸೂಪರ್ ಫಾಸ್ಟ್ ಚಾರ್ಜರ್ ಮೂಲಕ ಕೇವಲ 5 ನಿಮಿಷ ಚಾರ್ಜ್ ‌ಮಾಡಿದರೆ 112 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, 18 ನಿಮಿಷ ಚಾರ್ಜ್ ಮಾಡಿದ್ದಲ್ಲಿ 330 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು 50 ನಿಮಿಷ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದಲ್ಲಿ 528 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದೆ. ಹೊಸ ಕಾರಿನಲ್ಲಿ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಿಂದಾಗಿ ತುಸು ದುಬಾರಿಯಾಗಿದ್ದು, ಈ ಹೊಸ ಕಾರು ಸದ್ಯಕ್ಕೆ ಅಮೆರಿಕ ಮತ್ತು ಯುರೋಪಿನ ಕೆಲವೇ ಕೆಲವು ರಾಷ್ಟ್ರಗಳಿಗಾಗಿ ಮಾತ್ರ ಅಭಿವೃದ್ದಿಪಡಿಸಲಾಗಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.

ಬಿಡುಗಡೆಗೂ ಮುನ್ನವೇ ಗಿನ್ನಿಸ್ ದಾಖಲೆಗೆ ಕಾರಣವಾಯ್ತು ಕಿಯಾ ಇವಿ6 ಕಾರ್ಯಕ್ಷಮತೆ

ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸದ್ಯ ಜಾಗತಿಕವಾಗಿ ಗುರುತಿಸಿಕೊಂಡಿರುವ ಅಮೆರಿಕದ ಟೆಸ್ಲಾ ಕಂಪನಿಗೆ ಪೈಪೋಟಿಯಾಗಿ ಕಿಯಾ ತನ್ನ ಹೊಸ ಇವಿ6 ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ6 ಮಾದರಿಯು ಪ್ರತಿಸ್ಪರ್ಧಿ ಟೆಸ್ಲಾ ಇವಿ ಕಾರುಗಳಿಂತಲೂ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

Most Read Articles

Kannada
English summary
Kia ev6 electric suv enters guinness world record details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X