ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ ಇಂಡಿಯಾ(Kia India) 2021ರ ನವೆಂಬರ್ ತಿಂಗಳ ಮಾಸಿಕ ಮಾರಾಟ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 14,214 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಕಂಪನಿಯ ಕಳೆದ ವರ್ಷದ ನವೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.32.3 ರಷ್ಟು ಕುಸಿತವಾಗಿದೆ. ಇನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ 16,331 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.13 ರಷ್ಟು ಕುಸಿತವನ್ನು ಕಂಡಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ. ಇದಕ್ಕೆ ಕೊರೋನಾ, ಚಿಪ್ ಕೊರತೆ ಮತ್ತು ಇತರೆ ಹಲವಾರು ಕಾರಣಗಳಿವೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಸೊನೆಟ್ ಮಾರಾಟ ಗಣನೀಯವಾಗಿ ಕುಸಿದಿದೆ. 2020ರ ನವೆಂಬರ್ ತಿಂಗಳಿನಲ್ಲಿ ಸೊನೆಟ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯ 11,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ತಿಂಗಳಿನಲ್ಲಿ ಸೊನೆಟ್ ಮಾದರಿಯ ಕೇವಲ 4719 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಕಳೆದ ತಿಂಗಳು ಕಿಯಾ ಕಂಪನಿಯು ಅತಿ ಹೆಚ್ಚು ಮಾರಾಟ ಮಾಡಿದ ಮಾದರಿ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಈ ಮಾದರಿಯ 8859 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಕಳೆದ ತಿಂಗಳು ಕಾರ್ನಿವಲ್ ಎಂಪಿವಿ ಮಾದರಿಯ 636 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಇಂಡಿಯಾ ಕಂಪನಿಯು 2022ರ ಅವಧಿಯಲ್ಲಿ ಮೂರು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.ಹೊಸ ಕಾರುಗಳಲ್ಲಿ ಬಹುನೀರಿಕ್ಷಿತ ಎಂಪಿವಿ) ಮಾದರಿಯ ಸಹ ಸೇರಿದೆ. ಹೊಸ ಕಾರು ಇದೇ ತಿಂಗಳು 16ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುತ್ತಿದೆ. ಈ ಹೊಸ ಕಾರು ಅನಾವರಣಕ್ಕೂ ಕಂಪನಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕಾರಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಈ ಕಿಯಾ ಹೊಸ ಕಾರು ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಕಾರು ಅನಾವರಣಕ್ಕೂ ಮುನ್ನ ಕಿಯಾ ಕಂಪನಿಯು ಈಗಾಗಲೇ ಹೊಸ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟ್ ಅನ್ನು ಪ್ರಾರಂಭಿಸಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಈ ಹೊಸ ಕೆರೆನ್ಸ್ ಮಾದರಿಯು ಮಧ್ಯಮ ಕ್ರಮಾಂಕದ ಎಂಪಿವಿ ಮಾದರಿಯಾಗಿದೆ. ಈ ಹೊಸ ಕಾರನ್ನು ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಬೆಲೆಯೊಂದಿಗೆ ಬಿಡುಗಡೆಯಾಗಬಹುದು.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಇನ್ನು ಕಿಯಾ ಕಂಪನಿಯು 2040ರ ವೇಳೆಗೆ ಸಂಪೂರ್ಣವಾಗಿ ಇವಿ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ನಿರ್ಣಯ ಕೈಗೊಂಡಿದೆ. ಹೊಸ ಗುರಿಸಾಧನೆಗಾಗಿ ಈಗಿನಿಂದಲೇ ಹೊಸ ಯೋಜನೆಗಳತ್ತ ಗಮನಹರಿಸಿದೆ. 2025ರ ವೇಳೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಭಾರತದಲ್ಲೂ ಕಿಯಾ ಕಂಪನಿಯು ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಸೊಲ್, ನಿರೋ ಮತ್ತು ಇವಿ6 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಸೀಮಿತ ಮಾರುಕಟ್ಟೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಪ್ರಸ್ತುತ ಇವಿ ಮಾದರಿಗಳು ಶೀಘ್ರದಲ್ಲೇ ವಿವಿಧ ರಾಷ್ಟ್ರಗಳಲ್ಲಿ ಮಾರಾಟವಾಗಲಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಚಾರ್ಜಿಂಗ್ ಸೌಲಭ್ಯಗಳ ಆಧಾರದ ಮೇಲೆ ಎಲೆಕ್ಟ್ರಿಕ್ ವಾಹನ ಮಾರಾಟವನ್ನು ವಿಸ್ತರಿಸುತ್ತಿರುವ ಕಾರು ಕಂಪನಿಗಳು ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಎದುರು ನೋಡುತ್ತಿದ್ದು, 2030ರ ವೇಳೆಗೆ ಭಾರತದಲ್ಲಿ ಸುಮಾರು ಶೇ.60 ರಷ್ಟು ಇವಿ ಮಾರಾಟವು ಹೆಚ್ಚಳವಾಗುವ ನೀರಿಕ್ಷೆಯಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಇಂಡಿಯಾ ಕಂಪನಿಯ ಮಾರಾಟದ ದೊಡ್ಡ ಭಾಗವನ್ನು ಅದರ ಎಸ್‍ಯುವಿಗಳಾದ ಸೆಲ್ಟೋಸ್ ಮತ್ತು ಸೊನೆಟ್‌ನಿಂದ ಪಡೆದುಕೊಂಡಿದೆ .ಸೆಲ್ಟೋಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾದ ಮೊದಲ ಕೊಡುಗೆಯಾಗಿದೆ, ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 3 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ. ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕವಾಗಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಬೇಡಿಕೆ ಹೆಚ್ಚುತ್ತಿದೆ. ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಯು ಅದರ ಒಟ್ಟಾರೆ ಮಾರಾಟದ ಶೇಕಡಾ 66 ರಷ್ಟಿದೆ. ಶೇಕಡಾ 32 ರಷ್ಟು ಮಾರಾಟವು ಕಿಯಾ ಸೋನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವಾಗಿದೆ. ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇದೀಗ ಕಿಯಾ ಸೆಲ್ಟೋಸ್ ಎಸ್‍ಯುವಿಯ ಎರಡು ಲಕ್ಷ ಯೂನಿಟ್‌ಗಳನ್ನು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ನವೆಂಬರ್ ತಿಂಗಳಿನಲ್ಲಿ 14,214 ಕಾರುಗಳನ್ನು ಮಾರಾಟ ಮಾಡಿದ Kia India

ಇನ್ನು ಕಿಯಾ ಇಂಡಿಯಾ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಆದರೆ ಮುಂದಿನ ದಿನಗಳಲ್ಲಿ ಚಿಪ್ ಸಮಸ್ಯೆಯನ್ನು ಪರಿಹರಿಸಿ ಮಾರಾಟವನ್ನು ಹೆಚ್ಚಿಸಬಹುದು. ಇನ್ನು ಮುಂದಿನ ದಿನಗಳಲ್ಲಿ ಕಿಯಾ ಕಾರುಗಳ ಮಾರಾಟವು ಹೆಚ್ಚಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Kia india sold 14214 units in november 2021 details
Story first published: Thursday, December 2, 2021, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X