ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಆಫ್ ರೋಡ್ ಎಸ್‌ಯುವಿ ಕಾರು ಮಾದರಿಯಾದ ಡಿಫೆಂಡರ್ ಮಾದರಿಯನ್ನು ಭಾರತದಲ್ಲಿ ಕಳೆದ ವರ್ಷವಷ್ಟೇ ಬಿಡುಗಡೆ ಮಾಡಿತ್ತು. ಆರಂಭದಲ್ಲಿ ಹೊಸ ಕಾರನ್ನು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಪರಿಚಯಿಸಿದ್ದ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಡೀಸೆಲ್ ಮಾದರಿಯಲ್ಲೂ ಬಿಡುಗಡೆ ಮಾಡಿದೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಐಷಾರಾಮಿ ಸೌಲಭ್ಯಗಳೊಂದಿಗೆ ಆಫ್ ರೋಡ್ ಚಾಲನೆಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಲ್ಯಾಂಡ್ ರೋವಲ್ ಡಿಫೆಂಡರ್ ಎಸ್‌ಯುವಿ ಸದ್ಯ ಐಷಾರಾಮಿ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಗ್ರಾಹಕರು ಇನ್ಮುಂದೆ ಹೊಸ ಕಾರನ್ನು ತಮ್ಮ ಬೇಡಿಕೆ ಅನುಸಾರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿ ಮಾಡಬಹುದಾಗಿದೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಡಿಫೆಂಡರ್ ಹೊಸ ಡೀಸೆಲ್ ಕಾರು ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 94.36 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 1.08 ಕೋಟಿ ಬೆಲೆ ಹೊಂದಿದ್ದು, ಎಸ್ಇ, ಹೆಚ್ಎಸ್ಇ, ಹೆಚ್-ಡೈನಾಮಿಕ್ ಹೆಚ್ಎಸ್ಇ ಮತ್ತು ಎಕ್ಸ್ ವೆರಿಯೆಂಟ್ ಹೊಂದಿದೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಭಾರತದಲ್ಲಿ ಸದ್ಯಕ್ಕೆ ಡಿಫೆಂಡರ್ 90 ಮತ್ತು ಡಿಫೆಂಡರ್ 110 ಮಾರಾಟ ಮಾಡುತ್ತಿರುವ ಲ್ಯಾಂಡ್ ರೋವರ್ ಕಂಪನಿಯು ಐಷಾರಾಮಿ ಸೌಲಭ್ಯಗಳೊಂದಿಗೆ ಆಫ್ ರೋಡ್ ಚಾಲನೆಗಾಗಿಯೇ ವಿಶೇಷವಾಗಿ ಅಭಿವೃದ್ದಿಗೊಳಿಸಿದೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಡಿಫೆಂಡರ್ ಆವೃತ್ತಿಯ ಪೆಟ್ರೋಲ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 73.91 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.90.43 ಲಕ್ಷ ಬೆಲೆ ಹೊಂದಿದ್ದು, ಎಂಜಿನ್ ಹೊರತಾಗಿ ಡೀಸೆಲ್ ಮಾದರಿಯಲ್ಲಿ ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಕಂಪನಿಯು ಡಿಫೆಂಡರ್ ಹೊಸ ಡೀಸೆಲ್ ಮಾದರಿಯಲ್ಲಿ 3.0-ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಜೋಡಣೆ ಮಾಡಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 298-ಬಿಎಚ್‌ಪಿ ಮತ್ತು 650 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಡಿಫೆಂಡರ್ ಎಸ್‌ಯುವಿಯ ಪೆಟ್ರೋಲ್ ಮಾದರಿಯು 2.0-ಲೀಟರ್ ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಜೋಡಣೆ ಹೊಂದಿದ್ದು, ಈ ಎಂಜಿನ್ 300 ಬಿಹೆಚ್‌ಪಿ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಎಂಜಿನ್‌ನಲ್ಲಿ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದ್ದು, ಎಂಜಿನ್ ಹೊರತುಪಡಿಸಿ ಬಹುತೇಕ ಫೀಚರ್ಸ್‌ಗಳು ಎರಡು ಮಾದರಿಯಲ್ಲೂ ಒಂದೇ ಆಗಿವೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಕಂಪನಿಯು ಡಿಫೆಂಡರ್ 90 ಮಾದರಿಯನ್ನು 3 ಡೋರ್ ಸೌಲಭ್ಯದೊಂದಿಗೆ ಮತ್ತು ಡಿಫೆಂಡರ್ 110 ಮಾದರಿಯನ್ನು 5 ಡೋರ್ ಸೌಲಭ್ಯದೊಂದಿಗೆ ಮಾರಾಟ ಮಾಡುತ್ತಿದ್ದು, ಸ್ಟೈಲಿಷ್ ಜೊತೆ ಬಲಿಷ್ಠ ಎಸ್‌ಯುವಿಯಾಗಿರುವ ಡಿಫೆಂಡರ್‌ನಲ್ಲಿ ಮುಂಭಾಗದಲ್ಲಿ ಡಿಆರ್‌ಎಲ್‌ ಎಲ್‌ಇಡಿ ಹೆಡ್‌ಲೈಟ್, ಟಾಪ್-ಎಂಡ್ ಟ್ರಿಮ್ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್, ಬಂಪರ್ ಕೆಳಗೆ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲೈಟ್ ಗಳನ್ನು ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಈ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್, ದೊಡ್ಡದಾದ ಪನೋರಾಮಿಕ್ ಸನ್‌ರೂಫ್, ಸೈಡ್ ಆಲ್ಪೈನ್ ಲೈಟ್ ವಿಂಡೋಗಳನ್ನು ಹೊಂದಿದೆ. ಡಿಫೆಂಡರ್ ಎಸ್‌ಯುವಿ ಮೂರು ರೀತಿಯ ಇಂಟಿರಿಯರ್ ಬಣ್ಣಗಳನ್ನು ಹೊಂದಿದೆ. ಪ್ಯಾಂಗಿಯಾ ಗ್ರೀನ್ ಬಣ್ಣವು ಕಪ್ಪಾದ ಇಂಟಿರಿಯರ್ ಹೊಂದಿದ್ದರೆ, ಮತ್ತೊಂದು ಲೈಟ್ ಕ್ರೀಮ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ.

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಎಕ್ಸ್‌ಟಿರಿಯರ್ ನಲ್ಲಿ 360 ಡಿಗ್ರಿಯ ಆರು ಕ್ಯಾಮೆರಾ, ಸೆನ್ಸಾರ್ ಗಳಿವೆ. ಐಆರ್ ವಿಎಂ ಹಿಂದೆ ಒಂದು ಕ್ಯಾಮೆರಾ ಇದ್ದು, ಈ ಕ್ಯಾಮರಾ ಆಕ್ಟೀವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯ ನಿರ್ವಹಿಸಿದರೆ, ಐಆರ್ ವಿಎಂನಲ್ಲಿ (ಸ್ವಿಚ್ ಮೂಲಕ) ವೀಡಿಯೊವನ್ನು ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿಯೂ ಕ್ಯಾಮೆರಾ ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಡಿಫೆಂಡರ್ ಎಸ್‌ಯುವಿ ಕಾರಿನ ಡೀಸೆಲ್ ವರ್ಷನ್ ಬಿಡುಗಡೆ ಮಾಡಿದ ಲ್ಯಾಂಡ್ ರೋವರ್

ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ಕಾರು 5,018-ಎಂಎಂ ಉದ್ದ, 2,105-ಎಂಎಂ ಅಗಲ ಮತ್ತು 1,967-ಎಂಎಂ ಎತ್ತರವನ್ನು ಹೊಂದಿದ್ದು, ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್‌ನೊಂದಿಗೆ 218-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಈ ಮೂಲಕ ಆಫ್ ರೋಡ್ ಕೌಶಲ್ಯತೆಯಲ್ಲಿ ಎದುರಾಳಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ಹೊಸ ಕಾರು ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ ಒದಗಿಸುವಲ್ಲಿ ಯಶಸ್ವಿಯಾಗಿದೆ.

Most Read Articles

Kannada
English summary
Land Rover Defender Diesel Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X