ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಲ್ಯಾಂಡ್ ರೋವರ್ ಕ್ಲಾಸಿಕ್ 2021ರ ಕ್ಲಾಸಿಕ್ ಕ್ಯಾಮೆಲ್ ಟ್ರೋಫಿ ಲ್ಯಾಂಡಿಸ್ ಎಂಬ ವಿಶೇಷ ಸ್ಪರ್ಧೆಗಾಗಿ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ವಾಹನವನ್ನು ಅನಾವರಣಗೊಳಿಸಿದೆ. ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಮಾದರಿಯನ್ನು ಸೀಮಿತ ಸಂಖ್ಯೆಯಲ್ಲಿ ಉತ್ಪದಿಸಲಾಗುತ್ತದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಡಿಫೆಂಡರ್ ಹಳೆಯ ಡಿಫೆಂಡರ್ ಅನ್ನು ಆಧರಿಸಿ ಮರು-ವಿನ್ಯಾಸಗೊಳಿಸಿದ ಡಿಫೆಂಡರ್ ವರ್ಕ್ಸ್ ವಿ8 ಲ್ಯಾಂಡ್ ರೋವರ್ ಕ್ಲಾಸಿಕ್ ಅಭಿವೃದ್ಧಿಪಡಿಸಿದೆ. ಟ್ರೋಫಿ ವಾಹನಗಳು ಆಫ್-ರೋಡ್ ಬಳಕೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸುವುದರ ಜೊತೆಗೆ ಹೆಚ್ಚುವರಿ ನವೀಕರಣಗಳನ್ನು ಹೊಂದಿದೆ. 90 ಮತ್ತು 110 ಸ್ಟೇಷನ್ ವ್ಯಾಗನ್ ಬಾಡಿ ವಿನ್ಯಾಸಗಳ ಮಿಶ್ರಣದಲ್ಲಿ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿಯನ್ನು ವಿನ್ಯಾಸಗೊಳಿಸಿದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಎಸ್‍ಯುವಿಯಲ್ಲಿ 16 ಇಂಚಿನ ಸ್ಟೀಲ್ ವ್ಹೀಲ್ ಗಳೊಂದಿಗೆ ಹೊಂದಿಕೆಯಾಗುವ ವಿಶಿಷ್ಟವಾದ ಈಸ್ಟ್ನರ್ ಹಳದಿ ಬಣ್ಣದ ಬಣ್ಣವನ್ನು ನೀಡಿದೆ. ಇನ್ನು ವ್ಹೀಲ್ ಅರ್ಚಾರ್, ಬಾನೆಟ್ ಮತ್ತು ಹಿಂಭಾಗದ ಡೋರ್ ಮೇಲೆ ನಾರ್ವಿಕ್ ಬ್ಲಾಕ್ ಅನ್ನು ಹೊಂದಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಹೆರಿಟೇಜ್ ಫ್ರಂಟ್ ಗ್ರಿಲ್, ಅನನ್ಯ ಲ್ಯಾಂಡ್ ರೋವರ್ ಟ್ರೋಫಿ ಬ್ಯಾಡ್ಜಿಂಗ್ ಮತ್ತು ಈವೆಂಟ್ ಪಾಲ್ಗೊಳ್ಳುವಿಕೆಯ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಎಸ್‍ಯುವಿ 5-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 498 ಬಿಹೆಚ್‌ಪಿ ಪವರ್ ಮತ್ತು 515 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಇನ್ನು ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಎಸ್‍ಯುವಿಯಲ್ಲಿ ಸ್ಟೀರಿಂಗ್ ಮತ್ತು ಬ್ರೇಕಿಂಗ್ ಪ್ಯಾಕೇಜ್‌ಗಳನ್ನು ಸಹ ಪಡೆಯುತ್ತದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಇನ್ನು ಈ ಆಫ್-ರೋಡರ್ ನಲ್ಲಿ ಹೆಚ್ಚುವರಿ ಆಲ್-ಟೆರೈನ್ ಕಿಟ್‌ನಲ್ಲಿ ಫ್ರಂಟ್ ವಿಂಚ್, ಮಲ್ಟಿ-ಪಾಯಿಂಟ್ ಎಕ್ಸ್‌ಪೆಡಿಶನ್ ಕೇಜ್, ರೂಫ್ ರ್ಯಾಕ್, ಅಂಡರ್ಬಾಡಿ ಪ್ರೊಟೆಕ್ಷನ್, ಎ-ಬಾರ್, ಎಲ್ಇಡಿ ಸ್ಪಾಟ್‌ಲೈಟ್‌ಗಳು ಮತ್ತು ಮಡ್ ಟೆರೆಯೆನ್ ಟಯರ್ ಗಳಿವೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಇನ್ನು ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಆಫ್-ರೋಡರ್ ಒಳಭಾಗದಲ್ಲಿ ರೆಕಾರೊ ಸ್ಪೋರ್ಟ್ಸ್ ಸೀಟುಗಳು, ಕಾಂಟ್ರಾಸ್ಟ್ ಮತ್ತು ಎಲಿಯಟ್ ಬ್ರೌನ್ ಅವರ ಬೆಸ್ಪೋಕ್ ಲ್ಯಾಂಡ್ ರೋವರ್ ಟ್ರೋಫಿ ಕ್ಲಾಕ್ ಮಾದರಿಯ ವಿಂಡ್ಸರ್ ಲೆದರ್ ಅಂಶಗಳನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ

ಇನ್ನು ಇದರಲ್ಲಿ 4x4 ಸಿಸ್ಟಂ, ಸಂಯೋಜಿತ ನ್ಯಾವಿಗೇಷನ್ ಮತ್ತು ಮೊಬೈಲ್ ಕನೆಕ್ಟಿವಿಟಿಯೊಂದಿಗೆ ಲ್ಯಾಂಡ್ ರೋವರ್ ಕ್ಲಾಸಿಕ್‌ನ ಕ್ಲಾಸಿಕ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಸಹ ಅಳವಡಿಸಲಾಗಿದೆ. ಈ ಡಿಫೆಂಡರ್ ವರ್ಕ್ಸ್ ವಿ8 ಟ್ರೋಫಿ ಮಾದರಿಯು ಅಸಾಧಾರಣ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Land Rover Defender Works V8 Trophy Revealed. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X